Advertisement

ಕ್ಯಾಮರಾ ಖರೀದಿ ಜಗಳಕ್ಕೆ ಗೆಳೆಯನನ್ನೇ ಕೊಂದರು

05:14 PM Jun 03, 2018 | Team Udayavani |

ಬೆಳಗಾವಿ: ಕ್ಯಾಮರಾ ಖರೀದಿ ವಿಷಯದಲ್ಲಿ ಸ್ನೇಹಿತರ ಮಧ್ಯೆ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ನಗರದ ನೆಹರು ನಗರದಲ್ಲಿ
ನಡೆದಿದೆ.

Advertisement

ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ನೆಹರು ನಗರದ ನಿವಾಸಿ ಬಸವರಾಜ ಕಾಕತಿ (22) ಹತ್ಯೆಗೀಡಾದ ಯುವಕ. ಸೂರಜ ಶಿಂಧೆ ಹಾಗೂ ಮನೋಜ ನೇಸರಕರ ಕೊಲೆ ಮಾಡಿದ ಆರೋಪಿಗಳು. ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ. ಹೊಟ್ಟೆ ಹಾಗೂ ಎದೆಗೆ ಚೂರಿ ಹಾಕಿ ಬರ್ಬರವಾಗಿ ಕೊಲೆ ಮಾಡಿದ ಆರೋಪಿಗಳು ನಂತರ ಬಸವರಾಜನ ದೇಹವನ್ನು ನೆಹರು ನಗರದ ಮಹಾದೇವ ಮಂದಿರದ ಬಳಿ ಎಸೆದು ಪರಾರಿಯಾಗಿದ್ದರು.

ಕ್ಯಾಮೆರಾ ಖರೀದಿಸಿದ ನಂತರ ಅದರ ಬಾಕಿ ಹಣ ಕೊಡಲು ತಡಮಾಡಿದ್ದಕ್ಕೆ ಕುಡಿದ ಮತ್ತಿನಲ್ಲಿ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಸೇಲ್ಸ್‌ಮ್ಯಾನ್‌ ಕೆಲಸ ಮಾಡುವ ಬಸವರಾಜ ಕ್ಯಾಮೆರಾ ಖರೀದಿಗೆ ಮಧ್ಯಸ್ಥಿಕೆ ವಹಿಸಿದ್ದ ಎನ್ನಲಾಗಿದೆ. ಬಾಕಿ 1,500 ಹಣವನ್ನು ಜೂನ್‌ 1ಕ್ಕೆ
ಕೊಡುವುದಾಗಿ ಹೇಳಿದ್ದನು. ಈ ವಿಷಯವಾಗಿ ಬಸವರಾಜ ಮತ್ತು ಆತನ ಸ್ನೇಹಿತರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ಆಗಿದೆ. ಕೊನೆಗೆ ಸ್ನೇಹಿತರು ಆವೇಶದಲ್ಲಿ ಬಸವರಾಜನಿಗೆ ಎದೆಗೆ ಚಾಕುವಿನಿಂದ ಇರಿದಿದ್ದಾರೆ. ಆಗ ತೀವ್ರ ರಕ್ತಸ್ರಾವ ಆಗುತ್ತಿದ್ದಂತೆ ಘಟನಾ ಸ್ಥಳದಿಂದ ಪರಾರಿಯಾಗಿದ್ದಾರೆ. ಬೆಳಗ್ಗೆ ಸಾರ್ವಜನಿಕರು ಬಸವರಾಜ ಮೃತದೇಹವನ್ನು ನೋಡಿ ಪೊಲೀಸರಿಗೆ ತಿಳಿಸಿದ್ದಾರೆ  ಎಂದು ಎಪಿಎಂಸಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ಸುದ್ದಿ ತಿಳಿದ ತಕ್ಷಣ ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿರುವ ಎಪಿಎಂಸಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next