Advertisement
ಪಶ್ಚಿಮ ಬಂಗಾಳ ಮೂಲದ ಮಮತಾ ಬಸು (73) ಮತ್ತು ಅವರ ಪುತ್ರ ದೇಬದೀಪ್ ಬಸು ಅವರ ಸ್ನೇಹಿತ, ಒಡಿಶಾ ಮೂಲದ ದೇಬ ರಥ್ ಬಹೇರಾ (42) ಕೊಲೆಯಾದವರು. ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ.
Related Articles
Advertisement
ಡಿವಿಆರ್ ಯಾಕೆ ಕಳವು?:
ಕೊಲೆಗೈದ ಬಳಿಕ ಮನೆ ಯನ್ನು ಶೋಧಿಸಿರುವ ದುಷ್ಕರ್ಮಿಗಳು, ಲ್ಯಾಪ್‌ಟಾಪ್, ಮೊಬೈಲ್‌ಗಳು, ಎಟಿಎಂ ಕಾರ್ಡ್‌ಗಳು, ಚಿನ್ನಾಭ ರಣ, ನಗದು ಮತ್ತು ಮನೆಯಲ್ಲಿದ್ದ ಸಿಸಿ ಕ್ಯಾಮೆರಾದ ಡಿವಿಆರ್ ಹಾಗೂ ಇತರೆ ಮೌಲ್ಯಯುತ ವಸ್ತುಗಳನ್ನು ಕದೊಯ್ದಿದ್ದಾರೆ ಎಂದು ಪೊಲೀಸರು ಹೇಳಿದರು. ಡಿಜಿಟಲ್ ವಿಡಿಯೋ ರೆಕಾರ್ಡರ್‌ನಲ್ಲಿ ಹಂತಕರ ಎಲ್ಲಾ ಸುಳಿವು ಇರುವುದರಿಂದ ಅದನ್ನೇ ದುಷ್ಕರ್ಮಿಗಳು ಹೊತ್ತೂಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲಸದವರು ಬಂದಾಗ ಘಟನೆ ಬೆಳಕಿಗೆ:
ಗುರುವಾರ ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ಮನೆಕೆಲಸದಾಕೆ ಬಂದಾಗ ಮನೆಯ ಬಾಗಿಲು ತೆರೆದಿತ್ತು. ಆಗ ಅಮ್ಮ ಎಂದು ಕೂಗಿ ದಾಗ ಯಾವುದೇ ಪ್ರತಿ ಕ್ರಿಯೆ ಬಂದಿಲ್ಲ. ಒಳಗೆ ಹೋಗಿ ನೋಡಿದಾಗ ದೇಬರಥ್ ಬಹೇರಾ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅನಂತರ ಮೊದಲನೇ ಮಹಡಿಯ ಕೊಠಡಿಯಲ್ಲಿ ನೋಡಿದಾಗ ಮಮತಾ ಬಸು ಕತ್ತು ಕೊಯ್ದು ಕೊಲೆಯಾಗಿದ್ದರು. ಗಾಬರಿಗೊಂಡು ಹೊರಗಡೆ ಬಂದು ಮನೆಕೆಲಸದಾಕೆ, ಕೂಡಲೇ ಪಕ್ಕದ ಮನೆಯವರ ಮೂಲಕ ವೃದ್ಧೆಯ ಪುತ್ರ ದೇಬದೀಪ್ ಬಸುಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ನೋಡಿ, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಬಂದ ಪುಟ್ಟೇನಹಳ್ಳಿ ಪೊಲೀಸರು ಮತ್ತು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜತೆಗೆ ಘಟನಾ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರ ತಂಡ ಆಗಮಿಸಿ ಪರಿಶೀಲನೆ ನಡೆಸಿದವು. ವೃದ್ಧೆ ಒಂಟಿಯಾಗಿರುವುದನ್ನು ಗಮನಿಸಿದ ಹಂತಕರು ಮನೆ ಲೂಟಿ ಮಾಡಲು ಬಂದು ಆಕೆಯನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ವೃದ್ಧೆಯ ಜತೆ ಮತ್ತೂಬ್ಬ ವ್ಯಕ್ತಿ ಇರುವ ಬಗ್ಗೆ ಮಾಹಿತಿ ಇಲ್ಲದಿದ್ದರಿಂದ ಹಂತಕರು ಆತನನ್ನು ಕೊಲೆ ಮಾಡಿ ಪರಾರಿಯಾಗಿರಬಹುದು ಎಂದು ಪೊಲೀ ಸ ರು ಅನುಮಾನ ವ್ಯಕ್ತಪಡಿಸಿದ್ದಾರೆ.