Advertisement
ಭಕ್ತ ಮಹಿಳೆಯರು ದೇವಸ್ಥಾನಗಳಲ್ಲಿ ಅನು ಭವಿಸುವ ತೊಂದರೆ, ಸಮಸ್ಯೆಗಳಿಗೆ ಇತಿಶ್ರೀ ಹಾಡಲು ಹಿಂದೂ ಧಾರ್ಮಿಕ ದತ್ತಿ ಮತ್ತು ಧರ್ಮಾದಾಯ ಇಲಾಖೆ ಮುಂದಾಗಿತ್ತು. ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ಶಿಶುಗಳ ಜತೆಗೆ ದೇಗುಲಕ್ಕೆ ಆಗಮಿಸುವ ಮಹಿಳೆಯರಿಗಾಗಿ ಪ್ರತ್ಯೇಕ ಶಿಶು ಆರೈಕೆ ಕೇಂದ್ರ ನಿರ್ಮಿಸುವಂತೆ ನಿರ್ದೇಶನ ನೀಡಿತ್ತು. ಆದರೆ ಅದು ಆದೇಶಕ್ಕಷ್ಟೆ ಸೀಮಿತವಾಗಿದೆ. ನಿರ್ಮಾಣವಾಗಿರುವ ಶಿಶು ಆರೈಕೆ ಕೇಂದ್ರಗಳು ಕೂಡ ಹಲವು ನ್ಯೂನತೆಗಳನ್ನು ಎದುರಿಸುತ್ತಿವೆ.
Related Articles
Advertisement
ಹಲವು ದೇಗುಲಗಳು ಬಾಕಿಕೆಲವು ದೇವಸ್ಥಾನಗಳು ದಾನಿಗಳು, ಖಾಸಗಿ ಸಹಭಾಗಿತ್ವದಲ್ಲಿ ಈ ವ್ಯವಸ್ಥೆಯನ್ನು ಸ್ಥಳೀಯವಾಗಿ ಮಾಡಿಕೊಂಡಿದ್ದರೆ ಹೆಚ್ಚಿನ ದೇವಸ್ಥಾನಗಳಲ್ಲಿ ಈ ವ್ಯವಸ್ಥೆ ಅನುಷ್ಠಾನಕ್ಕೆ ಬಂದಿಲ್ಲ. ದೇವಸ್ಥಾನಗಳ ಆಡಳಿತಗಳು ಆದೇಶವನ್ನು ಹಗುರವಾಗಿ ಪರಿಗಣಿಸಿರುವುದು ಒಂದು ಕಾರಣವಾದರೆ, ಪೂರ್ಣ ಪ್ರಮಾಣದ ವ್ಯವಸ್ಥಾಪನ ಸಮಿತಿಗಳ ರಚನೆಯಾಗದಿರುವುದು ಇನ್ನೊಂದು ಕಾರಣ. ಮುಜುಗರ ತಪ್ಪಿಸಲು ವ್ಯವಸ್ಥೆ
ಸಾಮಾನ್ಯವಾಗಿ ದೇವಸ್ಥಾನಕ್ಕೆ ಬರುವ ತಾಯಂದಿರಿಗೆ ಮಕ್ಕಳಿಗೆ ಹಾಲುಣಿಸುವುದೇ ದೊಡ್ಡ ಸಮಸ್ಯೆ. ತಾವು ಬಂದ ವಾಹನದಲ್ಲಿ ಅಥವಾ ದೇಗುಲದ ಪ್ರಾಂಗಣದ ವಾಣಿಜ್ಯ ಮಳಿಗೆಗಳ ಮಾಲಕರನ್ನು ಕಾಡಿಬೇಡಿ ಹಾಲುಣಿಸಬೇಕಾದ ಪರಿಸ್ಥಿತಿ ಇದೆ. ಇಂದಿಗೂ ಸರಿಯಾದ ಸ್ಥಳಾವಕಾಶ ಸಿಗದೆ ಸಾರ್ವಜನಿಕ ಸ್ಥಳದಲ್ಲಿ ಹಾಲುಣಿಸುವ ದೃಶ್ಯ ಕಾಣಸಿಗುತ್ತದೆ. ಇದರಿಂದ ಅನೇಕರು ಶಿಶುವಿನೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಲು ಹಿಂದೇಟು ಹಾಕುತ್ತಾರೆ. ಭಕ್ತರ ಒತ್ತಾಸೆಯೇನು?
