Advertisement

Good Fortune: ಅಯೋಧ್ಯೆ ರಾಮಮಂದಿರದ ಕೆತ್ತನೆ ಕೆಲಸದಲ್ಲಿ ಮುಸ್ಲಿಂ ಕುಶಲಕರ್ಮಿಗಳು

11:45 AM Oct 28, 2023 | sudhir |

ಉತ್ತರ ಪ್ರದೇಶ: ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಯ ದಿನಾಂಕ ಸಮೀಪಿಸುತ್ತಿದ್ದಂತೆ, ಉತ್ತರ ಪ್ರದೇಶದ ಫತೇಪುರ್ ಸಿಕ್ರಿ ಮತ್ತು ಖೇರಗಢ್‌ನಲ್ಲಿರುವ ಕುಶಲಕರ್ಮಿಗಳು ದೇವಾಲಯದಲ್ಲಿ ಬಳಸಲಾಗುವ ಕೆಂಪು ಮರಳುಗಲ್ಲಿನ ಮೇಲೆ ಅನನ್ಯ ಕೆತ್ತನೆಗಳನ್ನು ರಚಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ.

Advertisement

ವಿಶೇಷತೆ ಏನೆಂದರೆ ಇಲ್ಲಿ ನಡೆಯುತ್ತಿರುವ ಕೆತ್ತನೆ ಕೆಲಸಗಳಲ್ಲಿ ಮುಸ್ಲಿಂ ಕುಶಲಕರ್ಮಿಗಳು ಸೇರಿರುವುದು, ಇಲ್ಲಿರುವ ಕುಶಲಕರ್ಮಿಗಳಲ್ಲಿ ಕೆಲವೊಬ್ಬರು ಮುಸ್ಲಿಂ ಕುಶಲಕರ್ಮಿಗಳು ಇದ್ದು ರಾಮ ಮಂದಿರದ ಕಂಬಗಳ ಕೆತ್ತನೆ ಕೆಲಸದಲ್ಲಿ ತೊಡಗಿದ್ದಾರೆ. ಇಲ್ಲಿರುವ ನೂರಾರು ಕಂಬಗಳಲ್ಲಿ ಮೂಡಿ ಬರುವ ಕೆತ್ತನೆಗಳಲ್ಲಿ ಇವರ ಕೆತ್ತನೆಯ ಕೆಲಸಗಳು ಅಡಕವಾಗಿವೆ ಎಂಬುದು ಸಂತಸದ ವಿಷಯ.

ಆಗ್ರಾ ಮೂಲದ ಎರಡು ಕಂಪನಿಗಳಾದ ಜೈ ಕನ್‌ಸ್ಟ್ರಕ್ಷನ್ಸ್ ಮತ್ತು ರಜಪೂತ್ ಎಂಟರ್‌ಪ್ರೈಸಸ್‌ನ 65 ಕುಶಲಕರ್ಮಿಗಳು ರಾಮಮಂದಿರ ನಿರ್ಮಾಣದಲ್ಲಿ ತೊಡಗಿದ್ದಾರೆ. ಈ ಕುಶಲಕರ್ಮಿಗಳು ಸಾಂಪ್ರದಾಯಿಕ ಉಪಕರಣಗಳನ್ನು ಬಳಸಿ ಕೆತ್ತನೆಯ ಕೆಲಸಗಳನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ.

ಸದ್ಯ ಅಯೋಧ್ಯೆ ರಾಮಮಂದಿರದ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದ್ದು 2024ರ ಜನವರಿ 22ರಂದು ಶ್ರೀರಾಮ ಮಂದಿರ ಉದ್ಘಾಟನೆಗೆ ಮುಹೂರ್ತ ಫಿಕ್ಸ್ ಆಗಿದೆ. ಪ್ರಧಾನ ಮಂತ್ರಿ ನಂರೇಂದ್ರ ಮೋದಿ ಅವರು ಇತರ ಗಣ್ಯರ ಸಮ್ಮುಖದಲ್ಲಿ ರಾಮಮಂದಿರದ ಉದ್ಘಾಟನೆಯನ್ನು ಮಾಡಲಿದ್ದಾರೆ.

ಇದನ್ನೂ ಓದಿ: E-mail: 20 ಕೋಟಿ ಕೊಡಿ ಇಲ್ಲವಾದರೆ… ಮುಖೇಶ್ ಅಂಬಾನಿಗೆ ಇ ಮೇಲ್ ಮೂಲಕ ಕೊಲೆ ಬೆದರಿಕೆ

Advertisement
Advertisement

Udayavani is now on Telegram. Click here to join our channel and stay updated with the latest news.

Next