Advertisement
ಉಳ್ಳಾಲ ಮೇಲಂಗಡಿಯ ಜಲಾಲ್ ಯಾನೆ ಜಲಾಲುದ್ದೀನ್(28), ಕುಂಪಲ ಶಾಲೆ ಬಳಿಯ ಅರ್ಫಾನ್ ಯಾನೆ ಅಪ್ಪು(25), ಉಳ್ಳಾಲ ಟಿ.ಸಿ.ರೋಡಿನ ಜಾಫರ್ ಸಾದಿಕ್ (20), ಕೆ.ಸಿ.ರೋಡ್ ತಲಪಾಡಿಯ ಮುಝಂಬಿಲ್ (22) ಬಂಧಿತರು.
ಮಂಗಳವಾರ ಆಸ್ಟಿಮ್ ನಿತೇಶ್ ಮೊಂತೆರೋ ಅವರು ಉಳ್ಳಾಲ ಅಜಾದ್ ನಗರದ ಕಿರಿದಾದ ರಸ್ತೆಯಲ್ಲಿ ಅವರ ರಿಕ್ಷಾಟೆಂಪೋವನ್ನು ನಿಲ್ಲಿಸಿ ಟೆಂಪೋ ರಿಕ್ಷಾದಿಂದ ಮಣ್ಣಿನ ಲೋಡನ್ನು ಖಾಲಿ ಮಾಡುತ್ತಿದ್ದ ಸಮಯ ಅದೇ ರಸ್ತೆಯಿಂದಾಗಿ ಬಂದ ಕಪ್ಪು ಬಣ್ಣದ ಕಾರೊಂದರಲ್ಲಿ ನಾಲ್ವರು ವ್ಯಕ್ತಿಗಳು ಟೆಂಪೋ ರಿಕ್ಷಾವನ್ನು ರಸ್ತೆಯಿಂದ ತೆಗೆಯುವಂತೆ ಜೋರು ಮಾಡಿದ್ದರು. ಅನಂತರ ರಿûಾಕ್ಕೆ ಅಡ್ಡ ನಿಂತು ಅವರಿಗೆ ಕೈಯಿಂದ ಹಲ್ಲೆ ನಡೆಸಿರುವುದಲ್ಲದೇ ಅವರ ಕಾರಿನ ಸೀಟಿನಲ್ಲಿದ್ದವನು ಕಾರಿನಿಂದ ಚೂರಿಯೊಂದನ್ನು ತೆಗೆದುಕೊಂಡು ಬಂದು ಅಸ್ಟಿಮ್ ನಿತೇಶ್ ಮೊಂತೆರೋ ಅವರಿಗೆ ಚೂರಿಯಿಂದ ಕೈಗೆ ಇರಿದು, ಅನಂತರ ಎದೆಗೆ ಇರಿಯಲು ಪ್ರಯತ್ನಿಸಿದ ಸಮಯ ಅಸ್ಟಿಮ್ ನಿತೇಶ್ ಮೊಂತೆರೋ ಅವರು ಅವರಿಂದ ಓಡಿ ತಪ್ಪಿಸಿಕೊಂಡಿದ್ದರು. ಗಾಯಗೊಂಡ ಅಸ್ಟಿಮ್ ನಿತೇಶ್ ಮೊಂತೆರೋಅವರು ಉಳ್ಳಾಲದ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿ ಯಾಗಿ ದಾಖಲಾಗಿದ್ದಾರೆ.
Related Articles
Advertisement
ಹಲ್ಲೆ ನಡೆಸಿದ ಬಳಿಕ ಆರೋಪಿಗಳು ಬೇರೆ ಕಾರಿನಲ್ಲಿ ಮಡಿಕೇರಿ ಕಡೆಗೆ ಪರಾರಿಯಾಗುವ ಸಂದರ್ಭ ಸುಳ್ಯ ಸಮೀಪ ಕಾರು ಹಾಳಾಗಿತ್ತು. ಈ ಹಿನ್ನೆಲೆಯಲ್ಲಿ ಕಾರನ್ನು ಗ್ಯಾರೇಜಿನಲ್ಲಿರಿಸಿದ್ದರು.
ಸಂದರ್ಭ ಮಾಹತಿ ಪಡೆದ ಸುಳ್ಯ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡರು.ಬಳಿಕ ಆರೋಪಿಗಳನ್ನು ಸಿಸಿಬಿ ಪೊಲೀಸರಿಗೆ ಹಸ್ತಾಃಂತರಿಸಲಾಯಿತು.
ಪೊಲೀಸ್ ಕಮೀಷನರ್ ಟಿ. ಆರ್ ಸುರೇಶ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ ಕೆ.ಎಂ. ಶಾಂತರಾಜು, ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಹನುಮಂತರಾಯ ಮತ್ತು ಎಸಿಪಿ ಸಿಸಿಬಿ ಬಿ. ವೆಲೆಂಟೈನ್ ಡಿ’ಸೋಜಾ ರವರ ಮಾರ್ಗದರ್ಶನ ನೀಡಿದ್ದರು.
ಅಪರಾಧ ಪತ್ತೆ ದಳದ ಇನ್ಸ್ ಪೆಕ್ಟರ್ ಸುನೀಲ್ ವೈ ನಾಯ್ಕ ಮತ್ತು ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬಂದಿ ಆರೋಪಿಗಳ ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.