ಉಡುಪಿ: ಭಾರತ ದೇಶವನ್ನು ಮಾನವೀಯ ಬುನಾದಿಯ ಮೇಲೆ ನಿರ್ಮಿಸುವ ಜವಾಬ್ದಾರಿ ಮುಸ್ಲಿಮರಿಗೆ ಕೂಡ ಇದೆ. ಈ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯ ಸಶಕ್ತ ಮತ್ತು ಸಕ್ರಿಯವಾಗಬೇಕಾಗಿದೆ ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮಹಮ್ಮದ್ ಯಾಸೀನ್ ಮಲ್ಪೆ ಹೇಳಿದರು.
ರವಿವಾರ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ವತಿಯಿಂದ ಉಡುಪಿ ಬೀಡಿನಗುಡ್ಡೆಯ ಬಯಲು ರಂಗಮಂದಿರದಲ್ಲಿ “ದೇಶ ನಿರ್ಮಾಣಕ್ಕಾಗಿ ಸಮುದಾಯದ ಸಬಲೀಕರಣ’ ಧ್ಯೇಯ ವಾಕ್ಯದಲ್ಲಿ ಜರಗಿದ ಏಕತಾ ಸಮಾವೇಶದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಇಂದು ಆಡಳಿತ ನಡೆಸುವವರಿಗೆ ಜನರ ಪ್ರಾಣ-ಮಾನಕ್ಕಿಂತಲೂ ದನಗಳ ಪ್ರಾಣ ಅಮೂಲ್ಯವಾಗಿದೆ. ದೇಶವನ್ನು ಆರ್ಥಿಕವಾಗಿ ದಿವಾಳಿ ಮಾಡಲಾಗುತ್ತಿದೆ. ಬಡವರ ಹಣ ಕಸಿದು ಅಂಬಾನಿ, ಅದಾನಿ ಮೊದಲಾದವರ ಬೊಕ್ಕಸ ತುಂಬಿಸಲಾಗುತ್ತಿದೆ ಎಂದು ಅವರು ಹೇಳಿದರು.
ದೇಶ ಎಲ್ಲರದು: ದುರ್ಬಲ ಸಮುದಾಯದಿಂದ ದೇಶ ನಿರ್ಮಾಣದ ಕೆಲಸ ಸಾಧ್ಯವಿಲ್ಲ. ಅದಕ್ಕಾಗಿ ರಾಜಕೀಯವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಶಕ್ತವಾಗಬೇಕು. ಈ ದೇಶ ಯಾವುದೇ ಸಮುದಾಯಕ್ಕೆ ಸೇರಿದ ದೇಶವಲ್ಲ. ಮುಸ್ಲಿಂ ಸಮುದಾಯದವರು ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಇಂದು ಮುಸ್ಲಿಮರಿಂದಲೇ ದೇಶಪ್ರೇಮದ ಪ್ರಮಾಣಪತ್ರ ಕೇಳಲಾಗುತ್ತಿದೆ. ಭಾವನೆಗಳನ್ನು ಕೆರಳಿಸಲಾಗುತ್ತಿದೆ. ಹಿಂಸೆ ಮತ್ತು ದ್ವೇಷದ ಬುನಾದಿಯಲ್ಲಿ ದೇಶ ಕಟ್ಟುವ ಪ್ರಯತ್ನಗಳಾಗುತ್ತಿವೆ. ಅಲ್ಪಸಂಖ್ಯಾಕರು, ದಲಿತರು, ಕಾರ್ಮಿಕರು, ರೈತರು, ಜನಸಾಮಾನ್ಯರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಯಾಸಿನ್ ಮಲ್ಪೆ ಹೇಳಿದರು.
ಇತ್ತಿಹಾದೆ ಮಿಲ್ಲತ್ ಕೌನ್ಸಿಲ್‌ಅಧ್ಯಕ್ಷ ಮೌಲಾನ ತೌಕೀರ್ ರಝಾ ಖಾನ್ ಉದ್ಘಾಟನಾ ಭಾಷಣ ಮಾಡಿದರು. ಪತ್ರಕರ್ತ ಅಬ್ದುಸ್ಸಲಾಮ್ ಪುತ್ತಿಗೆ, ಹಲೀಮಾ ಸಾಬುj ಆಡಿಟೋರಿಯಂನ ಮಾಲಕ ಹಾಜಿ ಅಬ್ದುಲ್ ಜಲೀಲ್ ಉದ್ಯಾವರ, ರಾಜ್ಯ ಅಲ್ಪಸಂಖ್ಯಾಕರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ. ಗಫೂರ್, ಮಂಗಳೂರಿನ ಮಾಜಿ ಮೇಯರ್, ದ.ಕ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್, ದ.ಕ. ಮತ್ತು ಉಡುಪಿ ಜಮಿಯ್ಯತುಲ್ ಫಲಾಹ್ ಅಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ., ಉಡುಪಿ ಸುನ್ನಿ ಸಂಯುಕ್ತ ಜಮಾತ್ ಅಧ್ಯಕ್ಷ ಹಾಜಿ ಅಬ್ದುಲ್ಲಾ ನಾವುಂದ, ಮಂಗಳೂರು ಸೆಂಟ್ರಲ್ ಮುಸ್ಲಿಂ ಕಮಿಟಿ ಅಧ್ಯಕ್ಷ ಕೆ.ಎಸ್.ಎಂ. ಮಸೂದ್, ಭಟ್ಕಳ ಮಜಿÉಸ್ ಇನ್ಹಾಹ್ ವ ತಂಝೀಮ್ ಉಪಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಮಂಗಳೂರಿನ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಅಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ,
ಗಣ್ಯರಾದ ಹಾಜಿ ಅಬ್ದುಲ್ಲಾ ಪರ್ಕಳ, ಮುಹಮ್ಮದ್ ಶರೀಫ್, ಹಬೀಬ್ ಆಲಿ ಉಪಸ್ಥಿತರಿದ್ದರು.
ಮೌಲಾನಾ ಸಜ್ಜಾದ್ ನೋಮಾನಿ, ಡಾ| ಶೇಖ್ ಆರ್‌ಕೆ. ನೂರ್ ಮೊಹಮ್ಮದ್,ಕೆ.ಎಂ.ಶರೀಫ್, ಸೈಯದ್ ಸ ಆದತುಲ್ಲಾ ಹುಸೈನಿ, ಹಝÅತ್ ಚಿಶಿ¤ ಸೈಯದ್ ಝೈನುಲ್ ಆಬಿದೀನ್ ವಿಚಾರ ಮಂಡಿಸಿದರು. ಕೆ.ಸಲಾವುದ್ದೀನ್ ಅಬ್ದುಲ್ಲಾ ಠರಾವು ಮಂಡಿಸಿದರು. ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಉಪಾಧ್ಯಕ್ಷ ಅಶ್ಫಾಕ್ ಅಹಮದ್ ಸ್ವಾಗತಿಸಿದರು. ಜಿ.ಎಂ ಶರೀಫ್ ನಿರ್ವಹಿಸಿದರು.