Advertisement

Music Programme: ಸಂಗೀತ ರಸಿಕರನ್ನು ರಂಜಿಸಿದ ಮಳೆಗಾಲದ ರಾಗಗಳ ಗಾಯನ

01:18 AM Jul 07, 2024 | Team Udayavani |

ಸ್ವರಾನಂದ್‌ ಪ್ರತಿಷ್ಠಾನ, ಮಂಗಳೂರು ಇದರ ಆಶ್ರಯದಲ್ಲಿ ಮಳೆಗಾಲದ ರಾಗಗಳ ಮೇಲಿನ ವಿಶೇಷ ಕಾರ್ಯಕ್ರಮ ಇತ್ತೀಚೆಗೆ ಮಂಗಳೂರಿನ ಬಿ.ಇ.ಎಂ. ಹೈಸ್ಕೂಲ್‌ನ ಸಭಾ ಭವನದಲ್ಲಿ ನಡೆಯಿತು. ರಾತ್ರಿ 8.30ಕ್ಕೆ ಆರಂಭವಾದ ಈ ಕಾರ್ಯಕ್ರಮವು ಗಾಯಕರಾದ ಬನಾರಸ್‌ನ ಪಂಡಿತ್‌ ರಿತೇಶ್‌ ಮಿಶ್ರಾ ಹಾಗೂ ಪಂಡಿತ್‌ ರಜನೀಶ್‌ ಮಿಶ್ರಾ ಸಹೋದರರು ವರ್ಷ ಋತುವಿನ ಮೇಘ… ಮಲ್ಹಾರ್‌ ಹಾಗೂ ಮಿಯಾ ಮಲ್ಹಾರ್‌ ರಾಗಗಳನ್ನು ಪ್ರಸ್ತುತಪಡಿಸಿ ಕೊನೆಯಲ್ಲಿ ರಾಗ್‌ ಜೈಜವಂತಿಯಲ್ಲಿ ಮಧ್ಯ ಲಯ್‌ ತೀನ್‌ ತಾಳದ ಒಂದು ಬಂದಿಶ್‌ ಹಾಗೂ ಧೃತ್‌ ಏಕ್‌ ತಾಳದಲ್ಲಿ ಒಂದು ಸುಂದರ ತರಾನ ಹಾಡಿ ಸಂಗೀತ ರಸಿಕರನ್ನು ರಂಜಿಸಿದರು.

Advertisement

ತಬಲಾದಲ್ಲಿ ಭಾರವಿ ದೇರಾಜೆ ಸುರತ್ಕಲ್‌ ಹಾಗೂ ಸಂವಾದಿನಿಯಲ್ಲಿ ಪ್ರಸಾದ್‌ ಕಾಮತ್‌ ಉಡುಪಿ ಅಲ್ಲದೆ ತಾನ್ಪುರಾದಲ್ಲಿ ದಯಾಕರ್‌ ಭಟ್‌ ಹಾಗೂ ನಾಗೇಂದ್ರ ನಾಯಕ್‌ ಸಹಕರಿಸಿದರು. ತೇಜಸ್ವಿ ಜೂನಿಯರ್‌ ಶಂಕರ್‌ ಕಾರ್ಯಕ್ರಮ ನಿರ್ವಹಣೆಯನ್ನು ಮಾಡಿದರು.

ಕಳೆದ ಆರು ತಿಂಗಳ ಹಿಂದೆ ಹುಟ್ಟಿಕೊಂಡ ಈ ಸ್ವರಾನಂದ ಪ್ರತಿಷ್ಠಾನವು ಅಹೋರಾತ್ರಿ ಕಛೇರಿ ಸರಣಿಯೊಂದಿಗೆ ಪ್ರಾರಂಭಿಸಿ ಈಗಾಗಲೇ ಹದಿಮೂರು ಸಂಗೀತ ಗೋಷ್ಠಿಗಳನ್ನು ಆಯೋಜಿಸಿದೆ. ಪ್ರಸಿದ್ಧ ಕಲಾವಿದರುಗಳನ್ನು ಆಮಂತ್ರಿಸಿ ಕಛೇರಿಗಳನ್ನು ಆಯೋಜಿಸುವುದರ ಜತೆಗೆ ಸ್ಥಳೀಯ ಪ್ರತಿಭೆಗಳಿಗೂ ಪ್ರೋತ್ಸಾಹ ನೀಡುತ್ತಿದೆ. ಬೈಠಕ್‌ ಮಾದರಿಯಲ್ಲಿ ನಡೆಯುವ ಈ ಸಂಗೀತ ಕಾರ್ಯಕ್ರಮಗಳಲ್ಲಿ ಕಲಾವಿದ ಹಾಗೂ ಪ್ರೇಕ್ಷಕರ ನಡುವಿನ ಅಂತರ ಬಹಳ ಕಡಿಮೆ ಇರುವುದರಿಂದ ಕಲಾವಿದರಿಗೂ ಹಾಗೂ ಪ್ರೇಕ್ಷಕರಿಗೆ ಉತ್ತಮ ರಸಾನುಭವವನ್ನು ನೀಡುತ್ತಿದೆ.

- ಲಕ್ಷ್ಮೀ ಶಂಕರ್‌, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next