Advertisement
17 ಬಾರಿಯ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಫೆಡರರ್ ಒಂದು ಕಾಲದ ಅವರ ಜೂನಿಯರ್ ಎದು ರಾಳಿ ಆಸ್ಟ್ರೀಯಾದ ಜರ್ಗನ್ ಮೆಲ್ಜರ ಅವರನ್ನು 7-5, 3-6, 6-2, 6-2 ಸೆಟ್‌ಗಳಿಂದ ಉರುಳಿಸಿದರು. ಎರಡು ತಾಸು ಮತ್ತು 6 ನಿಮಿಷಗಳ ಈ ಕಾದಾಟದಲ್ಲಿ ಜಯಭೇರಿ ಬಾರಿಸಿದ ಫೆಡರರ್ ಮುಂದಿನ ಸುತ್ತಿನಲ್ಲಿ ಅಮೆರಿಕದ ಅರ್ಹತಾ ಆಟಗಾರ ನೋಹ್ ರುಬಿನ್ ಅವರನ್ನು ಎದುರಿಸಲಿದ್ದಾರೆ.
ತನ್ನ ಬಾಳ್ವೆಯಲ್ಲಿ ಮೊದಲ ಬಾರಿಗೆ ಗ್ರ್ಯಾನ್ ಸ್ಲಾಮ್ ಕೂಟವೊಂದರಲ್ಲಿ ಅಗ್ರಶ್ರೇಯಾಂಕದೊಂದಿಗೆ ಹೋರಾಟ ಕ್ಕಿಳಿದ ಆ್ಯಂಡಿ ಮರ್ರೆ ಅವರು ಉಕ್ರೈನ್‌ನ ಇಲಿಯಾ ಮಾರ್ಚೆಂಕೊ ಅವರನ್ನು 7-5, 7-6 (7-5), 6-2 ಸೆಟ್‌ಗಳಿಂದ ಸೋಲಿಸಿ ದ್ವಿತೀಯ ಸುತ್ತಿಗೆ ಮುನ್ನಡೆದರು. ನಿಜವಾಗಿ ಹೇಳುವುದಿದ್ದರೆ ಇದೊಂದು ಶ್ರೇಷ್ಠ ಪಂದ್ಯವೆಂದು ಭಾವಿಸುವುದಿಲ್ಲ ಎಂದು ಮರ್ರೆ ಪಂದ್ಯದ ಬಳಿಕ ನುಡಿದರು. ಎರಡು ತಾಸು ಮತ್ತು 47 ನಿಮಿಷಗಳ ಹೋರಾಟದಲ್ಲಿ ಗೆದ್ದ ಮರ್ರೆ ದ್ವಿತೀಯ ಸುತ್ತಿನಲ್ಲಿ ರಶ್ಯದ ಆಂದ್ರೆ ರುಬ್ಲೆವ್ ಅವರನ್ನು ಎದುರಿಸಲಿದ್ದಾರೆ. ರುಬ್ಲೆವ್ ಇನ್ನೊಂದು ಪಂದ್ಯದಲ್ಲಿ ಚೈನೀಸ್ ತೈಪೆಯ ಯೆನ್ ಸು ಲು ಅವರನ್ನು 4-6, 6-3, 7-6, (7-0), 6-3 ಸೆಟ್‌ಗಳಿಂದ ಸೋಲಿಸಿದರು.
Related Articles
ಮಾಜಿ ವಿಜೇತ ಸ್ವಿಸ್‌ನ ಸ್ಟಾನ್ ವಾವ್ರಿಂಕ ಮೊದಲ ಸುತ್ತಿನಲ್ಲಿ ಸೋಲುವುದರಿಂದ ಪಾರಾ ಗಿದ್ದಾರೆ. ಮೂರು ಬಾರಿಯ ಗ್ರ್ಯಾನ್ ಸ್ಲಾಮ್ ವಿಜೇತ ವಾವ್ರಿಂಕ ಐದು ಸೆಟ್‌ಗಳ ಮ್ಯಾರಥಾನ್ ಹೋರಾಟ ನಡೆಸಿ ಸ್ಲೋವಾಕಿಯಾದ ಮಾರ್ಟಿನ್ ಕ್ಲಿಝನ್ ಅವರನ್ನು 4-6, 6-4, 7-5, 4-6, 6-4 ಸೆಟ್‌ಗಳಿಂದ ಜಯ ಸಾಧಿಸಿದರು. ಅವರು ಮುಂದಿನ ಸುತ್ತಿ ನಲ್ಲಿ ಅಮೆರಿಕದ ಸ್ಟೀವ್ ಜಾನ್ಸನ್ ರನ್ನು ಎದು ರಿಸಲಿದ್ದಾರೆ. ಜಾನ್ಸನ್ ಮೊದಲ ಸುತ್ತಿ ನಲ್ಲಿ ಆರ್ಜೆಂಟೀನಾದ ಫೆಡರಿಕೊ ಡೆಲ್ಬೊನಿಸ್‌ರನ್ನು 6-3, 6-4, 6-4 ಸೆಟ್‌ಗಳಿಂದ ಕೆಡಹಿದ್ದರು.
Advertisement
ಈ ಬಾರಿಯ ಚೆನ್ನೈ ಓಪನ್‌ನಲ್ಲಿ ಆಡಿದ್ದ ಕ್ರೊವೇಶಿಯದ ಮರಿನ್ ಸಿಲಿಕ್ ಅವರು ಪೋಲೆಂಡಿನ ಜೆರ್ಜಿ ಜಾನೋ ವಿಜ್ ಅವರನ್ನು 4-6, 4-6, 6-2, 6-2, 6-3 ಸೆಟ್‌ಗಳಿಂದ ಸೋಲಿಸಿ ಮುನ್ನಡೆದರು. ಮೊದಲೆರಡು ಸೆಟ್ ಸೋತರೂ ವಿಚಲಿತರಾಗದ ಸಿಲಿಕ್ ಅಮೋಘವಾಗಿ ಆಡಿ ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾದರು. ಅವರು ಮುಂದಿನ ಸುತ್ತಿನಲ್ಲಿ ಗ್ರೇಟ್ ಬ್ರಿಟನ್‌ನ ಡೇನಿಯಲ್ ಇವಾನ್ಸ್ ಅವರನ್ನು ಎದುರಿಸಲಿದ್ದಾರೆ. ಇವಾನ್ಸ್ ತನ್ನ ಪಂದ್ಯದಲ್ಲಿ ಫಾಕುಂಡೊ ಬಗ್ನಿಸ್ ಅವರನ್ನು 7-6 (10-8), 6-3, 6-1 ಸೆಟ್‌ಗಳಿಂದ ಪರಾಭವಗೊಳಿಸಿದರು.
ಇನ್ನುಳಿದ ಪ್ರಮುಖ ಪಂದ್ಯಗಳಲ್ಲಿ ಬೆರ್ನಾರ್ಡ್ ಟಾಮಿಕ್, ಜೋ ವಿಲ್ಫೆ†ಡ್ ಸೋಂಗ, ನಿಕ್ ಕಿರ್ಗಿಯೋಸ್, ಥಾಮಸ್ ಬೆರ್ಡಿಶ್, ಜಾನ್ ಇಸ್ನರ್, ಸ್ಯಾಮ್ ಕ್ವೆರಿ ಮತ್ತು ಕೆಯಿ ನಿಶಿಕೋರಿ ತಮ್ಮ ಎದುರಾಳಿಯೆದುರು ಜಯ ಸಾಧಿಸಿ ಮುನ್ನಡೆದಿದ್ದಾರೆ.