Advertisement

ಮುರುಘೇಂದ್ರ ಸ್ವಾಮೀಜಿ ಪಟ್ಟಾಧಿಕಾರ ಮಹೋತ್ಸವ

12:25 PM Dec 17, 2021 | Team Udayavani |

ಆಳಂದ: ಖಜೂರಿ ಕೋರಣೇಶ್ವರ ಮಠದ ನಾಡು, ನುಡಿ, ಕಲೆ, ಸಾಂಸ್ಕೃತಿಕ ಸೇವೆ ಶ್ಲಾಘನೀಯವಾಗಿದೆ ಎಂದು ಇಂಚಗೇರಾ ಮಠದ ಶಂಭುಲಿಂಗ ಶಿವಾಚಾರ್ಯರು ಹೇಳಿದರು.

Advertisement

ಖಜೂರಿ ಕೋರಣೇಶ್ವರ ಮಠದ ಮುರುಘೇಂದ್ರ ಮಹಾ ಸ್ವಾಮಿಗಳ 25ನೇ ಪಟ್ಟಾಧಿಕಾರ ವಾರ್ಷಿಕ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಬೆಳ್ಳಿ ಮಹೋತ್ಸವ, ಜಾನಪದ ಜಾತ್ರೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಬೆಳಕು ನೀಡುವ ಶಕ್ತಿ ಸೂರ್ಯನಿಗಿದ್ದಂತೆ ಜ್ಞಾನ ನೀಡುವ ಶಕ್ತಿ ಖಜೂರಿಯ ಮುರುಘೇಂದ್ರ ಸ್ವಾಮಿಗಳಲ್ಲಿದೆ. ಸತ್ವ ಶೀಲ ಮತ್ತು ಕರ್ತೃತ್ವಶೀಲ ವ್ಯಕ್ತಿತ್ವ ಉಳ್ಳವರಾಗಿದ್ದಾರೆ. ಮಹಾನುಭಾವರ ವಿಚಾರ ಎಲ್ಲರಿಗೂ ಪ್ರೇರಣೆಯಾಗಬೇಕು ಎಂದು ಹೇಳಿದರು.

ಮಾಡಿಯಾಳದ ಒಪ್ಪತ್ತೇಶ್ವರ ಮಠದ ಶ್ರೀ ಮರುಳಸಿದ್ಧ ಮಹಾ ಸ್ವಾಮೀಜಿ ಮಾತನಾಡಿ, ಜಗತ್ತಿನಲ್ಲಿ ಸ್ವಾರ್ಥ ಸಾಧನೆ ತುಂಬಿದೆ. ವಿಚಾರ ಶಕ್ತಿ ತುಂಬಿಕೊಳ್ಳುವುದು ಅಗತ್ಯವಾಗಿದೆ. ಮುರುಘೇಂದ್ರ ಸ್ವಾಮೀಜಿ ಕಳೆದ 25 ವರ್ಷಗಳ ಹಿಂದೆ ಶೂನ್ಯಾವಸ್ಥೆಯಲ್ಲಿದ್ದ ಮಠಕ್ಕೆ ನೇಮಕ ಆದಾಗಿನಿಂದ ಎಲ್ಲರ ಮನ ಗೆದ್ದಿದ್ದಾರೆ ಎಂದರು.

ಪೀಠಾಧಿಪತಿ ಶ್ರೀ ಮುರುಘೇಂದ್ರ ಮಹಾ ಸ್ವಾಮೀಜಿ ಮಾತನಾಡಿ, ಶ್ರೀ ಮಠವು ಕನ್ನಡ, ನಾಡು ನುಡಿ ಸೇವೆಗೆ ಸದಾ ಬದ್ಧವಾಗಿದೆ. ಇದಕ್ಕೆ ಕನ್ನಡಪರ ಸಂಘಟಕರು, ಪತ್ರಕರ್ತರು ಸದಾ ಬೆಂಬಲ ನೀಡುತ್ತಿದ್ದಾರೆ ಎಂದು ಸ್ಮರಿಸಿದರು.

Advertisement

ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಬಸವರಾಜ ಎಸ್‌. ಕೊರಳ್ಳಿ, ಕಲಾವಿದ ಶಿವಶರಣಪ್ಪ ಪೂಜಾರಿ, ಗಂಗಾಧರ ಕುಂಬಾರ ಹಾಗೂ ಜಾನಪದ, ಸಂಗೀತ ಕ್ಷೇತ್ರ, ಪತ್ರಕರ್ತರಿಗೆ ಶ್ರೀ ಮಠದಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆಳಂದ ಸಂಸ್ಥಾನ ಹಿರೇಮಠದ ಸಿದ್ಧೇಶ್ವರ ಶ್ರೀ, ಕೇಸರ ಜವಳಗಾದ ವೀರಂತೇಶ್ವರ ಶ್ರೀ, ಬಂಗರಗಾದ ಗುರುಲಿಂಗ ಶಿವಾಚಾರ್ಯರು, ಕಿಣ್ಣಿಸುಲ್ತಾನ ಮಠದ ಶಾಂತಲಿಂಗ ಶ್ರೀಗಳು ಪಾಲ್ಗೊಂಡು ಮುರುಘೇಂದ್ರ ಶ್ರೀಗಳನ್ನು ಗೌರವಿಸಿದರು.

ಭೀಮಾಶಂಕರ ಪಾಟೀಲ ಉದ್ಘಾಟಿಸಿದರು. ಸನ್ಮಾನ ಸ್ವೀಕರಿಸಿದ ಶಿವಶಂಕರ ಬಿರಾದಾರ ಅವರು ಕನ್ನಡ ಗೀತೆ ಹಾಡಿದರು. ಜಾನಪದ ಕಲಾವಿದ ಬಾಬುರಾವ್‌ ಕೋಬಾಳ, ಶರಣಗೌಡ ಪಾಳಾ, ಚಂದ್ರಶೇಖರ ಕವಡೆ ಸ್ವಾಮೀಜಿ, ರೈತ ಮುಖಂಡ ಆದಿನಾಥ ಹೀರಾ, ಮಂಜುನಾಥ ಬಂಗರಗೆ ಪಾಲ್ಗೊಂಡಿದ್ದರು. ಗಂಗಾಧರ ಕುಂಬಾರ ಸ್ವಾಗತಿಸಿ, ನಿರೂಪಿಸಿದರು. ಜಿಪಂ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ ಶ್ರೀಗಳನ್ನು ಸತ್ಕರಿಸಿದರು. ಛಾಯಾಗ್ರಾಹಕ ವೀರಂದ್ರ ಹರಿಯರ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next