ಬೆಂಗಳೂರು: ರೌಡಿಶೀಟರ್ ಸುನೀಲ್‌ನನ್ನು ಕಮಲಾನಗರ ಬಳಿ ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದ ನಾಗರಾಜ ಅಲಿಯಾಸ್ ಸ್ಪಾಟ್ ನಾಗ ಹಾಗೂ ಆತನ 8 ಮಂದಿ ಸಹಚರರನ್ನು ಪಶ್ಚಿಮ ವಿಭಾಗ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗುರುವಾರ ರಾತ್ರಿ ಪೊಲೀಸರ ವಿಶೇಷ ತಂಡ 9 ಮಂದಿಯನ್ನು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ. ವೆಂಕಟೇವ್ , ಸೀನಾ ಸಂಜಯ್ ಎನ್ನುವ ರೌಡಿ ಶೀಟರ್‌ಗಳು ಬಂಧಿತರಲ್ಲಿ ಸೇರಿದ್ದಾರೆ ಎಂದು ಹೇಳಲಾಗಿದೆ.
ಆರೋಪಿಗಳ ಪತ್ತೆಗಾಗಿ ಬಸವೇಶ್ವರ ನಗರ, ಮಾಗಡಿ ರೋಡ್ ಪೊಲೀಸ್ ಠಾಣೆ, ಕಾಮಾಕ್ಷಿಪಾಳ್ಯ ಠಾಣೆಯ ಇನ್ಸ್‌ಪೆಕ್ಟರ್‌ಗಳ ನೇತೃತ್ವದಲ್ಲಿ ಮೂರು ತಂಡ ಹಾಗೂ ಡಿಸಿಪಿ ಸ್ಕ್ಯಾಡ್ ತಂಡದ ಸಿಬಂದಿಗಳು ಕಾರ್ಯಾಚರಣೆ ನಡೆಸಿದ್ದರು.
ಬುಧವಾರ ಬೆಳ್ಳಂಬೆಳಗ್ಗೆ ಕಮಲಾನಗದಲ್ಲಿರುವ ರೌಡಿ ಸುನೀಲ್ ಮನೆಗೆ ಮಾರಕಾಸ್ತ್ರಗಳೊಂದಿಗೆ ನುಗ್ಗಿದ್ದ ದುಷ್ಕರ್ಮಿಗಳು ಕುಟುಂಬ ಸದಸ್ಯರ ಎದುರೇ ಆತನನ್ನು ಮನೆಯಿಂದ ಹೊರಗೆಳೆದು ಬರ್ಭರವಾಗಿ ಕೊಚ್ಚಿ ಕೊಲೆ ಮಾಡಿದ್ದರು. ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಕುಖ್ಯಾತ ರೌಡಿಶೀಟರ್
ನಾಗರಾಜ್ ಅಲಿಯಾಸ್ ಸ್ಪಾಟ್ ನಾಗ ಮತ್ತು ತಂಡ ಈ ಭೀಕರ ಕೃತ್ಯ ಎಸಗಿತ್ತು.