Advertisement
ಹೂಡಿಕೆಯಲ್ಲೂ ಅಷ್ಟೇ, ಒಂದು ಟ್ರೆಂಡ್ ಇರುತ್ತದೆ. ಕೆಲವು ಕಾಲಕ್ಕೆ ಕೆಲವು ಹೂಡಿಕೆಯ ಬಗೆಗೆ ಪದೇ ಪದೆ ಕೇಳುತ್ತಿರುತ್ತೇವೆ. ಕೆಲವು ವರ್ಷಗಳ ಹಿಂದೆ ಎಲ್ಲರೂ ಚಿನ್ನದ ಮೇಲೆ ಹೂಡಿಕೆ ಮಾಡಿ ಎನ್ನುತ್ತಿದ್ದರು. ಇನ್ನೂ ಕೆಲವು ವರ್ಷಗಳ ಹಿಂದೆ ಪ್ರಾಥಮಿಕ ಪೇಟೆ ಪ್ರವೇಶಿಸುವ ಷೇರುಗಳಲ್ಲಿ ಹೂಡಿಕೆ ಮಾಡಿ ಎನ್ನುತ್ತಿದ್ದರು. ಅದಕ್ಕೂ ಹಿಂದೆ ಅಂದರೆ ಸುಮಾರು 15 ವರ್ಷಗಳ ಹಿಂದೆ ರಿಯಲ್‌ಎಸ್ಟೇಟ್ ಹೂಡಿಕೆಯ ಬಗೆಗೆ ಬಹಳ ಮಾತುಗಳು ಕೇಳಿ ಬರುತ್ತಿದ್ದವು. ಯಾವುದೇ ಹೂಡಿಕೆ ಇವತ್ತಿಗಾಗಿ ಅಲ್ಲ.
Related Articles
Advertisement
ನಮಗೆ ಹೂಡಿಕೆ ಎನ್ನುವ ಪರಿಕಲ್ಪನೆಯೇ ಹೊಸದು. ಚಿಕ್ಕ ವಯಸ್ಸಿನಲ್ಲಿ ಮಾಡುವ, ದೀರ್ಘ ಕಾಲದ ಹೂಡಿಕೆ, ಯಾವಾಗಲೂ ಅಧಿಕ ಲಾಭವನ್ನು ತಂದುಕೊಡುತ್ತದೆ. ಇದು ಒಂದು ರೀತಿಯಲ್ಲಿ ಗಿಡ ನೆಟ್ಟ ಹಾಗೆ. ಒಂದು ಗಿಡ, ಎಲ್ಲ ಅಡೆತಡೆಗಳನ್ನು ದಾಟಿ, ಮರವಾಗಿ ಬೆಳೆದು ಹೂ ಹಣ್ಣು ಕೊಡಲು ಸಮಯ ಬೇಕು. ಈಗ, ರಿಯಲ್‌ಎಸ್ಟೇಟ್ ವಲಯದ ಉದಾಹರಣೆಯನ್ನೇ ತೆಗೆದುಕೊಳ್ಳಿ. ತುಂಬ ಹಿಂದೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹಣ ಹಾಕಿದವರು ಸಹಜವಾಗಿಯೇ ಅಧಿಕ ಲಾಭ ಕಂಡಿರುತ್ತಾರೆ.
ಈಗ ಹಣ ಹಾಕುವವರೂ ಕಡಿಮೆ ಆಗುತ್ತಿದ್ದಾರೆ. ಒಂದು ವೇಳೆ ಹಣ ಹಾಕಿದರೂ ಅದು ವಾಸಿಸುವ ಅಗತ್ಯವನ್ನೇ ಹೆಚ್ಚಾಗಿ ಹೊಂದಿದೆ. ಹೂಡಿಕೆಗಾಗಿ ಈಗ ರಿಯಲ್ ಎಸ್ಟೇಟ್ ವಲಯವನ್ನು ರೆಕಮಂಡ್ ಮಾಡುವವರು ಕಡಿಮೆ ಆಗಿದ್ದಾರೆ. ಅಷ್ಟೆ ಅಲ್ಲ, ಇದು ಈಗ ಸಾಮಾನ್ಯರಿಗೆ ನಿಲುಕುವ ಹೂಡಿಕೆಯಾಗಿ ಉಳಿಯುತ್ತಿಲ್ಲ. ಈಗ ಹೂಡಿಕೆ ಎನ್ನುವುದನ್ನು ಬೇರೆ ರೀತಿಯಿಂದ ನೋಡುವ ಹೊಸ ಹೂಡಿಕೆಯ ವರ್ಗವೇ ಸಿದ್ಧವಾಗಿದೆ. ಹಾಗೆ ಹೂಡಿಕೆ ಮಾಡುವವರನ್ನು ಮ್ಯೂಚುವಲ್ ಫಂಡ್ ತೆರದ ಬಾಗಿಲಿನಿಂದ ಸ್ವಾಗತಿಸುತ್ತಿದೆ.
ಷೇರು ಪೇಟೆಯಲ್ಲಿ ಹಣ ಹೂಡಿ ಅಭ್ಯಾಸ ಇಲ್ಲ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹಣ ಹೂಡುವುದು ರಿಸ್ಕ್ ಎಂದು ಭಾವಿಸುವವರಿಗೆ, ಮ್ಯೂಚುವಲ್ ಫಂಡ್ ಉತ್ತಮ ಆಯ್ಕೆ ಆಗಿದೆ. ಬ್ಯಾಂಕಿನಲ್ಲಿ ಹಣ ಇಟ್ಟಷ್ಟೇ ಸರಳವಾಗಿ, ಸಹಜವಾಗಿ, ಹಣ ಹೂಡುವ ಅವಕಾಶ ಇಲ್ಲಿದೆ. ಹೂಡಿಕೆದಾರರ ಅಗತ್ಯಕ್ಕೆ ಅನುಗುಣವಾಗಿ, ಹಲವಾರು ಯೋಜನೆಗಳನ್ನೂ ಮ್ಯೂಚುವಲ್ ಫಂಡ್‌ನಲ್ಲಿ ನಾವು ಕಾಣಬಹುದು.
ಬಹುತೇಕ ಎಲ್ಲ ಬ್ಯಾಂಕ್‌ಗಳೂ ಮ್ಯೂಚುವಲ್ ಫಂಡ್ ಸೇವೆಯನ್ನು ಒದಗಿಸುತ್ತಿವೆ. ಈಗ ಇದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಉದ್ಯಮವಾಗಿ ರೂಪಗೊಂಡಿದೆ. ಹೂಡಿಕೆಯ ಮಾತು ಬಂದಾ, ಎಲ್ಲರೂ ಮ್ಯೂಚುವಲ್ ಫಂಡ್ ಕುರಿತೇ ಹೇಳುತ್ತಿದ್ದಾರೆ. ಜನ ಹೇಳುತ್ತಿರುವುದೆಲ್ಲಾ ನಿಜವಾ? ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದರೆ ಕೈ ತುಂಬಾ ಲಾಭ ಸಿಗುವುದು ಗ್ಯಾಂರಂಟಿಯಾ? ಇಂಥವೇ ಪ್ರಶ್ನೆಗಳಿಗೆ ಮುಂದಿನವಾರಗಳಲ್ಲಿ ವಿವರವಾಗಿ ತಿಳಿಯೋಣ.
* ಸುಧಾಶರ್ಮ ಚವತ್ತಿ