Advertisement

ಮ್ಯೂಚುವಲ್‌ ಫಂಡ್‌ ಸಲಹೆಗಳು

11:19 PM Dec 01, 2019 | Sriram |

ಕಿರಿಯರು ಮ್ಯೂಚುವಲ್‌ಫಂಡ್‌ನ‌ಲ್ಲಿ ಹೂಡಿಕೆ ಮಾಡುವುದರ ಲಾಭ ಹಲವಿವೆ. ವಯಸ್ಸು ಚಿಕ್ಕದಾಗಿರುವುದರಿಂದ ಮ್ಯೂಚುವಲ್‌ಫಂಡ್‌ನ‌ ಪೂರ್ಣ ಲಾಭವನ್ನು ಪಡೆಯಬಹುದು.
1 ಹೊಸದಾಗಿ ಬಂದಿರುವ ಮ್ಯೂಚುವಲ್‌ಫಂಡ್‌ಗಳಲ್ಲಿ ಹಣ ಹೂಡುವುದಕ್ಕಿಂತ, ಕೆಲ ವರ್ಷಗಳಷ್ಟು ಹಳತಾಗಿರುವ ಮ್ಯೂಚುವಲ್‌ಫಂಡ್‌ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ. ಹಳೆಯ ಯೋಜನೆಯಾದರೆ ಅದರ ಪೂರ್ವಾಪರ ವಿಚಾರಗಳು ತಿಳಿದು ಬರುವುದರಿಂದ ಹೂಡಿಕೆದಾರರಿಗೆ ಸರಿಯಾದ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತದೆ.
2 ಗುರಿ ಹಾಕಿಕೊಳ್ಳಿ- ಮ್ಯೂಚುವಲ್‌ಫಂಡ್‌ನ‌ಲ್ಲಿ ಹೂಡಿಕೆ ಮಾಡುವಾಗ ಉದ್ದೇಶ ಬಹಳ ಮುಖ್ಯ. ಮದುವೆ, ಮಕ್ಕಳ ವಿದ್ಯಾಭ್ಯಾಸ, ನಿವೃತ್ತಿ ಯೋಜನೆ ಹೀಗೆ ಇತ್ಯಾದಿ.
3 ಸಮಯ ಕೊಡಿ- ಯಾವುದೇ ಸಂಸ್ಥೆಯ ಶೇರುಗಳಾದರೂ ದೀರ್ಘ‌ ಕಾಲ ಇಟ್ಟರೆ ಮಾತ್ರ ಹೆಚ್ಚಿನ ಲಾಭ ಪಡೆಯಲು ಸಾಧ್ಯ. ಎಲ್ಲ ವಿಭಾಗಗಳಲ್ಲಿಯೂ ಅದರದ್ದೇ ಆದ ರಿಸ್ಕ್ ಗಳಿರುತ್ತವೆ. ಹಾಗಾಗಿ ನಿಗದಿತ ಸಮಯದವರೆಗೆ ಪ್ರೀಮಿಯಂ ಕಟ್ಟಿದರೆ ಮಾತ್ರ ಮ್ಯೂಚುವಲ್‌ಫಂಡ್‌ನ‌ ಸಂಪೂರ್ಣ ಲಾಭ ಪಡೆಯಬಹುದು. ಕನಿಷ್ಠ 5- 7 ವರ್ಷಗಳಷ್ಟಾದರೂ ಅವಧಿಯದ್ದಾಗಿದ್ದರೆ ಒಳ್ಳೆಯದು.
4 ಹೂಡಿಕೆದಾರರು ಪ್ರೀಮಿಯಂ ಪಾವತಿಸಲು ಎರಡು ವಿಧಾನಗಳನ್ನು ಅನುಸರಿಸಬಹುದಾಗಿದೆ. ಒಮ್ಮಿಂದೊಮ್ಮೆಲೇ ಒಟ್ಟಾಗಿ ದೊಡ್ಡ ಮೊತ್ತವನ್ನು ಕಟ್ಟಿಬಿಡುವುದು. ಎರಡನೆಯದು ವಾರ, ತಿಂಗಳು ಇಲ್ಲವೇ ಆರು ತಿಂಗಳಿಗೊಮ್ಮೆ ಕಟ್ಟುವುದು. ಪರಿಣತರ ಅಭಿಪ್ರಾಯದ ಪ್ರಕಾರ ಎರಡನೆಯ ವಿಧಾನವೇ ಅತ್ಯುತ್ತಮವಾದುದು.
5 ಮ್ಯೂಚುವಲ್‌ಫಂಡ್‌ಗಳಲ್ಲಿ ಹೂಡುವ ಹಣವನ್ನು ಆಯಾ ಸಂಸ್ಥೆಗಳು ಹಲವು ಕ್ಷೇತ್ರಗಳಲ್ಲಿ ಹೂಡುತ್ತವೆ. ಹೂಡಿಕೆದಾರ ತನ್ನ ಹಣ ಎಲ್ಲೆಲ್ಲಿ ಹೂಡಿಕೆಯಾಗುವುದೆಂಬ ಮಾಹಿತಿ ತಿಳಿದಿರಬೇಕು.
6 ಹೂಡುತ್ತಿರುವ ಮ್ಯೂಚುವಲ್‌ಫಂಡ್‌ಬೇರೆ ಬೇರೆ ಅವಧಿಗಳಲ್ಲಿ ಎಷ್ಟು ರಿಟರ್ನ್ಸ್ ತಂದುಕೊಡುತ್ತದೆ ಎನ್ನುವುದರ ಮಾಹಿತಿಯನ್ನು ಹೂಡಿಕೆದಾರ ತಿಳಿದುಕೊಳ್ಳಬೇಕು. ಇದರಿಂದ ಆಯಾ ಮ್ಯೂಚುವಲ್‌ಫಂಡ್‌ಅನ್ನು ಇತರೆ ಮ್ಯೂಚುವಲ್‌ಫಂಡ್‌ಗಳ ಜತೆ ಹೋಲಿಕೆ ಮಾಡಿಕೊಳ್ಳಲು ಸಹಾಯವಾಗುತ್ತದೆ.
7 ಹೂಡಿಕೆ ಮಾಡುತ್ತಿರುವ ಮ್ಯೂಚುವಲ್‌ಫಂಡ್‌ ತೆರಿಗೆ ಮುಕ್ತವೋ ಇಲ್ಲವೇ ತೆರಿಗೆ ಕಟ್ಟಬೇಕಾಗಿ ಬರುವುದೋ ಎಂಬ ಮಾಹಿತಿಯನ್ನು ತಿಳಿದಿರಬೇಕು.

Advertisement

 - ಹವನ

Advertisement

Udayavani is now on Telegram. Click here to join our channel and stay updated with the latest news.

Next