Advertisement
ಮೊದಲ ದಿನ ಎನ್.ಜೆ. ನಂದಿನಿಯವರು ಕಾಂಬೋಜಿ ಅಟತಾಳ ವರ್ಣವನ್ನು ಆರಂಭಿಸಿ ತೋಡಿ ರಾಗದ ಕಾರ್ತಿಕೇಯ ಗಾಂಗೇಯ ತನಯ ಕೃತಿಯಲ್ಲಿ ಶೋತೃಗಳನ್ನು ಸೆರೆ ಹಿಡಿದರು.ಕನ್ನಡ ರಾಗದಲ್ಲಿ ನಿನ್ನಾಡನೇ ನೀರಾಜಾಕ್ಷಿ, ಅಹಿರಿ ರಾಗದ ಮಾಯಮ್ಮಾ, ಜಯಂತಿ ಶ್ರೀ ರಾಗದ ಮರುಗೇಲರಾ, ಕೇದಾರಗೌಳದ ಸರಗುಣ ಪಾಲಿಂಪ, ಪಶುಪತಿಪ್ರಿಯ ರಾಗದಲ್ಲಿ ಶರವಣ ಭವ ಕೀರ್ತನೆಗಳ ಪ್ರಸ್ತುತಿಗಳನ್ನು ನಿರೂಪಿಸಿದರು.
Related Articles
Advertisement
ಮುಂದೆ ಕಾನಡ ರಾಗ – ತಾನ – ಪಲ್ಲವಿ. ಪಾಲಿಂಚು…ಶ್ರೀರಾಮಚಂದ್ರಾ ನನ್ನು ಪಾಲಿಂಚು… ಖಂಡ ತ್ರಿಪುಟದಲ್ಲಿ ಸ್ವರಪ್ರಸ್ತಾರ, ರಾಗಮಾಲಿಕೆ (ಮಂದಾರಿ, ಆನಂದಭೈರವಿ ಸುರುಡಿ)ಉತ್ತಮವಾಗಿತ್ತು. ದೇವಕಿ ನಂದನ ಮಾಂಡ್ ರಾಗದ ದೇವರ ನಾಮದೊಂದಿಗೆ ಕಛೇರಿಯನ್ನು ಮುಕ್ತಾಯಗೊಳಿಸಿದರು. ವಯಲಿನ್‌ನಲ್ಲಿ ನಳಿನಾ ಮೋಹನ್ ಮತ್ತು ಮೃದಂಗದಲ್ಲಿ ಕುಂಭಕೋಣಂ ಸ್ವಾಮಿನಾಥನ್ ಸಹಕಾರ ನೀಡಿದರು.
ನಾಲ್ಕನೇ ದಿನ ಚಂದನ್‌ಕುಮಾರ್ ಅವರ ಕೊಳಲು ವಾದನ ಕಛೇರಿ ನಡೆಯಿತು.ಅವರು ನಾಟಕುರುಂಜ ಶರ್ಣದೊಂದಿಗೆ ಕಛೇರಿಯನ್ನು ಆರಂಭಿಸಿದರು. ನಾಟ ರಾಗದಲ್ಲಿ ಮಹಾಗಣಪತಿಂ, ದ್ವಿಜಾವಂತಿ ರಾಗದಲ್ಲಿ ಅಖೀಲಾಂಡೇಶ್ವರಿ, ಕುಂತಲವರಾಳಿ ರಾಗದಲ್ಲಿ ಬೋಗೀಂದ್ರ ಶಾಹಿನಂ, ಬೃಂದಾವನ ಸಾರಂಗದಲ್ಲಿ ಕಮಲಾಸ್ತಕುಲ ಕೀರ್ತನೆ ,ಬಿಂದುಮಾಲಿನಿಯಲ್ಲಿ ಎಂತ ಮಧ್ದೋ ಉತ್ತಮವಾಗಿತ್ತು. ಮತ್ತೂರು ಆರ್. ಶ್ರೀನಿಧಿ ವಯಲಿನ್‌ನಲ್ಲಿ ,ಅರ್ಜುನ್ ಕುಮಾರ್ ಮೃದಂಗದಲ್ಲಿ ಹಾಗೂ ಗಿರಿಧರ್ ಉಡುಪ ಘಟಂನಲ್ಲಿ ಸಹಕರಿಸಿದರು.
