ಹೊಸದಿಲ್ಲಿ : ಭಾರತದಲ್ಲಿ ಮುಸ್ಲಿಮರು ಜೀವಿಸಲೇ ಬಾರದು; ಅವರು ಪಾಕಿಸ್ಥಾನಕ್ಕೋ, ಬಾಂಗ್ಲಾದೇಶಕ್ಕೋ ಹೋಗಬೇಕು ಎಂದು ಬಿಜೆಪಿ ಸಂಸದ ವಿನಯ್ ಕಟಿಯಾರ್ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ವಂದೇ ಮಾತರಂ ಗೌರವಿಸದವರು; ರಾಷ್ಟ್ರ ಧ್ವಜವನ್ನು ಅವಮಾನಿಸುವವರು, ಪಾಕಿಸ್ಥಾನದ ಧ್ವಜವನ್ನು ಹಾರಿಸುವವವರಿಗೆ ಶಿಕ್ಷಿಸುವ ಕಾನೂನನ್ನು ತರುವ ಅಗತ್ಯವಿದೆ ಎಂದು ಕಟಿಯಾರ್ ಹೇಳಿದ್ದಾರೆ.
“ಭಾರತೀಯ ಮುಸ್ಲಿಮರನ್ನು ಪಾಕಿಸ್ಥಾನೀ ಎಂದು ಕರೆಯುವವರನ್ನು ಮೂರು ವರ್ಷ ಜೈಲಿಗೆ ಹಾಕುವ ಕಾನೂನನ್ನು ತರಬೇಕು ಎಂದು ಸಂಸದ ಅಸಾದುದ್ದೀನ್ ಓವೈಸಿ ಹೇಳಿರುವುದಕ್ಕೆ ಪ್ರತಿಯಾಗಿ ವಿನಯ್ ಕಟಿಯಾರ್ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಕಟಿಯಾರ್ “ಆಗ್ರಾದ ತಾಜಮಹಲ್ ಶೀಘ್ರವೇ ತೇಜ್ ಮಂದಿರ್ ಆಗಲಿದೆ’ ಎಂದು ಹೇಳಿದ್ದರು.
ಆಗ್ರಾದಲ್ಲಿ ತಾಜ್ ಮಹೋತ್ಸವ್ ನಡೆಯೋದು ಯಾವಾಗ ಎಂದು ಮಾಧ್ಯಮದವರು ಪ್ರಶ್ನೆ ಕೇಳಿದಾಗ ಕಟಿಯಾರ್ ಈ ರೀತಿ ಉತ್ತರಿಸಿದ್ದರು. ತಾಜ್ ಮತ್ತು ತೇಜ್ ನಡುವೆ ಅಂತಹ ದೊಡ್ಡ ವ್ಯತ್ಯಾಸವೇನೂ ಇಲ್ಲ ಎಂದವರು ಹೇಳಿದ್ದರು.