ಮುಂಬಯಿ, ಜೂ. 26: ರಾಜ್ಯದ ಕೋವಿಡ್ -19 ಯುದ್ಧದಲ್ಲಿ ಆಡಳಿತಾರೂಢ ಎಂವಿಎ ಘಟಕಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದು, ಕಾಂಗ್ರೆಸ್ ಮತ್ತು ಎನ್‌ಸಿಪಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಾಯಕತ್ವವನ್ನು ಸಂಪೂರ್ಣವಾಗಿ ಬೆಂಬಲಿಸುತ್ತಿವೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಹೇಳಿದರು.
ಸರಕಾರ ಐದು ವರ್ಷಗಳನ್ನು ಪೂರೈಸಲಿದೆ : ಕಳೆದ ವರ್ಷ ನವೆಂಬರ್‌ನಲ್ಲಿ ಅಧಿಕರಕ್ಕೆ ಬಂದ ಎಂವಿಎ ಸರಕಾರ ತನ್ನ 5 ವರ್ಷಗಳನ್ನು ಒಟ್ಟಾಗಿ ಪೂರ್ಣಗೊಳಿಸಲಿದೆ ಮತ್ತು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮೂರು ಪಕ್ಷಗಳು ಒಟ್ಟಾಗಿ ಸ್ಪರ್ಧಿಸಿದರೆ ರಾಜ್ಯದಲ್ಲಿ ಇದೇ ರೀತಿಯ ರಾಜಕೀಯ ಪರಿಸ್ಥಿತಿ ಮೇಲುಗೈ ಸಾಧಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಪವಾರ್ ಎಂವಿಎ ಸರಕಾರವನ್ನು ನಿಯಂತ್ರಿಸುತ್ತಿದ್ದಾರೆ ಎಂಬ ಟೀಕೆಯನ್ನು ತಿರಸ್ಕರಿಸಿದ ಅವರು, ಸರಕಾರದಲ್ಲಿ ಎನ್‌ಸಿಪಿಯೂ ಎರಡನೇ ಅತಿದೊಡ್ಡ ಘಟಕವಾಗಿದೆ ಎಂದರು.
ಮುಂಬಯಿ ಸೇರಿದಂತೆ ರಾಜ್ಯದ ಕೆಲವು ಭಾಗಗಳಲ್ಲಿ ಕೋವಿಡ್-19 ಪರಿಸ್ಥಿತಿ ಈಗ ಗಣನೀಯವಾಗಿ ಸುಧಾರಿಸಿದೆ ಎಂದು ಮಾಜಿ ಕೇಂದ್ರ ಸಚಿವ ಪವಾರ್ ಹೇಳಿದರು. ಕೊರೊನಾ ಬಗ್ಗೆ ಮೂರು ರಾಜಕೀಯ ಪಕ್ಷಗಳನ್ನೊಳಗೊಂಡ ಸರಕಾರ ಒಟ್ಟಾಗಿ ಕಾರ್ಯನಿರ್ವಹಿಸುತ್ತಿದೆ. ಎಲ್ಲ ಪಕ್ಷಗಳು ಉದ್ಧವ್ ಠಾಕ್ರೆ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಪವಾರ್ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಕ್ರಮಗಳನ್ನು ಬೆಂಬಲಿಸುತ್ತಿದ್ದೇವೆ : ಕಾಂಗ್ರೆಸ್ ಮತ್ತು ಎನ್‌ಸಿಪಿ ಉದ್ಧವ್ ಠಾಕ್ರೆ ನಾಯಕತ್ವವನ್ನು ಸಂಪೂರ್ಣವಾಗಿ ಬೆಂಬಲಿಸುತ್ತಿವೆ. ಅವರು ಯಾವುದೇ ಕ್ರಮ ತೆಗೆದುಕೊಂಡರೂ ಪರಿಪೂರ್ಣ ತಿಳುವಳಿಕೆಯಿಂದ ಮುಂದೆ ಹೋಗುತ್ತಾರೆ. ಮೂರು ಪಕ್ಷಗಳು ಒಂದು ಘಟಕವಾಗಿ ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ಯಾರೂ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಭಾಗವಾಗಿಲ್ಲ ಎಂದು ಹೇಳಿದರು.
ವಿ.ಸ. ಚುನಾವಣೆಯಲ್ಲಿ ಜಂಟಿ ಸ್ಪರ್ಧೆ ಎಂವಿಎ ಸರಕಾರ ತನ್ನ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುವುದಿಲ್ಲ ಎಂಬ ವಿಪಕ್ಷ ಬಿಜೆಪಿಗಳ ಹೇಳಿಕೆಯನ್ನು ಪವಾರ್ ತಳ್ಳಿಹಾಕಿದರು. ಮೂರು ಪಕ್ಷಗಳು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜಂಟಿಯಾಗಿ ಸ್ಪರ್ಧಿಸಿದರೆ, ಐದು ವರ್ಷಗಳ ನಂತರವೂ ಇದೇ ರೀತಿಯ ರಾಜಕೀಯ ಪರಿಸ್ಥಿತಿ ಮೇಲುಗೈ ಸಾಧಿಸುತ್ತದೆ ಎಂದು ಅವರು ಹೇಳಿದರು. ರಾಜ್ಯದ ಕೋವಿಡ್ -19 ಪರಿಸ್ಥಿತಿಯ ಬಗ್ಗೆ, ಪವಾರ್ ಪರಿಸ್ಥಿತಿ ಖಂಡಿತವಾಗಿಯೂ ದಿನದಿಂದ ದಿನಕ್ಕೆ ಸುಧಾರಿಸುತ್ತಿದೆ ಎಂದರು.
ಲಾಕ್‌ಡೌನ್ ಸಡಿಲಿಸಲು ಸೂಚನೆ: ನಾನು ರಾಜ್ಯದ ಉಳಿದ ಭಾಗಗಳಲ್ಲಿನ ಲಾಕ್ ಡೌನ್ ಸಡಿಲಗೊಳಿಸಲು ಸೂಚಿಸುತ್ತಿದ್ದೇನೆ. ಆದರೆ ಪುಣೆ ಮತ್ತು ಥಾಣೆಯಲ್ಲಿ ಲಾಕ್‌ಡೌನ್ ತೆರೆಯುವ ಕಲ್ಪನೆಯನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬೆಂಬಲಿಸುತ್ತಿಲ್ಲ ಎಂದರು. ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರು ಲಾಕ್‌ಡೌನ್ ಸಡಿಲಿಕೆಯಲ್ಲಿ ಹೆಚ್ಚು ಜಾಗರೂಕರಾಗಿದ್ದಾರೆ ಎಂದು ಹಿರಿಯ ರಾಜಕಾರಣಿ ಹೇಳಿದರು.