ಕೊನೆಯ ದಿನ ಅಭಿಷೇಕ್ ರಘುರಾಂ ಕಛೇರಿ ನೀಡಿದರು. ಪಂಚರತ್ನದಂತಹ ವಿಶಿಷ್ಟ ರಚನೆಗಳನ್ನು ಮನೋಧರ್ಮಕ್ಕೆ ಅನುಗುಣವಾಗುವ ಕೃತಿಗಳ ರೂಪದಲ್ಲಿ ಹಾಡಲು ಸಾಧ್ಯವೇ ಎನ್ನುವ ಪ್ರಯತ್ನವನ್ನು ಅವರು ಮಾಡಿ ಯಶಸ್ವಿಯಾಗಿದ್ದಾರೆ.
ನವರಾಗಮಾಲಿಕೆಯಲ್ಲಿ ವಲಚಿ ,ವರ್ಣ, ನಾಟ ರಾಗದಲ್ಲಿ ನಿನ್ನೇ ಭಜನಾ, ದೇವಾಮೃತ ವರ್ಷಿಣಿ ರಾಗದಲ್ಲಿ ಎವರನೀ , ಕಲ್ಯಾಣಿ ರಾಗದಲ್ಲಿ ಅಮ್ಮ ದಾನಮ್ಮ ಉತ್ತಮ ಪ್ರಸ್ತುತಿಯಾಗಿತ್ತು. ರಂಜನಿ ಮಾಲದಲ್ಲಿ ರಂಜನಿ ಮೃದುಪಂಕಜಲೋಚನಿ ಕೃತಿಯಲ್ಲಿ ಅಭಿಷೇಕ್ ಉತ್ತಮ ಕೆಲಸ ಮಾಡಿದರು. ಖಮಾಚ್ ರಾಗದಲ್ಲಿ ರಾಮಜೂಟಿ ಹಾಗೂ ಕೆಲವು ದೇವರನಾಮಗಳ ಪ್ರಸ್ತುತಿಗಳೊಂದಿಗೆ ಕಛೇರಿ ಸಂಪನ್ನಗೊಂಡಿತು. ವಿಠಲ್ ರಂಗನ್ ವಯಲಿನ್ ನುಡಿಸಿದರೆ, ಅರ್ಜುನ್ ಕುಮಾರ್ ಹಾಗೂ ಗಿರಿಧರ್ ಉಡುಪ ಮೃದಂಗ, ಘಟಂನಲ್ಲಿ ಸಹಕರಿಸಿದರು.
ಈ ಉತ್ಸವದ ಕಿರಿಯರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಶ್ರೀಶ ಪಿ. ಆರ್. ಖರಹರಪ್ರಿಯ ರಾಗದಲ್ಲಿ ಪಕ್ಕಲ ನಿಲಬಡಿ ಪ್ರಸ್ತುತಪಡಿಸಿದರು. ಧನಶ್ರೀ ಶಬರಾಯ ವಯಲಿನ್ ಸೋಲೋ ವಾದನದಲ್ಲಿ ಮಂದಾರಿ ರಾಗದ ವರ್ಣ, ವರವಲ್ಲಭ ಬೇಗಡೆ ರಾಗದಲ್ಲಿ ಶ್ರೀ ಗುರುಗುಹ ಶುದ್ಧ ಸಾವೇರಿ ರಾಗದಲ್ಲಿ, ಬಿರಾನವಲಿಚ್ಚಿ ಕಲ್ಯಾಣಿ ರಾಗದಲ್ಲಿ ವೆಂಕಟಾಚಲನಿಲಯಂ ಸಿಂಧುಭೈರವಿ ರಾಗದಲ್ಲಿ ಪ್ರಸ್ತುತಪಡಿಸಿದರು.
ರಕ್ಷಿತಾ ರಮೇಶ್ ವೀಣಾ ವಾದನದಲ್ಲಿ ಭೈರವಿ ರಾಗದ ತನಯುನಿ ಬ್ರೋವ ಉತ್ತಮವಾಗಿ ಮೂಡಿಬಂತು. ನಿಕ್ಷಿತ್ ಟಿ. ಪುತ್ತೂರು ಮೃದಂಗದಲ್ಲಿ, ಕಲಾಮಂಡಲ ಶೈಜು ಘಟಂನಲ್ಲಿ ಸಹಕರಿಸಿದರು.ಹಿರಿಯರ ವಿಭಾಗದ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆದ ದಿವ್ಯಶ್ರೀ ಈಗಾಗಲೇ ಕಛೇರಿಯ ಮಟ್ಟಕ್ಕೆ ಬೆಳೆದ ಪ್ರತಿಭಾವಂತೆ.
ರಸಿಕ