Advertisement

ಮರ್ರೆ ನಂ.1 ಸ್ಥಾನ ಅಬಾಧಿತ

03:35 AM Feb 15, 2017 | Team Udayavani |

ಮ್ಯಾಡ್ರಿಡ್‌: ವಿಶ್ವ ಟೆನಿಸ್‌ನ ನೂತನ ಎಟಿಪಿ ಶ್ರೇಯಾಂಕ ಪಟ್ಟಿ ಮಂಗಳವಾರ ಪ್ರಕಟವಾಗಿದೆ. ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಬ್ರಿಟನ್‌ನ ಆ್ಯಂಡಿ ಮರ್ರೆ ನಂ.1 ಸ್ಥಾನದಲ್ಲೇ ಮುಂದುವರಿದಿದ್ದಾರೆ. ಮರ್ರೆ ಪ್ರಸ್ತುತ 11,540 ಅಂಕ ಹೊಂದಿದ್ದಾರೆ. 

Advertisement

ಕಳೆದ ನವಂಬರ್‌ನಲ್ಲಿ ಅವರು ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಉನ್ನತ ಶ್ರೇಯಾಂಕಕ್ಕೆ ಏರಿದ್ದರು. ಉಳಿದಂತೆ 9,825 ಅಂಕವನ್ನು ಹೊಂದಿರುವ ಸರ್ಬಿಯಾದ ನೊವಾಕ್‌ ಜೊಕೋವಿಕ್‌ ನಂ.2 ರ್‍ಯಾಂಕಿಂಗ್‌ ಉಳಿಸಿಕೊಂಡಿದ್ದಾರೆ. ಸ್ಟಾರ್‌ ಆಟಗಾರ, ಈ ವರ್ಷದ ಆಸ್ಟ್ರೇಲಿಯ ಓಪನ್‌ ರನ್ನರ್‌ ಅಪ್‌ ಪ್ರಶಸ್ತಿ ಪಡೆದ ಸ್ಪೇನ್‌ನ ರಫೆಲ್‌ ನಡಾಲ್‌ 6ನೇ ಶ್ರೇಯಾಂಕ ಕಾಯ್ದುಕೊಂಡಿದ್ದಾರೆ. ಆಸ್ಟ್ರೇಲಿಯ ಓಪನ್‌ ಗೆದ್ದ ರೋಜರ್‌ ಫೆಡರರ್‌ ಹತ್ತರಿಂದ 9ನೇ ಸ್ಥಾನಕ್ಕೇರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next