Advertisement

ಗೆಲ್ಲಲು ಕಲಿಯುವ ಮೊದಲು ಸೋಲಲೇಬೇಕು !

08:24 PM Oct 19, 2020 | Karthik A |

ನಾನೇನು ಎಂಬುದು ಜೀವನದಲ್ಲಿ ನನಗೆ ಕಾಡಿದ ಅತೀ ದೊಡ್ಡ ಪ್ರಶ್ನೆ.

Advertisement

ಯಾಕೆಂದರೆ ನಾನು ಎಂಬುದಕ್ಕೆ ನನ್ನಲ್ಲಿ ಹಲವಾರು ಪ್ರಶ್ನೆಗಳು ಇರುತ್ತವೆ.

ಆ ಪ್ರಶ್ನೆಗಳಿಗೆ ನಾವು ಯಾವತ್ತೂ ಉತ್ತರ ಕಂಡುಕೊಳ್ಳುವುದಿಲ್ಲ. ಅದಕ್ಕೆ ನಮ್ಮ ಬದುಕಿನಲ್ಲಿ ದೊಡ್ಡ ಮಟ್ಟದ ಸೋಲುಗಳು ಎದುರಾಗುತ್ತವೆ.

ಬರೀ ಅಷ್ಟೇ ಕಣೋ ನನ್ನ ಲೈಫ್ನಲ್ಲಿ ಸೋಲೇ ಜಾಸ್ತಿ ಎಂದು ಸ್ನೇಹಿತರ ಎದುರು ಹೇಳಿಕೊಂಡು ಇರುವುದೇ ನಮ್ಮ ಕೆಲಸವಾಗಿದೆ. ಆದರೆ ಸೋಲಲು ಕಾರಣ ಏನೆಂದು ಅರಿಯುವ ಕಾರ್ಯ ನಾವು ಎಂದಿಗೂ ಮಾಡಿರುವುದಿಲ್ಲ. ಅದು ಏಕೆ? ಆದರೆ ಅದಕ್ಕಿಂತ ಮೊದಲು ಆಲೋಚಿಸಬೇಕಾದ ಒಂದು ವಿಷಯವೆಂದರೆ ಸೋಲು ಯಾವತ್ತೂ ಕೆಟ್ಟದ್ದಲ್ಲ. ಅದು ಗೆಲುವಿನ ಪಾಠ ಹೇಳುವ ಗುರು.

ನಾನಾಗ ಐದನೇ ತರಗತಿಯಲ್ಲಿದ್ದೆ. ನೂರು ಮೀಟರ್‌ ಓಟ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಅದು ನನ್ನ ಮೊದಲ ಸ್ಪರ್ಧೆಯೂ ಸಹ. ನನ್ನೊಂದಿಗೆ ಇದ್ದ ಪ್ರತಿ ಸ್ಪರ್ಧಿಗಳನ್ನು ಕಂಡು ಸ್ವಲ್ಪ ಕುಗ್ಗಿ ಹೋಗಿದ್ದೆ. ಮನದಲ್ಲಿ ಜಯದ ನಿರೀಕ್ಷೆಗಿಂತ ಆಗ ಸೋಲಿನ ಭಯವೇ ಹೆಚ್ಚು ಮನೆ ಮಾಡಿತ್ತು. ಕೊನೆಗೆ ಅದೇ ಭಯದಲ್ಲಿ ಓಡಿದ ಓಟ ಸೋಲಿನಲ್ಲಿ ಅಂತ್ಯ ಕಂಡಿತು. ಗೆದ್ದವರು ಕೇಕೆ ಹಾಕುತ್ತಿದ್ದರೆ ಸೋತವರು ಸಂತೋಷ ಪಡುತ್ತಾ ಶಪಿಸುತ್ತ ನಿಂತಿದ್ದರು. ನನ್ನ ಸೋಲಿಗೆ ಕಾರಣವೇನು ಎಂದು ಯೋಚಿಸಿದಾಗ ಸಾಮರ್ಥ್ಯ ಕೊರತೆ ನನ್ನಲ್ಲಿ ಇರುವುದನ್ನು ಅರಿತೆ. ಆದರೆ ಆ ಸೋಲು ಮುಂದೆ ಹಲವು ಗೆಲುವಿಗೆ ಕಾರಣವಾಯಿತು.

