Advertisement

ಸರ್ವಾಧಿಕಾರಿ ವಿರಚಿತ ಪುಸ್ತಕದ ವಿಮರ್ಶೆ

03:50 PM May 23, 2019 | keerthan |

ಇಟಲಿಯ ಸರ್ವಾಧಿಕಾರಿ ಬೆನಿಟೊ ಮುಸೊಲಿನಿ “ದಿ ಕಾರ್ಡಿನಲ್ಸ್‌ ಮಿಸ್ಟ್ರೆಸ್‌’ ಎಂಬ ಹೆಸರಿನ ಒಂದು ಪ್ರಣಯ ಕಾದಂಬರಿ ಬರೆದಿದ್ದರು ಎಂದರೆ ಎಂಥವರಿಗಾದರೂ ಚ್ಚರಿಯಾಗುವುದು ಸಹಜ. ಈ ಪುಸ್ತಕವನ್ನು ಆತ ಬರೆದಿದ್ದು 26ನೇ ವಯಸ್ಸಿನಲ್ಲಿ. ಆಗಿನ್ನೂ ಮುಸ್ಸೂಲಿನಿ ಸರ್ವಾಧಿಕಾರಿ ಗಾದಿಗೆ ಏರಿರಲಿಲ್ಲ. ಸಣ್ಣ ಮಟ್ಟದ ಮಿಲಿಟರಿ ಅಧಿಕಾರಿಯಾಗಿದ್ದರಷ್ಟೆ. ಅದನ್ನು ಯಾರೂ ನೆನಪಿನಲ್ಲೂ ಇಟ್ಟುಕೊಂಡಿರಲಿಲ್ಲ ಮತ್ತು ಸೇನೆಯಲ್ಲಿ ಹೆಚ್ಚಿನವರಿಗೆ ಈ ವಿಷಯ ತಿಳಿದೂ ಇರಲಿಲ್ಲ. ಆದರೆ, ಮುಸ್ಸೂಲಿನಿ
ಸರ್ವಾಧಿಕಾರಿಯಾಗಿದ್ದೇ ತಡ; ತನ್ನ ಪುಸ್ತಕವನ್ನು ಮತ್ತೆ ಮುದ್ರಿಸಿದ. ಕಿರಿಯ ಅಧಿಕಾರಿಗಳ ಮುಂದೆ ಕಾದಂಬರಿಯ ಕೆಲ ಪುಟಗಳನ್ನು ಓದಿ ಅವರಿಂದ ಚಪ್ಪಾಳೆ ಗಿಟ್ಟಿಸುತ್ತಿದ್ದ. ಚಪ್ಪಾಳೆ ಹೊಡೆಯದಿದ್ದರೆ ಎಲ್ಲಿ ಕೈ ಕಟ್‌ ಆಗುತ್ತದೋ ಎಂಬ ಭಯವನ್ನು ಅವರು ತಾನೇ ಯಾರ ಮುಂದೆ ತೋಡಿಕೊಂಡಾರು? ಸೆಪ್ಟೆಂಬರ್‌ 15, 1928ರ ದಿನ “ನ್ಯೂಯಾರ್ಕ್‌ ಟೈಮ್ಸ್‌’ನಲ್ಲಿ ಮುಸ್ಸೂಲಿನಿ ಪುಸ್ತಕದ ವಿಮರ್ಶೆ ಪ್ರಕಟಗೊಂಡಿತು. ಪತ್ರಿಕೆಯಲ್ಲಿ, ಪ್ರಖ್ಯಾತ ವಿಮರ್ಶಕಿ ಡೊರೋತಿ ಪಾರ್ಕರ್‌ ಹೀಗೆ ಬರೆದಿದ್ದಳು- “ಮುಸ್ಸೂಲಿನಿಯ ಪುಸ್ತಕವನ್ನು
ಅಷ್ಟು ಸುಲಭವಾಗಿ ತಳ್ಳಿಹಾಕಬಾರದು. ಅದನ್ನು ಎತ್ತಿ, ನಿಮ್ಮ ಶಕ್ತಿಯೆಲ್ಲವನ್ನೂ ಉಪಯೋಗಿಸಿ ಎಷ್ಟು ದೂರಕ್ಕೆ ಸಾಧ್ಯವೋ ಅಷ್ಟು ದೂರಕ್ಕೆ
ಎಸೆಯಬೇಕು’.

Advertisement
Advertisement

Udayavani is now on Telegram. Click here to join our channel and stay updated with the latest news.

Next