Advertisement

ಉದ್ದೇಶಪೂರ್ವಕವಾಗಿಯೇ ಸಹೋದರನ ಪತ್ನಿ-ಮಗನ ಹತ್ಯೆ

01:39 PM Jul 29, 2019 | Suhan S |

ಅಂಕೋಲಾ: ಮಾಜಿ ಸೈನಿಕ ಉದ್ದೇಶಪೂರ್ವಕವಾಗಿ ತನ್ನ ಸಹೋದರನ ಪತ್ನಿ ಹಾಗೂ ಸಹೋದರನ ಮಗನ ಮೇಲೆ ಗುಂಡಿನ ದಾಳಿ ನಡೆಸಿ ಇಬ್ಬರನ್ನು ಹತ್ಯೆಗೈದ ಹೃದಯ ವಿದ್ರಾವಕ ಘಟನೆಯಿಂದ ಅಂಕೋಲಾ ತಾಲೂಕಿನ ಜನತೆ ಬೆಚ್ಚಿಬಿದ್ದಿದ್ದಾರೆ.

Advertisement

ಭೂ ಸೇನೆಯ ನಿವೃತ್ತ ಹವಾಲ್ದಾರ್‌ ಸುಬ್ರಾಯ ಪ್ರಭು ತನ್ನ ಮನೆಯಲ್ಲಿ ಆಗಾಗ ಆಸ್ತಿ ವಿಷಯದಲ್ಲಿ ಕುಟುಂಬದವರೊಂದಿಗೆ ತಕರಾರು ಮಾಡುತ್ತಿದ್ದ ಎನ್ನಲಾಗಿದೆ. ತನಗೆ ಬರಬೇಕಾದ ಆಸ್ತಿಯಲ್ಲಿ ಹಂಚಿಕೆ ಮಾಡದ ಕಾರಣದಿಂದ ಶನಿವಾರ ರಾತ್ರಿ 7:30ಕ್ಕೆ ತನ್ನ ಮನೆಯ ಮಹಡಿಯ ಕೆಳಗಿರುವ ಸಹೋದರನ ಮನೆಗೆ ಅಗಮಿಸಿ ಸಹೋದರ ಅಮೀತ ಪ್ರಭು ಪತ್ನಿ ಮೇಧಾ ಪ್ರಭು ಮಗನಿಗೆ ಮನೆಯಲ್ಲಿ ಪಾಠ ಹೇಳಿಕೊಡುತ್ತಿದ್ದ ವೇಳೆ ಏಕಾಏಕಿ ತನ್ನ ಲೈಯನ್ಸ್‌ ಹೊಂದಿರುವ 12 ಬೋರ, ಡಬಲ ಬ್ಯಾರೆಲ್ ಬಂದೂಕಿನಿಂದ ಎರಡು ಬಾರಿ ಗುಂಡು ಹಾರಿಸಿದ್ದಾನೆ. ಅನುಜ ಅಮಿತ ಪ್ರಭು (8) ಸ್ಥಳದಲ್ಲಿಯೇ ಮೃತಪಟ್ಟಿದ್ದು, ಈತನ ತಾಯಿ ಮೇಧಾ ಅಮಿತ ಪ್ರಭು (33) ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವಾಗ ಹಳದಿಪುರ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆ. ಮೃತ ದೇಹದ ಮರಣೋತ್ತರ ಪರೀಕ್ಷೇಯನ್ನು ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ನಡೆಸಲಾಗಿದೆ.

ಘಟನೆಗೆ ಬಳಸಿದ ಬಂದೂಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂದೂಕಿನಲ್ಲಿ ಇನ್ನೂ 29 ಗುಂಡುಗಳಿದ್ದು, ಅದನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂದೂಕಿನ ಪರವಾನಿಗೆ ಕೂಡ ರದ್ದು ಮಾಡಿದ್ದಾರೆ ಎಂದು ತಿಳಿದಿದೆ.

ಭಾನುವಾರ ಬೆಳಗ್ಗೆ ಸಿಪಿಐ ಪ್ರಮೋದ ಕುಮಾರ ತಂಡ ಆರೋಪಿಯನ್ನು ಘಟನಾ ಸ್ಥಳಕ್ಕೆ ಕರೆತಂದು ಪಂಚನಾಮೆ ನಡೆಸಿ ಆರೋಪಿಯಿಂದ ಮಾಹಿತಿ ಪಡೆದುಕೊಂಡಿದ್ದಾರೆ. ತಾನು ಉದ್ದೇಶ ಪೂರ್ವಕವಾಗಿಯೇ ಈ ಕೃತ್ಯ ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿ ಹೇಳಿದ್ದಾನೆ ಎಂದು ತಿಳಿದು ಬಂದಿದೆ.

ವಿಧಿವಿಜ್ಞಾನ ತಂಡ ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಆಗಮಿಸಿ ಪರೀಶಿಲನೆ ನಡೆಸಿದ್ದಾರೆ. ಮಂಗಳೂರು ಮತ್ತು ಬೆಂಗಳೂರಿನಿಂದ ಅರುಣ ರಂಗಸ್ವಾಮಿ ನೇತೃತ್ವದ ವಿಧಿವಿಜ್ಞಾನ ತಂಡ ಆಗಮಿಸಿ ಪರಿಶೀಲಿಸಿದ್ದಾರೆ. ಜೊತೆಗೆ ಜಿಲ್ಲಾ ಶಶ÷ ನಿರ್ವಹಣಾ ತಂಡ ಬೆರಳಚ್ಚು ತಂಡದವರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Advertisement

ಎಸ್ಪಿ ವಿನಾಯಕ ಪಾಟೀಲ, ಡಿವೈಎಸ್‌ಪಿ ಶಂಕರ ಮಾರಿಹಾಳ, ಸಿಪಿಐ ಬಿ. ಪ್ರಮೋದಕುಮಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಪೊಲೀಸ್‌ ವಶಕ್ಕೆ ಪಡೆದ ಅಜಯ ಪ್ರಭುನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯದಲ್ಲಿ 15 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next