Advertisement

ವೇಷ ಬದಲಾಯಿಸಿಕೊಂಡು ಯುವತಿಯ ಹತ್ಯೆ:ಏಕಮುಖ ಪ್ರೇಮಿ ಬಂಧನ

12:43 PM Jul 11, 2019 | Vishnu Das |

ಅಮರಾವತಿ: ಏಕಮುಖ ಪ್ರೇಮಿಯು ಯವತಿಯನ್ನು ಹತ್ಯೆಗೈದ ಘಟನೆ ಅಮರಾವತಿ ಪರಿಸರದಲ್ಲಿ ಸಂಭವಿಸಿದೆ. ಮೃತ ಯುವತಿಯನ್ನು ಅರ್ಪಿತಾ ಠಾಕ್ರೆ (17) ಎಂದು ಗುರುತಿಸಲಾಗಿದೆ.

Advertisement

ಯುವತಿ ನಗರದ ಭಾರತೀಯ ಕಾಲೇಜಿನ ಬಿ.ಕಾಂ. ಮೊದಲ ವರ್ಷ ವಿದ್ಯಾರ್ಥಿನಿ ಆಗಿದ್ದಳು. ಮಂಗಳವಾರ ಮಧ್ಯಾಹ್ನ 2.45ರ ಸುಮಾರಿಗೆ ಅವಳು ತನ್ನ ಸ್ನೇಹಿತನೊಂದಿಗೆ ಮನೆಗೆ ಹೋಗುತ್ತಿದ್ದಳು. ಆ ಸಮಯದಲ್ಲಿ, ಪ್ರೇಮಿ ತುಷಾರ್‌ ಕಿರಣ್‌ ಮಾಸ್ಕರೆ (22 ವರ್ಷ) ಎಂಬ ಯುವಕ ವೇಷ ಬದಲಾಯಿಸಿ ಕೊಂಡು ಬಂದು ಅರ್ಪಿತಾಳ ಕುತ್ತಿಗೆಗೆ ಚಾಕುವಿನಿಂದ ಹಲ್ಲೆ ನಡೆಸಿದ್ದ. ಈ ವೇಳೆ ತಡೆಯಲು ಬಂದ ಅವಳೊಂದಿಗಿದ್ದ ಆಕೆಯ ಸ್ನೇಹಿತೆಯೂ ಗಾಯಗೊಂಡಿದ್ದಳು.

ಈ ಪ್ರದೇಶದ ನಾಗರಿಕರು ಇಬ್ಬರನ್ನು ಆಸ್ಪತ್ರೆಯಲ್ಲಿ ದಾಖಲಿಸಿದರು. ಆದರೆ ಅರ್ಪಿತಾ ಚಿಕಿತ್ಸೆಯ ವೇಳೆ ಸಾವನ್ನಪ್ಪಿದರು. ಪ್ರದೇಶದ ನಿವಾಸಿಗಳು ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next