ಕಲಬುರಗಿ : ಅಕ್ಟೋಬರ್ 8 ಹಾಗೂ 9 ರಂದು ಕಲಬುರಗಿಯಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಕೈಗಾರಿಕಾ ಅದಾಲತ್ ಮುಂದೂಡಿ ಅಕ್ಟೋಬರ್ 11 ಹಾಗೂ 12 ರಂದು ನಗರದ ಇಎಸ್ಐ ಸಭಾಂಗಣದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ತಿಳಿಸಿದರು.
ಹಬ್ಬ ಹಾಗೂ ಸಾರ್ವಜನಿಕ ರಜೆ ಇರುವ ಹಿನ್ನೆಲೆಯಲ್ಲಿ ಅದಾಲತ್ ಮುಂದೂಡಲಾಗಿದೆ. ಈಗಾಗಲೇ ಅದಾಲತ್ ಅಂಗವಾಗಿ ಉದ್ಯಮಿಗಳಿಂದ ಅರ್ಜಿ ಸ್ವೀಕರಿಸಲಾಗುತ್ತಿದೆ. ಬಹು ಮುಖ್ಯವಾಗಿ ಅದಾಲತ್ ನಲ್ಲಿ ಕೈಗಾರಿಕಾ ಉದ್ಯಮಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವರು ಉದಯವಾಣಿ ಯೊಂದಿಗೆ ಮಾತನಾಡಿ ವಿವರಿಸಿದರು.
ಉಳಿದಂತೆ ಇತರ ಭಾಗದಲ್ಲಿನ ಕೈಗಾರಿಕಾ ಅದಾಲತ್ ಈ ಮೊದಲಿನ ನಿಗದಿಯಂತೆ ನಡೆಯಲಿದ್ದು, ಬಹು ಮುಖ್ಯವಾಗಿ ಕಲಬುರಗಿ ವಿಷನ್ -2050 ಕಾರ್ಯಾನುಷ್ಠಾನ ನಿಟ್ಟಿನಲ್ಲಿ ವಿವಿಧ ಪ್ರಮುಖ ರೊಂದಿಗೆ ಸಭೆ ಸಹ ಇದೇ ಸಂದರ್ಭದಲ್ಲಿ ನಡೆಸಲಾಗುತ್ತಿದೆ.
ಇದನ್ನೂ ಓದಿ :NEET ಪರೀಕ್ಷೆ…ಮಗಳ ಭವಿಷ್ಯಕ್ಕಾಗಿ ತಂದೆಯ ಕೊನೆ ಪ್ರಯತ್ನ:ಮಧ್ಯರಾತ್ರಿ ನಡೆದ ಕೋರ್ಟ್ ವಿಚಾರಣೆ
ಉತ್ಸವಕ್ಕೆ ಸಿಎಂ: ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಪಾಲ್ಗೊಳ್ಳಲು ಹಾಗೂ ಧ್ವಜಾರೋಹಣ ನೆರವೇರಿಸಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿಶೇಷ ವಿಮಾನ ಮೂಲಕ ಕಲಬುರಗಿಗೆ ಆಗಮಿಸಲಿದ್ದಾರೆ. ಉತ್ಸವದಲ್ಲಿ ಪಾಲ್ಗೊಂಡ ನಂತರ ಮತ್ತೆ ವಿಶೇಷ ವಿಮಾನ ಮೂಲಕ ಬೆಂಗಳೂರಿಗೆ ತೆರಳಿ ಅಧಿವೇಶನದಲ್ಲಿ ಪಾಲ್ಗೊಳ್ಳುವರು ಎಂದು ಸಚಿವ ಮುರುಗೇಶ ನಿರಾಣಿ ಅವರು ತಿಳಿಸಿದ್ದಾರೆ.