Advertisement

“ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ದಾಖಲೆಯಾದ ಎಂ.ವಿ.ಎಂ ಶಾಲೆ’

08:55 PM Oct 18, 2019 | Lakshmi GovindaRaju |

ದೇವನಹಳ್ಳಿ: ಮಕ್ಕಳಲ್ಲಿ ಕೌಶಾಲ್ಯಭಿವೃದ್ಧಿ ಹೆಚ್ಚಿಸಲು ಚಿತ್ರಕಲೆಯ ಮೂಲಕ ಅವರಲ್ಲಿರುವ ಪ್ರತಿಭೆಯನ್ನು ಹೊರ ಹಾಕಲು ಉತ್ತಮ ವೇದಿಯನ್ನು ಸೃಷ್ಟಿಸಲಾಗಿದೆ. ಇಡೀ ದೇಶದಲ್ಲಿಯೇ ಶಾಲಾ ಮಕ್ಕಳಿಂದ 8500 ಚರದ ಅಡಿಯಲ್ಲಿ ಪರಿಸರ ಜಾಗೃತಿ ಮೂಡಿಸುವ ಚಿತ್ರಕಲೆಯನ್ನು ನಮ್ಮ ಶಾಲೆಯ ಮಕ್ಕಳು ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಇದೊಂದು ಪ್ರಯೋಗವನ್ನು ಮಾಡಿದ್ದೇವೆ ಎಂದು ಮಾರುತಿ ವಿದ್ಯಾಮಂದಿರ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಕೆ.ಶ್ರೀನಿವಾಸ್‌ ತಿಳಿಸಿದರು.

Advertisement

ತಾಲೂಕಿನ ಕನ್ನಮಂಗಲ ಗ್ರಾಮದಲ್ಲಿರುವ ಮಾರುತಿ ವಿದ್ಯಾಮಂದಿರ ಶಾಲೆಯ ಆವರಣದಲ್ಲಿ ಏಶೀಯಾ ಬುಕ್‌ ಆಫ್‌ ರೆಕಾಡ್ಸ್‌ ವತಿಯಿಂದ ಆಯೋಜಿಸಿದ್ದ ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌ ಹಾಗೂ ಚಿತ್ರಕಲಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೇವಲ 25 ಮಕ್ಕಳೊಂದಿಗೆ 25 ವರ್ಷಗಳ ಹಿಂದೆ ಪ್ರಾರಂಭವಾದ ಶಾಲೆ ಬೆಳ್ಳಿ ಹಬ್ಬದ ಸಂಭ್ರಮ ಸಮಯದಲ್ಲಿಏಷ್ಯಾ ಬುಕ್‌ಆಫ್‌ರೆಕಾರ್ಡನಲ್ಲಿದಾಖಲೆಯಾಗಿರುವುದು ಸಂತಸದ ಸಂಗತಿಯಾಗಿದೆ.

ತಾಲೂಕಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪವಿರುವ ಎಂವಿಎಂ ಶಾಲಾ ಆವರಣದಲ್ಲಿ ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌ ಪ್ರಶಸ್ತಿ ಫಲಕ ಸ್ವೀಕರಿಸಿ ಮಾತನಾಡಿದರು. 25 ವರ್ಷಗಳ ಹಿಂದೆ ಸ್ಥಾಪಿಸಿದ ಸಂಸ್ಥೆ ಇಂದು ಈ ರೀತಿಯ ಸಾಧನೆಗೆ„ದಿರುವುದು ಪ್ರಶಂಸನೀಯವಾಗಿದೆ ಎಂದರು.

ಪರಿಸರಜಾಗೃತಿ ಬಗ್ಗೆ ಸಮಾಜ ಮತ್ತು ಶಾಲಾ ಮಕ್ಕಳಿಗೆ ಅರಿವು ಮೂಢಿಸಲು ಸೃಜನಾತ್ಮಕಚಟುವಟಿಕೆ ಮುಖಾಂತರ 8500 ಚದರ ಅಡಿ ಪರಿಸರಜಾಗೃತಿಕುರಿತುಚಿತ್ರಕಲೆಯನ್ನು ಸತತ ನಾಲ್ಕು ಗಂಟೆಗಳ ಶ್ರಮದ ಮೂಲಕ ಪೂರ್ಣಗೊಳಿಸಿದ್ದು, 108 ಮಕ್ಕಳು ಶಾಲೆಯ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 36 ಚಿತ್ರಪಟಗಳನ್ನು ಬಿಡಿಸಿದ್ದಾರೆ.

36 ಮೀಟರ್‌ ಉದ್ದ, 23 ಮೀಟರ್‌ ಅಗಲದ ಬ್ಯಾನರ್‌ನಲ್ಲಿ ಮಕ್ಕಳ ಸಾಧನೆಯನ್ನು ಅನಾವರಣಗೊಳಿಸಿದೆ. ಮಕ್ಕಳಿಗೆ ತರಬೇತಿ ನೀಡಿ ಅವರನ್ನು ಚಿತ್ರಕಲೆಯನ್ನು ಬಿಡಿಸುವಂತೆ ಮಾಡಲಾಗಿದೆ. ಪರಿಸರಕ್ಕೆ ಸಂಬಂಧಿಸಿದಂತೆ ಮರಗಳ ನಾಶ, ಪ್ಲಾಸ್ಟಿಕ್‌ ಬಳಕೆಯಿಂದಾಗುವ ದುಷ್ಪರಿಣಾಮಗಳು, ವಾಹನಗಳಿಂದ ವಾಯು ಮಾಲಿನ್ಯ, ಪರಿಸರದ ದುಷ್ಟಪರಿಣಾಮಗಳ ಕುರಿತಂತೆ ಮಕ್ಕಳಿಂದ ಚಿತ್ರದ ಮೂಲಕ ಸಾರುವ ಕೆಲಸವನ್ನು ಮಾಡಲಾಗಿದೆ.

