Advertisement
ಅವರು ಕಾಸರಗೋಡಿನ ಸಾಹಿತ್ಯಿಕ- ಸಾಂಸ್ಕೃತಿಕ ಸಂಸ್ಥೆ ರಂಗಚಿನ್ನಾರಿ, ಗೋವಿಂದ ಪೈ ಸ್ಮಾರಕ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ಮಂಜೇಶ್ವರ ಗೋವಿಂದ ಪೈ ನಿವಾಸ ಗಿಳಿವಿಂಡುವಿನಲ್ಲಿ ಏರ್ಪಡಿಸಿದ “ಶ್ರಾವಣ ಕುಶಲೋಪರಿ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
Related Articles
Advertisement
ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್‌ನ ಜತೆ ಕಾರ್ಯದರ್ಶಿ ಎಂ.ಜೆ. ಕಿಣಿ ಮಾತನಾಡಿ “ಗಿಳಿವಿಂಡು’ ಸ್ಮಾರಕದಲ್ಲಿ ಪ್ರತೀ ತಿಂಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆಯಲ್ಲದೆ, ಮತ್ತಷ್ಟು ಸಾಹಿತ್ತಿಕ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು. ಈ ಬಗ್ಗೆ ಎಲ್ಲರ ಸಹಕಾರ ಕೋರುತ್ತಿದ್ದೇವೆ ಎಂದರು.
ಖ್ಯಾತ ವೈದ್ಯ ಡಾ| ರಮಾನಂದ ಬನಾರಿ, ಪಂಚಾಯತ್ ವಾರ್ಡ್ ಸದಸ್ಯೆ ಸುಪ್ರಿಯಾ ಪೈ, ಬಿ.ವಿ. ಕಕ್ಕಿಲ್ಲಾಯ, ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅರವಿಂದ ಕರ್ಕಿಕೋಡಿ, ರಂಗಚಿನ್ನಾರಿ ಸಂಸ್ಥೆಯ ನಿರ್ದೇಶಕ ಸತ್ಯನಾರಾಯಣ ಕೆ., ಕಾಸರಗೋಡು ಚಿನ್ನಾ ಉಪಸ್ಥಿತರಿದ್ದರು.
ಟ್ರಸ್ಟ್‌ನ ಕಾರ್ಯದರ್ಶಿ ಆರ್. ಜಯಾನಂದ ಸ್ವಾಗತಿಸಿದರು. ಖ್ಯಾತ ಗಾಯಕಿ ಪ್ರಭಾ ನಾಯಕ್ ತಂಡದವರಿಂದ ಪ್ರಾರ್ಥನೆ ಹಾಡಲಾಯಿತು.
ಪ್ರಖ್ಯಾತ ಸುಗಮ ಸಂಗೀತ ಗಾಯಕರಾದ ವೈ.ಕೆ.ಮುದ್ದುಕೃಷ್ಣ ಸೀಮಾ ರಾಯ್ಕರ್, ಕಿಶೋರ್ ಪೆರ್ಲ, ಉಮೇಶ್ ಮುಂಡಳ್ಳಿ, ಪೃಥ್ವೀ ನಾಯಕ್, ಪ್ರಜ್ಞಾ ನಾಯಕ್, ಶ್ವೇತಾ ಪೈ, ಪ್ರಭಾ ನಾಯಕ್ ಮುಂತಾದವರು ಭಾವ, ಭಕ್ತಿ, ಜಾನಪದ ಗೀತೆಗಳನ್ನು ಹಾಡಿದರು.
ಪ್ರಾಸ್ತಾವಿಕ ಮಾತನಾಡಿದ ರಂಗ ಚಿನ್ನಾರಿಯ ನಿರ್ದೇಶಕ ಕಾಸರಗೋಡು ಚಿನ್ನಾ ಅವರು ಮುಂದಿನ ದಿನಗಳಲ್ಲಿ ರಂಗಚಿನ್ನಾರಿಯು ಮಂಜೇಶ್ವರ ತಾಲೂಕಿನ ವಿವಿಧ ಹಳ್ಳಿ ಪ್ರದೇಶಗಳಲ್ಲಿ ಕಾರ್ಯ ಕ್ರಮಗಳನ್ನು ಏರ್ಪಡಿಸುವ ಮಾಹಿತಿ ಯನ್ನು ನೀಡಿ, ರಂಗಚಿನ್ನಾರಿಯ ಚಟು ವಟಿಕೆಗಳನ್ನು ಹೇಳಿದರು. ಗೋವಿಂದ ಪೈ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ| ಕಮಲಾಕ್ಷ ಕಾರ್ಯಕ್ರಮ ನಿರೂಪಿಸಿದರು. ಶ್ರೀಮದ್ ಅನಂತೇಶ್ವರ ದೇವಸ್ಥಾನದ ವತಿಯಿಂದ ಭೋಜನದ ವ್ಯವಸ್ಥೆಯನ್ನು ಮಾಡಲಾಯಿತು. ಮಂಜೇಶ್ವರ ಗೋವಿಂದ ಪೈ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶಿವಶಂಕರ ಪಿ. ವಂದಿಸಿದರು.