Advertisement

G. V. Prakash Kumar: ಸಂಗೀತ ನಿರ್ದೇಶಕ ಜಿವಿ ಪ್ರಕಾಶ್ ಕುಮಾರ್ ದಾಂಪತ್ಯದಲ್ಲಿ ಬಿರುಕು

07:49 AM May 14, 2024 | Team Udayavani |

ಚೆನ್ನೈ: ಕಾಲಿವುಡ್‌ ಹಾಗೂ ಟಾಲಿವುಡ್‌ ನಲ್ಲಿ ಖ್ಯಾತ ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಜಿವಿ ಪ್ರಕಾಶ್ ಕುಮಾರ್ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿದೆ ಎಂದು ವರದಿಯಾಗಿದೆ.

Advertisement

ಬಾಲಕನಾಗಿ ಗಾಯನದಲ್ಲಿ ಗುರುತಿಸಿಕೊಂಡು, ಸಂಗೀತ ನಿರ್ದೇಶಕನಾಗಿ ಹಾಗೂ ನಟನಾಗಿಯೂ ಗುರುತಿಸಿಕೊಂಡಿರುವ ಜಿವಿ ಪ್ರಕಾಶ್ ಕುಮಾರ್ ಇಂದು ಸೌತ್‌ ಸಿನಿಮಾದಲ್ಲಿ ಬಹುಬೇಡಿಕೆಯ ಮ್ಯೂಸಿಕ್‌ ಡೈರೆಕ್ಟರ್‌ ಆಗಿ ಗುರುತಿಸಿಕೊಂಡಿದ್ದಾರೆ.

ತನ್ನ ಮ್ಯೂಸಿಕ್‌ ನಿಂದ ಸಿನಿವಲಯದಲ್ಲಿ ಸುದ್ದಿಯಾಗುವ ಜಿವಿ ಪ್ರಕಾಶ್‌, ಈ ಬಾರಿ ದಾಂಪತ್ಯದ ವಿಚಾರವಾಗಿ ಸುದ್ದಿಯಾಗಿದ್ದಾರೆ.

ಜಿವಿ ಪ್ರಕಾಶ್‌ ಹಾಗೂ ಸೈಂಧವಿ ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಇಬ್ಬರ ನಡುವಿನ ಭಿನ್ನಾಭಿಪ್ರಾಯವೇ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ. ಕಳೆದ ಕೆಲ ವರ್ಷಗಳಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯದಿಂದಾಗಿ ಮನಸ್ತಾಪಗಳು ಉಂಟಾಗಿದೆ. ಇದೇ ಕಾರಣದಿಂದ ಕಳೆದ ಕೆಲವು ತಿಂಗಳುಗಳಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಮತ್ತು ಇಬ್ಬರು ತಮ್ಮ ಸಂಬಂಧವನ್ನು ಮುಂದುವರಿಸಲು ಬಯಸುವುದಿಲ್ಲ ಎಂದು ವರದಿಯಾಗಿದೆ.

ಈ ಬಗ್ಗೆ ಅಧಿಕೃತವಾಗಿ ಜಿವಿ ಪ್ರಕಾಶ್‌ ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರಿಗೂ ಮಾನಸಿಕವಾಗಿ ಶಾಂತಿಬೇಕೆಂದು ಅವರು ಬರೆದಿದ್ದು, ಪರಸ್ಪರ ಅರ್ಥ ಮಾಡಿಕೊಂಡು ಈ ನಿರ್ಧಾರಕ್ಕೆ ಬಂದಿದ್ದು, 11 ವರ್ಷದ ದಾಂಪತ್ಯ ಜೀವನದಿಂದ ದೂರುವಾಗುವುದಾಗಿ ಅವರು ಹೇಳಿದ್ದಾರೆ.

Advertisement

2023 ರಲ್ಲಿ ಜಿವಿ ಪ್ರಕಾಶ್ ಕುಮಾರ್ ಅವರ ದೀರ್ಘಕಾಲದ ಗೆಳತಿ, ಗಾಯಕಿ ಸೈಂಧವಿ ಅವರೊಂದಿಗೆ ವಿವಾಹವಾಗಿದ್ದರು. ಮೊದಲಿಗೆ ಸ್ನೇಹಿತರಾಗಿದ್ದ ಅವರು, ಪ್ರೀತಿಸಿ ವಿವಾಹವಾಗಿದ್ದರು. ಈ ದಂಪತಿಗೆ ಅನ್ವಿ ಎನ್ನುವ ಹೆಣ್ಣು ಮಗಳಿದ್ದಾರೆ.

ಇತ್ತೀಚೆಗೆ ಜಿವಿ ಪ್ರಕಾಶ್‌  ʼಕ್ಯಾಪ್ಟನ್ ಮಿಲ್ಲರ್‌ʼ, ʼಸೈರನ್ʼ, ʼಮಿಷನ್: ಅಧ್ಯಾಯ 1ʼ ಸಿನಿಮಾಗಳಿಗೆ ಮ್ಯೂಸಿಕ್‌ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next