Advertisement

ಸಹಕರಿಸಿದ ಎಲ್ಲಾ ಶಿಕ್ಷಕರು ಹಾಗೂ ಮಕ್ಕಳನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು. ಜನರಲ್ಲಿ ಪರಿಸರ ಜಾಗೃತಿ ಮೂಡಿಸುವ ಪ್ರಯತ್ನದಲ್ಲಿ ಮಕ್ಕಳ ಸಹಕಾರದಿಂದ ನಮ್ಮ ಶಾಲೆಯಲ್ಲಿ ಮಾಡುತ್ತಿದ್ದ ಪೈಂಟಿಂಗ್‌ ಮಾಡುವ ಮೂಲಕ ಏಶಿಯನ್‌ ಬುಕ್‌ ಆಫ್‌ ರೆಕಾರ್ಡ್‌ ಮಾಡಲು ಮುಂದಾಗಿದೆ. 8458 ಚದರ ಅಡಿ ಬ್ಯಾನರ್‌ ಅನ್ನು ಮಕ್ಕಳಿಂದಲೇ ಪರಿಸರಕ್ಕೆ ಕುರಿತಾದ ಚಿತ್ರಗಳನ್ನು ಬಿಡಿಸಿ ಇಂತಹ ಕಾರ್ಯಕ್ರಮ ಏಶಿಯದಲ್ಲಿಯೇ ಯಾರು ಮಾಡಿಲ್ಲದ ಕಾರಣ ನಮ್ಮ ಶಾಲಾ ವಿದ್ಯಾರ್ಥಿಗಳು ವಿಭಿನ್ನ ಪ್ರಯತ್ನ ಮಾಡುತ್ತಿದ್ದಾರೆ.

ಇವರಿಗೆ ನಮ್ಮ ಶಾಲಾ ಶಿಕ್ಷಕವೃಂದ ಮಕ್ಕಳನ್ನು ಎಲ್ಲಾ ರೀತಿಯಲ್ಲಿ ಸಜ್ಜುಗೊಳಿಸಿ ದ್ದಾರೆ ಎಂದು ಹೇಳಿದರು.ಎಂ.ವಿಎಂ ಶಾಲೆಯ ಮುಖ್ಯೋಪಾಧ್ಯಾಯಿನಿ ಹೇಮಲತಾ ಮಾತನಾಡಿ, ಚಿಕ್ಕವಯಸ್ಸಿನಲ್ಲಿಯೇ ನಮ್ಮ ಪ್ರಕೃತಿ ಮತ್ತು ಪರಿಸರದ ಬಗ್ಗೆ ಜಾಗೃತಿ ಮೂಡಿಸಿದರೆ ಮುಂದೆ ಯಾವ ಅನಾಹುತವಾಗುವುದಿಲ್ಲವೆಂಬ ದೃಷ್ಠಿಕೋನದಲ್ಲಿ ಕಾರ್ಯಕ್ರಮ ಮಾಡುತ್ತಿದ್ದು, ಮಕ್ಕಳೇ ಸ್ವತಃ ಚಿತ್ರ ಬಿಡಿಸಿ ಬಣ್ಣಗಳನ್ನು ತುಂಬುತ್ತಿದ್ದಾರೆ.

ಮಕ್ಕಳಲ್ಲಿನ ಪ್ರತಿಭೆ ಹೊರತೆಗೆಯುವ ಪ್ರಯತ್ನ ಇದಾಗಿದೆ. ಮಕ್ಕಳು ಎಲ್ಲಾ ರೀತಿಯಲ್ಲಿ ಚಿತ್ರ ಬಿಡಿಸಲು ಜ್ಞಾನವನ್ನು ಪಡೆದುಕೊಂಡಿದ್ದು, ಇಡೀ ಭೂಪಟಕ್ಕೆ ಸಾರಿ ಹೇಳುವ ರೀತಿಯಲ್ಲಿ ಇದೊಂದು ಪ್ರಯತ್ನವಾಗಿದೆ ಎಂದರು.ಇದೇ ಸಂದರ್ಭದಲ್ಲಿ ಏಷ್ಯಾ ಬುಕ್‌ಆಫ್‌ರೆಕಾರ್ಡನ ವತಿಯಿಂದದೆಹಲಿಯ ವಿಶೇಷ ಪ್ರತಿನಿಧಿಯಾಗಿ ವಿವೇಕ್‌ ಮತ್ತು ತಂಡ ಕಾರ್ಯಕ್ರಮ ವೀಕ್ಷಿಸಿ ಪ್ರಶಸ್ತಿ ಫಲಕ ವಿತರಿಸಿದರು.

ಕಾರ್ಯಕ್ರಮದಲ್ಲಿ ಎಂವಿಎಂ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ರಾಧ ಶ್ರೀನಿವಾಸ್‌, ಆಡಳಿತಾಧಿಕಾರಿ ಗೌರವ್‌, ಮುಖ್ಯಶಿಕ್ಷಕಿ ಗೀತಾ, ಕೆ. ಚಂದ್ರಪ್ಪ, ಬಿ.ಎನ್‌. ರಾಮಾಂಜಿನಪ್ಪ, ಏಷ್ಯಾ ಬುಕ್‌ಆಫ್‌ರೆಕಾರ್ಡನ ಪ್ರತಿನಿಧಿ ವಿಜಯ್‌ಭಾಸ್ಕರ್‌ ರೆಡ್ಡಿ, ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next