Advertisement

ಜಂಜಾಟದಿಂದ ಮುಕ್ತರಾಗಲು ಸಂಗೀತ ಜೀವಾಮೃತ

06:51 PM Apr 11, 2022 | Team Udayavani |

ಗೋಕಾಕ: ಸಂಗೀತವು ಸಮಸ್ತ ಜೀವರಾಶಿಗಳಿಗೆ ಜೀವಾಮೃತವನ್ನು ನೀಡುತ್ತದೆ. ಮನುಷ್ಯ ಬದುಕಿನ ಜಂಜಾಟದಿಂದ ಸಲೀಸಾಗಿ ಹೊರಬರಲು ಸಂಗೀತವು ದಿವ್ಯವಾದುದು ಎಂದು ಕುಂದರಗಿ ಅಡವಿಸಿದ್ದೇಶ್ವರ ಮಠದ ಶ್ರೀ ಅಮರಸಿದ್ದೇಶ್ವರ ಸ್ವಾಮಿಗಳು ನುಡಿದರು.

Advertisement

ನಗರದ ನ್ಯೂ ಇಂಗ್ಲಿಷ್‌ ಸ್ಕೂಲ್‌ ಆವರಣದಲ್ಲಿ ಶನಿವಾರ ಗೋಕಾಕ ತಾಲೂಕು ಪತ್ರಕರ್ತ ಸಂಘ ಹಾಗೂ ರಾಹುಲ್‌ ಸೊಂಟಕ್ಕಿ ಟ್ರಸ್ಟ್‌ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂಗೀತ ಸಂಭ್ರಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ನೋವುಗಳನ್ನು ಮರೆಸುವ ಔಷಧ ಸಂಗೀತದಲ್ಲಿದೆ. ಸರ್ವ ರೋಗಕ್ಕೂ ಸಂಗೀತ ಮದ್ದು ಎನ್ನುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ, ತುಂಬಾ ನೋವಾದಾಗ, ಜೀವನದಲ್ಲಿ ಜಿಗುಪ್ಸೆಯಾದಾಗ ಸಂಗೀತ ಕೇಳಿದರೆ ಮನಸ್ಸು ಪ್ರಫುಲ್ಲ ಆಗುತ್ತದೆ ಎಂದರು.

ಗೋಕಾಕ ಶೂನ್ಯ ಸಂಪಾದನಾ ಮಠದ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸಂಗೀತಕ್ಕೆ ಇನ್ನೊಂದು ಹೆಸರು ದೇವಭಾಷೆ. ಎಲ್ಲಾ ಕಲೆಗಳಿಗಿಂತ ಸಂಗೀತವು ಅತ್ಯಂತ ಶ್ರೇಷ್ಠವಾದ ಕಲೆ ಎಂದರು. ಕಾರ್ಮಿಕ ಮುಖಂಡ ಅಂಬಿರಾವ್‌ ಪಾಟೀಲ ಮಾತನಾಡಿ, ನಗರದಲ್ಲಿ ಸಂಗೀತ ಸಂಭ್ರಮದಂಥ ಕಾರ್ಯಕ್ರಮಗಳು ಇನ್ನೂ ಹೆಚ್ಚೆಚ್ಚು ನಡೆಯಲಿ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ. ಬಳಿಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ನಗರ ಘಟಕ ಅಧ್ಯಕ್ಷ, ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಭೀಮಶಿ ಭರಮಣ್ಣವರ, ಗೋಕಾಕ ಪತ್ರಕರ್ತರ ಸಂಘದ ಅಧ್ಯಕ್ಷ ಮನೋಹರ ಮ್ಯಾಗೇರಿ, ರಾಹುಲ ಸೊಂಟಕ್ಕಿ ಟ್ರಸ್ಟ್‌ ಅಧ್ಯಕ್ಷ ಲಕ್ಷ್ಮಣ ಸೊಂಟಕ್ಕಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement

ವಿವಿಧ ಕ್ಷೇತ್ರದ ಸಾಧಕರಾದ ನಿರಂಜನ ಬನ್ನಿಶೆಟ್ಟಿ,ಮೋಹನ ಡಿ.ಆರ್‌., ರಾಘು ಹೊಸಮನಿ, ಸಚೀನ ಸಮಯ, ಸಂಜು ಖನಗಾಂವಿ, ಶ್ರೀಕಾಂತ ರತನ್‌, ಶ್ರವಣ ಮನ್ನಿಕೇರಿ, ಪ್ರಶಾಂತ ಕುರಬೇಟ, ಬಾಬುಲಾಲ, ಜಾವೇದ ಗೋಕಾಕ, ಸುನೀಲ ಮಾಂಗಲೇಕರ, ಯುಸೂಫ ಫಿರಜಾದೆ, ಪವನ ಮಹಾಲಿಂಗಪುರ ಅವರನ್ನು ಸನ್ಮಾನಿಸಲಾಯಿತು. ರಮೇಶ ಸಾವಳಗಿ, ಯಲ್ಲೇಶಕುಮಾರ ನಿರೂಪಿಸಿದರು. ನಾಡಿನ ಖ್ಯಾತ ಕಲಾವಿದರಾದ ಕುರಿಗಾಹಿ ಹನುಮಂತ, ಶ್ರೀರಾಮ ಕಾಸರ, ಶೀಲಾ ಹಿರೇಮಠ, ಅಜಯ ಸಾರಾಪುರ, ಸೇರಿದಂತೆ ಅನೇಕ ಕಲಾವಿದರು ತಮ್ಮ ಹಾಡಿನ ಮೂಲಕ ಮನಸೂರೆಗೊಂಡರು.

ಗೋಕಾಕ ಜಿಲ್ಲೆ ಅಥವಾ ಪ್ರತ್ಯೇಕ ರಾಜ್ಯ 
ಸರ್ಕಾರವೇ ಗೋಕಾಕನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಿದರೆ ಗೋಕಾಕ ಜಿಲ್ಲೆ ಮಾತ್ರ ಆಗುತ್ತದೆ. ನಾವಾಗಿಯೇ ಹೋರಾಟಕ್ಕಿಳಿದರೆ ಗೋಕಾಕನ್ನು ಜಿಲ್ಲೆಯಾಗಿ ಪಡೆಯುವುದರ ಜೊತೆಗೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವನ್ನೂ ಪಡೆಯುತ್ತೇವೆ ಎಂದು ಕುಂದರಗಿ ಅಡವಿಸಿದ್ದೇಶ್ವರ ಮಠದ ಶ್ರೀ ಅಮರಸಿದ್ದೇಶ್ವರ ಸ್ವಾಮಿಗಳು ಎಚ್ಚರಿಕೆ ನೀಡಿದರು. ಗೋಕಾಕ ತಾಲೂಕಿಗೆ ಜಿಲ್ಲೆ ಆಗುವ ಎಲ್ಲ ಅರ್ಹತೆ ಇದೆ. ಆದಷ್ಟು ಬೇಗ ಗೋಕಾಕ ಜಿಲ್ಲೆಯಾಗಿ ಸರ್ಕಾರ ಘೋಷಣೆ ಮಾಡಬೇಕು. ಬೆಳಗಾವಿ ಜಿಲ್ಲೆ ವಿಭಜನೆ ಮಾಡಿ ಗೋಕಾಕಿಗೆ ಜಿಲ್ಲೆಯ ಸ್ಥಾನಮಾನ ನೀಡಬೇಕು ಎಂದು ಕುಂದರಗಿ ಸ್ವಾಮೀಜಿ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next