Advertisement

ನಾಲ್ವರು ಜೈಶ್‌ ಉಗ್ರರ ಹತ್ಯೆ

12:30 AM Dec 30, 2018 | |

ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ ಸೇನೆ, ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಜೈಶ್‌-ಎ- ಮೊಹಮ್ಮದ್‌ ಉಗ್ರ ಸಂಘಟನೆಗೆ ಸೇರಿದ ನಾಲ್ವರು ಉಗ್ರರು ಮೃತಪಟ್ಟಿದ್ದಾರೆ. ಮೃತರಲ್ಲಿ ಓರ್ವ ಪಾಕಿಸ್ಥಾನದವನು ಎಂದು ಹೇಳಲಾಗಿದೆ. ಹಂಜ್ರಾನ್‌ ಪ್ರಾಂತ್ಯದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆ ಇಲ್ಲಿ ಹುಡುಕಾಟ ಆರಂಭಿಸಿತ್ತು. ಈ ಸಂದರ್ಭದಲ್ಲಿ ಉಗ್ರರು ಗುಂಡಿನ ದಾಳಿ ಆರಂಭಿಸಿದ್ದು, ಪ್ರತಿ ದಾಳಿ ನಡೆಸಿದ ಭದ್ರತಾ ಪಡೆ ನಾಲ್ವರು ಉಗ್ರರನ್ನು ಹೊಡೆದುರುಳಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಮೃತ ಉಗ್ರರಲ್ಲಿ ಮುಜಮ್ಮಿಲ್‌ ಅಹ್ಮದ್‌ ದಾರ್‌, ವಾಸೀಂ ಅಕ್ರಂ ವಾನಿ, ಮುಜಮ್ಮಿಲ್‌ ನಾಜಿರ್‌ ಭಟ್‌ ಪುಲ್ವಾಮಾ ಜಿಲ್ಲೆಯವರು. ಮತ್ತೋರ್ವ ಪಾಕಿಸ್ಥಾನಿ ಎಂಬ ಶಂಕೆಯಿದೆ. ಉಗ್ರರಿದ್ದ ಸ್ಥಳದಿಂದ ಮದ್ದು ಗುಂಡು, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next