ಮುಂಬಯಿ: ಭಾರತದಲ್ಲಿ 26/11 ಮುಂಬಯಿ ದಾಳಿ ಸಹಿತ ಹಲವು ವಿಧ್ವಂಸಕ ಕೃತ್ಯ ಎಸಗಿರುವ ಪಾಕಿಸ್ಥಾನದ ಉಗ್ರ ಲಷ್ಕರ್ -ಎ-ತಯ್ಯಬ ಮತ್ತು ಜಮಾತ್ – ಉದ್ – ದಾವಾದ ಮುಖಂಡ ಹಾಫಿಜ್ ಸಯೀದ್‌ಗೆ ಶಿಕ್ಷೆ ವಿಧಿಸುವಂತೆ ವಿಶ್ವಸಂಸ್ಥೆಯನ್ನು ಆಗ್ರಹಿಸುವ ನಿರ್ಣಯವೊಂದನ್ನು 1000ಕ್ಕೂ ಅಧಿಕ ಮುಸ್ಲಿಂ ಧಾರ್ಮಿಕ ಮುಖಂಡರು ಅಂಗೀಕರಿಸಿದ್ದಾರೆ.
ಮದ್ರಸ ದಾರೂಲ್ ಅಲಿ ಹಸನ್ ಅಹ್ಲೆ ಸುನ್ನತ್‌ನ ಸಮಾವೇಶದಲ್ಲಿ, ಜಮಾತ್ -ಉದ್-ದಾವಾ ಸಹಿತ ಪಾಕ್‌ನ ಉಗ್ರ ಸಂಘಟನೆಗಳನ್ನು ತೀಕ್ಷ್ಣ ವಾಗಿ ಖಂಡಿಸಲಾಗಿದೆ. ನಿರ್ಣಯ ವನ್ನು ವಿಶ್ವಸಂಸ್ಥೆಯ ಭಯೋತ್ಪಾದನೆ ನಿಗ್ರಹ ಸಮಿತಿಯ ಅಧ್ಯಕ್ಷರಾಗಿರುವ ಅಬ್ದುಲ್ಲತೀಫ್ ಅಬೌಲತ್ತ ಹಾಗೂ ಪ್ರತಿ ಯನ್ನು ಪ್ರಧಾನಿ ನರೇಂದ್ರ ಮೋದಿಗೆ ಕಳುಹಿಸಿಕೊಡಲಾಗಿದೆ.
ಹಾಫಿಜ್ ಸಯೀದ್ ಮತ್ತು ಅವನ ನೇತೃತ್ವದ ಉಗ್ರ ಸಂಘಟನೆಗಳು ಜಾಗತಿಕ ಶಾಂತಿಗೆ ಅಪಾಯಕಾರಿ ಯಾಗಿವೆ. ಅವನು ಭಾರತದವನ್ನು ನಂಬರ್ ಒನ್ ಶತ್ರು ಎಂದು ಹೇಳು ತ್ತಾನೆ. ಆದರೆ ಹಾಫಿಜ್ ಇಸ್ಲಾಂ ಮತ್ತು ಮಾನವೀಯತೆಯ ದೊಡ್ಡ ಶತ್ರುವಾಗಿದ್ದಾನೆ ಎಂದು ನಿರ್ಣಯ ಮಂಡಿಸಿದ ಇಸ್ಲಾಮಿಕ್ ಡಿಫೆನ್ಸ್ ಸೈಬರ್ ಸೆಲ್ ಎಂಬ ಎನ್‌ಜಿಒದ ಅಧ್ಯಕ್ಷರಾಗಿರುವ ಡಾ| ಅಬ್ದುಲ್ ರೆಹಮಾನ್ ಅಂಜಾರಿಯ ಹೇಳಿದ್ದಾರೆ. 2015ರಲ್ಲಿ ಅಂಜಾರಿಯ ಐಸಿಸ್ ವಿರುದ್ಧ ಜಗತ್ತಿನ ಅತಿ ದೊಡ್ಡ ಫತ್ವಾ ಹೊರಡಿಸಿ ಸುದ್ದಿಯಾಗಿದ್ದರು. ಭಾರತದ 1000ಕ್ಕೂ ಅಧಿಕ ಮುಸ್ಲಿಮ್ ಧಾರ್ಮಿಕ ಮುಖಂಡರು ಮತ್ತು ಮತ ಪಂಡಿತರು ಈ ಫತ್ವಾಕ್ಕೆ ಸಹಿ ಹಾಕಿ ದ್ದರು. ನಿನ್ನೆ ಅಂಗಿಕàರಿಸಿರುವ ನಿರ್ಣಯ ಪಾಕ್‌ನಲ್ಲಿರುವ 60ಕ್ಕೂ ಅಧಿಕ ಉಗ್ರ ಸಂಘ ಟನೆಗಳನ್ನು ಹೆಸರಿ ಸಿದ್ದು, ಅವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ವಿಶ್ವಸಂಸ್ಥೆಯನ್ನು ಆಗ್ರಹಿಸಿದೆ.
