Advertisement

ಹಾದಿ ಬೀದಿಯಲ್ಲಿ ಮಾತನಾಡುವವರಿಗೆ ನಾನು ಉತ್ತರಕೊಡಲ್ಲ: ಯತ್ನಾಳ್ ಆರೋಪಕ್ಕೆ ನಿರಾಣಿ ತಿರುಗೇಟು

07:09 PM Jun 30, 2021 | Team Udayavani |

ಬೆಂಗಳೂರು : ಹಾದಿಬೀದಿಯಲ್ಲಿ ಹೋಗುವವರು ನನ್ನ ಬಗ್ಗೆ ಟೀಕೆ ಮಾಡಿದರೆ ನಾನು ಅದಕ್ಕೆಲ್ಲ ತಲೆಕೆಡೆಸಿಕೊಳ್ಳುವುದಿಲ್ಲ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರು ತಮ್ಮ ವಿರುದ್ಧದ ಆರೋಪಗಳಿಗೆ ತಿರುಗೇಟು ನೀಡಿದರು.

Advertisement

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಾನು ಜವಬ್ದಾರಿಯುತ ಸ್ಥಾನದಲ್ಲಿದ್ದು, ಬಸನಗೌಡ ಪಾಟೀಲ್ ಯತ್ನಾಳ್ ಆರೋಪಗಳಿಗೆ ಉತ್ತರ ಕೊಡುವುದಿಲ್ಲ.ಪದೇ ಪದೇ ಅವರ ಪ್ರಶ್ನೆಗಳನ್ನ ಕೇಳಬೇಡಿ ಎಂದು ಕಿಡಿಕಾರಿದರು.

ನನ್ನ‌ಸಮಾಜದ ಬಗ್ಗೆ ನಾನು ಮಾತನಾಡುವುದಿಲ್ಲ. ಇಲ್ಲಿ ಮಾಡಲು ಸಾಕಷ್ಟು ಕೆಲಸವಿದೆ. ಯಾರೋ ಮಾತನಾಡಿದ್ರೆ ಉತ್ತರ ಕೊಡಲು ಆಗುವುದಿಲ್ಲ. ಹಾದಿ ಬೀದಿಯಲ್ಲಿ ಮಾತನಾಡೋವವರಿಗೆ ನಾನು ಉತ್ತರಕೊಡಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಪಂಚಮಸಾಲಿ ಹೋರಾಟ ಮಾತ್ರವಲ್ಲ ಇಡೀ ವೀರಶೈವ ಲಿಂಗಾಯತ ಹೋರಾಟದ ಬಗ್ಗೆ ನಾವು ಹೋರಾಟ ಮಾಡಬೇಕಾಗುತ್ತದೆ.ಕೇವಲ ಪಂಚಮಸಾಲಿ ಮಾತ್ರವಲ್ಲ.ಇಡೀ ವೀರಶೈವ ಲಿಂಗಾಯತ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದ ಜನರಿದ್ದಾರೆ‌ ಅವುಗಳೆಲ್ಲವನ್ನೂ ಕೂಡ ನಾವು ಅಧಿಕಾರದಲ್ಲಿ ಇರುವವರು ಗಮನ ಹರಿಸಬೇಕು.ನಾವು ಸರ್ಕಾರದಲ್ಲಿ ಇರುವವರು ಕೇವಲ ಒಂದು ಸಮುದಾಯಕ್ಕೆ ಮಾತ್ರ ಹೋರಾಟ ಮಾಡಿದರೆ ಸಾಕಾಗಲ್ಲ ಎಂದರು.

ಇದನ್ನೂ ಓದಿ :ಇಂದಿನಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ : ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿಕೆ

Advertisement

ಮುಂದೆ ಅಗತ್ಯ ಬಿದ್ದರೆ ಪಂಚಮಸಾಲಿ ಹೋರಾಟಕ್ಕೆ ಜೊತೆಗೂಡುತ್ತೇನೆ‌ಈಗ ಯಾರೋ ಮಾತನಾಡಿದರೂ ಎಂದು ಉತ್ತರ ಕೊಡೋದಕ್ಕೆ ಹೋಗಲ್ಲ.ಹೈಕಮಾಂಡ್ ಏನೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ಬದ್ದ ಎಂದು ಪುನರುಚ್ಚರಿಸಿದರು.

ವೀರಶೈವ ಸಮಾಜ ಪ್ರಭುದ್ಧವಾಗಿದೆ. ಯಾರು‌ದುರ್ಬಲರು ಎನ್ನುವುದನ್ನು ನಿರ್ಧಾರ ಮಾಡುತ್ತದೆ.ನಾನು ಪಂಚಮಸಾಲಿ ಸಮುದಾಯದವನು.ನೂರಾರು ಉಪಜಾತಿಗಳು ಸಮಾಜದಲ್ಲಿವೆ.ಅವರಿಗೂ ನ್ಯಾಯ ಕೊಡಿಸಬೇಕಿದೆ.ನಾನು ಯಾರೋ ಪ್ರಶ್ನೆಗೆ ಉತ್ತರ ಕೊಡುವವನಲ್ಲ ಎಂದು ಸ್ಪಷ್ಟಪಡಿಸಿದರು.

ನಮ್ಮದು ಶಿಸ್ತು ಬದ್ಧ ಪಕ್ಷ.ವರಿಷ್ಠರ ಇಂತಹ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾರೆ.ನಾಯಕರ ಬದಲಾವಣೆ ನಮ್ಮ‌ಕೈಯಲಿಲ್ಲ.ಅದನ್ನ ಹೈಕಮಾಂಡ್ ತೀರ್ಮಾನ ಮಾಡುತ್ತದೆ.ಯಡಿಯೂರಪ್ಪ ಅವರು ಎರಡು ವರ್ಷ ಮುಂದುವರಿಯುತ್ತಾರೆ. ಇದರಲ್ಲಿ ಯಾವುದೇ ಸಂದೇಹ ಬೇಡ ಎಂದು ನಿರಾಣಿ ಅವರು ಮನವಿ ಮಾಡಿದರು.

ನನಗೆ ಇರುವ ಮಾಹಿತಿ ಪ್ರಕಾರ ಯಡಿಯೂರಪ್ಪ ಇನ್ನು ಎರಡು ವರ್ಷ ಅವರೇ ಸಿಎಂ ಇರುತ್ತಾರೆ.ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ ಎಂದು ವದಂತಿಗಳಿಗೆ ನಿರಾಣಿ ಅವರು ತೆರೆಎಳೆದರು.

Advertisement

Udayavani is now on Telegram. Click here to join our channel and stay updated with the latest news.

Next