ಮುಂಬೈ: ಡಾ.ಬಿ.ಆರ್.ಅಂಬೇಡ್ಕರ್ ಮೊಮ್ಮಗ, ವಿಬಿಎ ಪಕ್ಷದ ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್ ಮೊಘಲ್ ಸಾಮ್ರಾಜ್ಯದ ದೊರೆ ಔರಂಗಜೇಬ್ ಸಮಾಧಿಗೆ ಚಾದರ್ ಹೊದಿಸಿ ಪುಷ್ಪ ನಮನ ಸಲ್ಲಿಸಿದ ಘಟನೆ ವಿವಾದಕ್ಕೊಳಗಾಗಿರುವ ನಡುವೆಯೇ “ಭಾರತದಲ್ಲಿರುವ ಮುಸ್ಲಿಮರು ಔರಂಗಜೇಬನ ವಂಶಸ್ಥರಲ್ಲ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ:ಎದೆಗಾರಿಕೆಯ ನಾಯಕ ಬೇಕು: ವಿಪಕ್ಷ ನಾಯಕ ಸ್ಥಾನಕ್ಕೆ ಯತ್ನಾಳ್ ಪರ ಪ್ರತಾಪ್ ಸಿಂಹ ಬ್ಯಾಟಿಂಗ್
ಭಾರತದ ರಾಷ್ಟ್ರೀಯವಾದಿ ಮುಸ್ಲಿಮರು ಮೊಘಲ್ ದೊರೆ ಔರಂಗಜೇಬ್ ನನ್ನು ತಮ್ಮ ನಾಯಕ ಎಂದು ಗುರುತಿಸಿಕೊಳ್ಳಲು ಇಷ್ಟಪಡುವುದಿಲ್ಲ ಎಂದು ಫಡ್ನವೀಸ್ ತಿಳಿಸಿದ್ದಾರೆ. ಅಕೋಲಾ, ಸಂಭಾಜಿನಗರ್ ಮತ್ತು ಕೊಲ್ಹಾಪುರದಲ್ಲಿ ಏನು ನಡೆಯಿತು? ಇದೊಂದು ಆಕಸ್ಮಿಕ ಘಟನೆಯಲ್ಲ. ಆದರೆ ಇದೊಂದು ಪ್ರಯೋಗವಾಗಿದೆ. ರಾಜ್ಯಕ್ಕೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಔರಂಗಜೇಬ್ ನ ಅಭಿಮಾನಿಗಳು ಎಲ್ಲಿಂದ ಬಂದರು ಎಂದು ಪ್ರಶ್ನಿಸಿದ್ದಾರೆ.
ಔರಂಗಜೇಬ್ ನಮ್ಮ ನಾಯಕ ಹೇಗಾಗುತ್ತಾನೆ? ಛತ್ರಪತಿ ಶಿವಾಜಿ ಮಹಾರಾಜ್ ಮಾತ್ರ ನಮ್ಮ ಏಕೈಕ ರಾಜ. ಭಾರತದಲ್ಲಿರುವ ಮುಸ್ಲಿಮರು ಔರಂಗಜೇಬ್ ನ ವಂಶಸ್ಥರಲ್ಲ. ಔರಂಗಜೇಬ್ ನ ವಂಶಸ್ಥರು ಯಾರು? ಔರಂಗಜೇಬ್ ಹಾಗೂ ಆತನ ಪೂರ್ವಜರು ಹೊರಗಿನಿಂದ ಬಂದವರು ಎಂದು ಫಡ್ನವೀಸ್ ಹೇಳಿದ್ದಾರೆ.