ರಾಜ್ಯದ ಎಲ್ಲ ಎ ಹಾಗೂ ಬಿ ವರ್ಗ ಸೇರಿದ ದೇಗುಲಗಳಲ್ಲಿ ಶಿಶು ಆರೈಕೆ ಕೇಂದ್ರ ನಿರ್ಮಿಸಬೇಕು. ಶಿಶು ಆರೈಕೆಗೆ ಪ್ರತ್ಯೇಕ ಕೊಠಡಿ ಇರುವ ಮಾಹಿತಿಯನ್ನು ದೇವಸ್ಥಾನದ ಪ್ರಾಂಗಣದಲ್ಲಿ ಉÇÉೇಖೀಸಬೇಕು. ಜತೆಗೆ ಕೊಠಡಿಯ ಸ್ವತ್ಛತೆಯತ್ತ ದೇಗುಲಗಳ ಆಡಳಿತ ಮಂಡಳಿಯೊಂದಿಗೆ ಭಕ್ತರು ಕೂಡ ಗಮನ ಹರಿಸಬೇಕು ಎನ್ನುವ ಒತ್ತಾಸೆ ಭಕ್ತ ಸಮೂಹದ್ದು. ಇರುವ ಸಮಸ್ಯೆಗಳೇನು?
ಇಲಾಖೆಯ ಆದೇಶವನ್ನು ಎಲ್ಲ ದೇಗುಲಗಳು ಪಾಲಿಸುತ್ತಿಲ್ಲ.
ಇರುವ ಶಿಶು ಆರೈಕೆ ಕೇಂದ್ರಗಳು ಇಕ್ಕಟ್ಟಾಗಿವೆ.
ಕೇಂದ್ರದೊಳಗೆ ಸರಿಯಾದ ಗಾಳಿ, ಬೆಳಕು ಆಡುತ್ತಿಲ್ಲ.
ನಿರ್ವಹಣೆ ಸರಿಯಾಗಿಲ್ಲ, ಭದ್ರತೆಯೂ ನಿರೀಕ್ಷೆಯಷ್ಟಿಲ್ಲ. ಮುಜರಾಯಿ ಇಲಾಖೆಯ ಎಲ್ಲ ದೇವಸ್ಥಾನಗಳಿಗೂ ಶಿಶು ಆರೈಕೆ ಕೇಂದ್ರ ನಿರ್ಮಿಸಲು ನಿರ್ದೇಶನವಿದೆ. ಪ್ರಮುಖ ಎ ಮತ್ತು ಬಿ ದರ್ಜೆಯ ದೇವಸ್ಥಾನಗಳು ಉತ್ತಮ ರೀತಿಯ ಕೇಂದ್ರಗಳನ್ನು ನಿರ್ಮಿಸಿಕೊಂಡಿವೆ. ಇತರ ದರ್ಜೆಯ ದೇವಸ್ಥಾನಗಳಲ್ಲಿ ಅಳವಡಿಸಿಕೊಳ್ಳಲು ಒಂದಷ್ಟು ಸಮಸ್ಯೆಗಳಿರಬಹುದು. ತಾಯಂದಿರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಆಯಾ ದೇಗುಲಗಳ ಜವಾಬ್ದಾರಿ.
ಪ್ರಶಾಂತ್ ಶೆಟ್ಟಿ , ಗೋವಿಂದ ನಾಯ್ಕ ಉಡುಪಿ ಮತ್ತು ದ.ಕ. ಜಿಲ್ಲಾ ಸಹಾಯಕ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