Advertisement

CAAಗೆ ಮುಸ್ಲಿಮರು ಹೆದರುವುದು ಬೇಡ: ಶಾ

01:05 AM Mar 21, 2024 | Team Udayavani |

ಹೊಸದಿಲ್ಲಿ: ಭಾರತದಲ್ಲಿ ಜಾರಿ ಮಾಡಲು ಹೊರಟಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯಾರದ್ದೇ ಪೌರತ್ವವನ್ನು ಕಿತ್ತುಕೊಳ್ಳುವುದಿಲ್ಲ. ಹೀಗಾಗಿ ಭಾರತದಲ್ಲಿರುವ ಮುಸ್ಲಿಂರು ಭಯಪಡುವ ಆವಶ್ಯಕತೆ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

Advertisement

ಮಾಧ್ಯಮವೊಂದರ ಸಂದರ್ಶನ ದಲ್ಲಿ ಮಾತನಾಡಿದ ಅವರು, ಸಿಎಎಗೆ ಸಂಬಂಧಿಸಿದಂತೆ ವಿಪಕ್ಷಗಳು ಸುಳ್ಳು ಗಳನ್ನು ಹಬ್ಬಿಸುತ್ತಿವೆ ಎಂದರು. ಸಿಎಎ ಜಾರಿಗೆ 4 ವರ್ಷಗಳ ಕಾಲ ಏಕೆ ತೆಗೆದುಕೊಳ್ಳಲಾಯಿತು ಎಂಬ ಪ್ರಶ್ನೆಗೆ, ಸಿಎ ಎಗೆ ಸಂಸತ್ತು ಒಪ್ಪಿಗೆ ನೀಡಿದ ಸಮಯದಲ್ಲಿ ಈ ಕಾಯ್ದೆಯ ಕುರಿತಾಗಿ ದೇಶಾದ್ಯಂತ ಸಾಕಷ್ಟು ಸುಳ್ಳುಗಳನ್ನು ಹರಡಲಾಗಿತ್ತು. ಹೀಗಾಗಿ ಜಾರಿ ಮಾಡುವುದು ತಡವಾಯಿತು ಎಂದರು.

ರಾಹುಲ್‌ ವಿರುದ್ಧ ಕಿಡಿ: ಚುನಾವಣ ಬಾಂಡ್‌ಗಳು ಸರಕಾರದ ಹಫ್ತಾ ವಸೂಲಿ ಎಂದಿದ್ದ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿರುವ ಅವರು, ರಾಹುಲ್‌ ಗಾಂಧಿ ಪಕ್ಷವೂ 1,600 ಕೋಟಿ ರೂ. ದೇಣಿಗೆ ಪಡೆದಿದೆ. ಇದು ಎಲ್ಲಿಂದ ಮಾಡಿದ ಹಫ್ತಾ ವಸೂಲಿ? ಬಾಂಡ್‌ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next