ನೈತಿಕ ಬದ್ಧತೆ: ಇಸ್ಲಾಂ ಹೆಸರಲ್ಲಿ ಅಮಾಯಕ ಜನರನ್ನು ಸಾಯಿಸು ವವರನ್ನು ಮತ್ತು ಸಾಯಿಸುವವರಿಗೆ ಪ್ರೋತ್ಸಾಹ ನೀಡುವವರನ್ನು ವಿರೋಧಿ ಸುವುದು ನಮ್ಮ ನೈತಿಕ ಬದ್ಧತೆ. ಹಾಫಿಜ್ ಸಯೀದ್ ಯುವಕರಿಗೆ ಹಿಂಸಾ ಚಾರ ನಡೆಸಲು ಕುಮ್ಮಕ್ಕು ನೀಡುತ್ತಿರುವುದು ಸಂಶಯಾತೀತವಾಗಿ ಸಾಬೀತಾಗಿದೆ. ಹಾಫಿಜ್ ಮತ್ತು ಅವನು ಪ್ರತಿಪಾದಿಸುತ್ತಿರುವ ಸಿದ್ಧಾಂತವನ್ನು ವಿರೋಧಿಸುವುದು ಅಗತ್ಯ ಎಂದು ಮದ್ರಸ ದಾರೂಲ್ ಉಲೂಮ್ ಅಲಿ ಹಸನ್ ಅಹ್ಲೆ ಸುನ್ನತ್‌ನ ಪೋಷಕ ರಾಗಿರುವ ಮೌಲಾನ ಮೊಹಮ್ಮದ್ ಹಾಶೀಂ ಆಶ್ರಫಿ ಹೇಳಿದ್ದಾರೆ.
ಹಾಫಿಜ್ ಸಯೀದ್ ಪಾಕಿಸ್ಥಾನದಲ್ಲಿ ಮಿಲ್ಲಿ ಮುಸ್ಲಿಮ್ ಲೀಗ್ ಎಂಬ ರಾಜಕೀಯ ಪಕ್ಷ ಸ್ಥಾಪಿಸಿರುವುದಕ್ಕೂ ಸಮಾವೇಶದಲ್ಲಿ ಕಳವಳ ವ್ಯಕ್ತವಾಗಿದೆ. ಪಾಕಿಸ್ಥಾನ ಅಣ್ವಸ್ತ್ರ ಹೊಂದಿರುವ ದೇಶವಾಗಿದ್ದು, ಒಂದು ವೇಳೆ ಅವನ ಪಕ್ಷ ಅಧಿಕಾರಕ್ಕೆ ಬಂದರೆ ಉಗ್ರರ ಕೈಗೆ ಅಧಿಕೃತವಾಗಿ ಅಣ್ವಸ್ತ್ರಗಳು ಸಿಕ್ಕಿ ದಂತಾಗುತ್ತದೆ. ಇದು ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ದೊಡ್ಡ ಬೆದರಿಕೆಯಗಿ ಪರಿಣಮಿಸಬಹುದು. ಅವನು ಜಾಗತಿಕವಾಗಿ ಮುಸ್ಲಿಮರ ಮೇಲೆ ಪ್ರಭಾವ ಬೀರಿ ಇನ್ನಷ್ಟು ಯುವಕರನ್ನು ಮತಾಂದರನ್ನಾಗಿ ಮಾಡ ಬಹುದು ಎಂದು 13 ಪುಟಗಳ ನಿರ್ಣಯದಲ್ಲಿ ಹೇಳಲಾಗಿದೆ.