Advertisement

ಮತ ಹಾಕದಿದ್ರೂ,ಮುಸ್ಲಿಮರಿಗೆ ಗೌರವ

03:45 AM Apr 22, 2017 | Team Udayavani |

ನವದೆಹಲಿ:  “ಮುಸ್ಲಿಮರು ಯಾವತ್ತೂ ಬಿಜೆಪಿಗೆ ಮತ ಹಾಕುವುದಿಲ್ಲ. ಆದರೂ, ನಮ್ಮ ಸರ್ಕಾರ ಅವರಿಗೆ ಸೂಕ್ತ ಗೌರವಾದರಗಳನ್ನು ನೀಡುತ್ತಿದೆ.’

Advertisement

ಇಂತಹುದೊಂದು ಹೇಳಿಕೆ ನೀಡಿರು ವುದು ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌. ನವದೆಹಲಿಯಲ್ಲಿ ಶುಕ್ರವಾರ ನಡೆದ ಮೈಂಡ್‌ಮೈನ್‌ ಎಂಬ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, “ನಾವು(ಬಿಜೆಪಿ) ದೇಶಾದ್ಯಂತ 13 ಮುಖ್ಯಮಂತ್ರಿಗಳನ್ನು ಹೊಂದಿದ್ದೇವೆ. ದೇಶವನ್ನು ನಾವೇ ಆಳುತ್ತಿದ್ದೇವೆ. ಮುಸ್ಲಿಮರು ನಮಗೆ ಮತ ಹಾಕುವುದಿಲ್ಲ ಎಂಬುದನ್ನು ನಾನು ಸ್ಪಷ್ಟವಾಗಿ ಹೇಳಬಯಸುತ್ತೇನೆ. ಹಾಗಿದ್ದರೂ, ಯಾವುದೇ ಕ್ಷೇತ್ರದಲ್ಲಿ ದುಡಿಯುತ್ತಿರುವ ಮುಸ್ಲಿಂ ವ್ಯಕ್ತಿಯನ್ನು ನಾವು ಬಲಿಪಶುವಾಗಿಸಿದ್ದೇವೆಯೇ? ನಾವು ಅವರನ್ನು ಕೆಲಸದಿಂದ ಕಿತ್ತು ಹಾಕಿದ್ದೇವಾ? ಅವರಿಗೆ ಸೂಕ್ತ ಗೌರವವನ್ನು ನೀಡಿಲ್ಲವೇ,’ ಎಂದು ಪ್ರಶ್ನಿಸಿದ್ದಾರೆ.

ಜತೆಗೆ, ತನ್ನ ಮೋಟಾರು ಸೈಕಲ್‌ ಅನ್ನು ಆ್ಯಂಬುಲೆನ್ಸ್‌ ಆಗಿ ಪರಿವರ್ತಿಸಿ ಸೇವೆ ಸಲ್ಲಿಸುತ್ತಿರುವ ಜಲಪೈಗುರಿಯ ಕರೀಮುಲ್‌ ಹಖ್‌ರನ್ನು ಪ್ರಧಾನಿ ಮೋದಿ   ಕೊಂಡಾಡಲಿಲ್ಲವೇ? ನಾವೇನು ಹಖ್‌ ನಮಗೆ ಮತ ಹಾಕಿಲ್ಲವೆಂದು ನಿರ್ಲಕ್ಷಿಸಿದೆವೇ ಎಂದೂ ಅವರು ಕೇಳಿದ್ದಾರೆ. ಇದೇ ವೇಳೆ, ಕೆಲವು ಪತ್ರಕರ್ತರು ಮತ್ತು ಎಡಪಂಥೀಯರು ಪ್ರಧಾನಿ ಮೋದಿ ಕುರಿತು ದ್ವೇಷ ಕಾರುತ್ತಿದ್ದಾರೆ ಎಂದೂ ಪ್ರಸಾದ್‌ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next