ಕಳೆದ 112 ವರ್ಷಗಳಿಂದ ಕಲಾಸೇವೆಯಲ್ಲಿ ತೊಡಗಿಸಿಕೊಂಡಿರುವ ಬೆಂಗಳೂರು ಗಾಯನ ಸಮಾಜವು, ತನ್ನ 48ನೇ ಸಂಗೀತ ಸಮ್ಮೇಳನವನ್ನು ಅಕ್ಟೋಬರ್ 22ರಿಂದ 29ರವರೆಗೆ ಆಚರಿಸುತ್ತಿದೆ.
ಸಮ್ಮೇಳನದ ಅಧ್ಯಕ್ಷತೆಯನ್ನು ಸುಪ್ರಸಿದ್ಧ ಸಂಗೀತ ವಿದ್ವಾಂಸರಾದ ವಿದ್ವಾನ್ ಆರ್.ಎನ್. ತ್ಯಾಗರಾಜನ್ ಮತ್ತು ವಿದ್ವಾನ್ ಆರ್.ಎನ್. ತಾರಾನಾಥನ್ ವಹಿಸಲಿದ್ದಾರೆ. ಕೇಂದ್ರ ಸಚಿವ ಅನಂತಕುಮಾರ್ ಹಾಗೂ ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿಯವರು ಅ.22ರಂದು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.
ಸಂಗೀತಶಾಸ್ತ್ರ ವಿಭಾಗದ ಅನೇಕ ವಿಷಯಗಳು, ಭಾಷಣಗಳು, ಪ್ರಾತ್ಯಕ್ಷಿಕೆಗಳು ಮತ್ತು ವಿಚಾರಗೋಷ್ಠಿಗಳು ಈ ಸಮ್ಮೇಳನದಲ್ಲಿ ನಡೆಯಲಿವೆ. ಗಾಯನ ಸಮಾಜದ ಸಭಾಂಗಣದಲ್ಲಿ ನಡೆಯುವ ವಿದ್ವತ್ ಗೋಷ್ಠಿಗಳಿಗೆ ಉಚಿತ ಪ್ರವೇಶವಿರುತ್ತದೆ.
ಸಂಗೀತದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ವಿದ್ವಾನ್‌ಗಳಾದ ಎಂ.ಜಿ. ವೆಂಕಟರಾಘವನ್ (ಗಾಯನ), ಬಿ.ರಘುರಾಮ್ (ಪಿಟೀಲು), ಎನ್.ಜಿ.ರವಿ (ಮೃದಂಗ), ಕೆ. ವರದರಂಗನ್ (ಸಂಗೀತಜ್ಞ) ಹಾಗೂ ವಿದುಷಿ ಗಂಗಮ್ಮ ಕೇಶವಮೂರ್ತಿ ಅವರಿಗೆ ವರ್ಷದ ಕಲಾವಿದರು ಪ್ರಶಸ್ತಿ ನೀಡಿ ಗೌರವ ಸಮರ್ಪಣೆ ಮಾಡಲಾಗುತ್ತದೆ.
ಎಲ್ಲಿ?: ಗಾಯನ ಸಮಾಜ ಸಭಾಂಗಣ, ಕೆ.ಆರ್ ರಸ್ತೆ, ಬಸವನಗುಡಿ
ಯಾವಾಗ?: ಅಕ್ಟೋಬರ್ 22- 29