Advertisement

Madhya Pradesh: ಬಿಜೆಪಿಗೆ ಮತ ಹಾಕಿದ್ದಕ್ಕೆ ಮುಸ್ಲಿಂ ಮಹಿಳೆಯನ್ನು ಥಳಿಸಿದ ಸೋದರ ಮಾವ

03:27 PM Dec 09, 2023 | Team Udayavani |

ಭೋಪಾಲ್:‌ ಬಿಜೆಪಿ ಪಕ್ಷಕ್ಕೆ ಮತ ಹಾಕಿದ್ದಕ್ಕೆ ಮುಸ್ಲಿಂ ಮಹಿಳೆಯೊಬ್ಬರನ್ನು ಸಂಬಂಧಿಕನೊಬ್ಬ ಥಳಿಸಿರುವ ಘಟನೆ ಮಧ್ಯಪ್ರದೇಶದ ಸೆಹೋರ್‌ನಲ್ಲಿ ನಡೆದಿದೆ.

Advertisement

ಸಮೀನಾ ಬಿ(30) ಥಳಿತಕ್ಕೊಳಗಾದ ಮಹಿಳೆ.

ಸಮೀನಾ ಬಿ ಇತ್ತೀಚೆಗೆ ಮುಕ್ತಾಯ ಕಂಡ  ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಮತ ಹಾಕಿದ್ದರು. ಡಿಸೆಂಬರ್ 4, 2023 ರಂದು ಸೆಹೋರ್‌ನ ಅಹ್ಮದ್‌ಪುರ ಪ್ರದೇಶದಲ್ಲಿ ಬಿಜೆಪಿ ಪಕ್ಷ ಪ್ರಚಂಡ ವಿಜಯವನ್ನು ದಾಖಲಿಸಿದ ಬಳಿಕ ಅದರ ಸಂಭ್ರಮವನ್ನು ಸಮೀನಾ ಅವರು ಮಾಡಿದಾಗ ಸೋದರ ಮಾವ ಅವರಿಗೆ ಥಳಿಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಸಮೀನಾ ಅವರು ಬಿಜೆಪಿ ಪಕ್ಷದ ಜಯವನ್ನು ಸಂಭ್ರಮಿಸಿದ ವೇಳೆ ಆಕೆಯ ಸಂಬಂಧಿ ಸೋದರ ಮಾವ ಜಾವೇದ್ ಖಾನ್ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ನಿಂದಿಸಲು ಶುರು ಮಾಡಿದ್ದಾರೆ. ಈ ವೇಳೆ ಸಮೀನಾ ಅವರು ಜಾವೇದ್‌ ಅವರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಇದಕ್ಕೆ ಸಿಟ್ಟಾದ ಜಾವೇದ್‌ ಸಮೀನಾ ಅವರಿಗೆ ಕೋಲಿನಿಂದ ಥಳಿಸಲು ಶುರು ಮಾಡಿದ್ದಾರೆ. ಇದರಿಂದ ಅವರ ಕೈಗಳು ಮತ್ತು ಅವಳ ದೇಹದ ಇತರ ಭಾಗಗಳಿಗೆ ಗಾಯಗಳಾಗಿವೆ. ಇಷ್ಟು ಮಾತ್ರವಲ್ಲದೆ, ಬಿಜೆಪಿಗೆ ಬೆಂಬಲ ನೀಡಿದರೆ  ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಹೇಳಲಾಗಿದೆ.

ಸದ್ಯ ಪೊಲೀಸರು  ಸೆಕ್ಷನ್ 294 (ಸಾರ್ವಜನಿಕವಾಗಿ ಅಶ್ಲೀಲ ಪದಗಳ ಬಳಕೆಗೆ ಸಂಬಂಧಿಸಿದಂತೆ), ಸೆಕ್ಷನ್ 323, (ಯಾವುದೇ ವ್ಯಕ್ತಿಗೆ ಸ್ವಯಂಪ್ರೇರಣೆಯಿಂದ ನೋವುಂಟುಮಾಡುವ ಸಂಬಂಧ), ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆಗೆ ಸಂಬಂಧಿಸಿದ) ಮತ್ತು ಸೆಕ್ಷನ್ 34 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Advertisement

ಶೀಘ್ರದಲ್ಲಿ ಆರೋಪಿಯನ್ನು ಬಂಧಿಸಲಾಗುವುದೆಂದು ಪೊಲೀಸ್ ಅಧಿಕಾರಿಯೊಬ್ಬರು ಇಂಡಿಯಾ ಟುಡೇಗೆ ತಿಳಿಸಿದ್ದಾರೆ.

ಈ ಸಂಬಂಧ  ಸಮೀನಾ ಅವರು ಶುಕ್ರವಾರ(ಡಿ.8 ರಂದು) ಸೆಹೋರ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರವೀಣ್ ಸಿಂಗ್ ಅಧಾಯಚ್ ಅವರನ್ನು ಭೇಟಿ ಮಾಡಿ,  ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next