Advertisement

ಪತಿ, ಮಗು ಎದುರು ಗನ್‌ ಪಾಯಿಂಟಲ್ಲಿ ಅತ್ಯಾಚಾರ

06:55 AM Oct 08, 2017 | Team Udayavani |

ಮುಜಾಫ‌ರ್‌ನಗರ: ಉತ್ತರ ಪ್ರದೇಶದ ಮುಜಾಫ‌ರ್‌ನಗರದಲ್ಲಿ ಮಹಿಳೆಯ ಮೇಲೆ ಗನ್‌ ಪಾಯಿಂಟ್‌ನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ.

Advertisement

ಪತಿ ಮತ್ತು ಮೂರು ತಿಂಗಳ ಮಗುವಿನ ಎದುರೇ ಈ ಹೇಯ ಕೃತ್ಯ ನಡೆಸಲಾಗಿದೆ. ಮಗುವಿಗೆ ಆರೋಗ್ಯ ಸಮಸ್ಯೆ ಇದ್ದಿದ್ದರಿಂದ ಮಕ್ಕಳ ತಜ್ಞರ ಬಳಿಗೆ ತೆರಳಿ ದಂಪತಿ ಮನೆಗೆ ವಾಪಸಾಗುತ್ತಿದ್ದರು. ಈ ಸಂದರ್ಭದಲ್ಲಿ ಕಾರ್‌ನಲ್ಲಿ ಬಂದೂಕು, ಮಾರಕಾಸ್ತ್ರಗಳ ಸಮೇತ ಬಂದ ನಾಲ್ವರು ಕಿಡಿಗೇಡಿಗಳು 35 ವರ್ಷದ ಪತಿ ಮೇಲೆ ಹಲ್ಲೆ ನಡೆಸಿ, ಮರಕ್ಕೆ ಕಟ್ಟಿಹಾಕಿದ್ದಾರೆ. ಬಳಿಕ ವ್ಯಕ್ತಿಯೊಬ್ಬ ಮಹಿಳೆಯಿಂದ ಮಗುವನ್ನು ಕಿತ್ತುಕೊಂಡಿದ್ದು, ಉಳಿದವರು ಮಹಿಳೆಯನ್ನು ಸಮೀಪದಲ್ಲಿರುವ ಕಬ್ಬಿನ ಗದ್ದೆಗೆ ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ. ಯಾರಿಗಾದರೂ ವಿಷಯ ತಿಳಿಸಿದರೆ ಮಗುವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಗಾಬರಿಯಿಂದ ಕುಟುಂಬ ಕಿರುಚಿಗೊಂಡಾಗ ಗದ್ದೆಯ ಮತ್ತೂಂದು ಭಾಗದಲ್ಲಿದ್ದ ರೈತರು ಧಾವಿಸಿ ಬಂದು ದಂಪತಿ, ಮಗುವನ್ನು ರಕ್ಷಿಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next