Advertisement

ಸಾಮರ್ಥ್ಯ ಬಲಪಡಿಸಿಕೊಂಡಾಗ ಗೆಲವು ನನ್ನದಾಗುತ್ತೆ ಎಂದು ಕಂಡುಕೊಂಡೆ. ಸೋಲಿನ ಹಿಂದೆ ದೊಡ್ಡ ಅನುಭವದ ಬುತ್ತಿ ಇದೆ ಎಂದು ಅರಿತು ಅದನ್ನು ನನ್ನ ಜೀವನದ ಪ್ರತಿ ಹಂತದಲ್ಲೂ ಕಂಡುಕೊಳ್ಳಲು ಆಗ ನಾನು ತೀರ್ಮಾನಿಸಿದೆ. ಸೋತಾಗ ಕುಗ್ಗದೆ ಗೆದ್ದಾಗ ಹಿಗ್ಗದೆ ಎರಡನ್ನು ಸರಿಸಮಾನವಾಗಿ ಅನುಭವಿಸಬೇಕು ಎಂದು ಅಂದುಕೊಂಡೆ.

ಸೋಲು ಮತ್ತು ಗೆಲುವು ರೈಲು ಹಳಿಯ ಎರಡು ಕಂಬಿಗಳು ಇದ್ದ ಹಾಗೆ. ಸರಿಯಾಗಿದ್ದರೆ ರೈಲು ನಿಲ್ದಾಣವನ್ನು ಸುರಕ್ಷಿತವಾಗಿ ಮುಟ್ಟಲು ಸಾಧ್ಯ.
ಸೋಲು ಯಾವತ್ತಿಗೂ ಗೆಲುವಿನ ಮೆಟ್ಟಿಲಾಗಬೇಕೇ ಹೊರತು ಸಾವಿನ ದಾರಿಯಾಗಬಾರದು. ಇತ್ತೀಚೆಗೆ ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಧೈರ್ಯದಿಂದ ಸಮಸ್ಯೆ ಎದುರಿಸಿದ್ದರೆ ಭವಿಷ್ಯದಲ್ಲಿ ಚೆನ್ನಾಗಿ ಬದುಕಬಹುದಿತ್ತು.

ಸಿನೆಮಾದಲ್ಲಿ ತೋರಿಸಿದ ಆತ್ಮವಿಶ್ವಾಸವನ್ನು ನಿಜ ಜೀವನದಲ್ಲಿ ತೋರಿಸಿದ್ದರೆ ಎಲ್ಲವೂ ಸರಿಯಾಗುತ್ತಿತ್ತು. ಎಲ್ಲರಲ್ಲೂ ಸಾಮರ್ಥ್ಯ ಇದ್ದೇ ಇರುತ್ತದೆ ಅದನ್ನು ನಿರೂಪಿಸುವ ವೇದಿಕೆ ಮತ್ತು ಸ್ಪರ್ಧೆಗಳು ಬರುತ್ತವೆ ಅದನ್ನು ಗುರುತಿಸುವ ಕೆಲಸ ನಾವು ಮತ್ತು ನಮ್ಮವರದಾಗಬೇಕು ಅಂದಾಗ ಮಾತ್ರ ಸಾಧಿಸಲು ಮತ್ತು ಗುರಿ ಮುಟ್ಟಲು ಸಾಧ್ಯ.

 ವಿಜಯ ಕುಮಾರ, ಬೆಳ್ಳೇರಿಮಠ ಧಾರವಾಡ ವಿವಿ 

Advertisement

Udayavani is now on Telegram. Click here to join our channel and stay updated with the latest news.

Next