Advertisement

Karkala: ಮುನಿಯಾಲು ಉದಯ ಶೆಟ್ಟಿ ಗೆಲುವು ಖಚಿತ: ಸುಧೀರ್ ಕುಮಾರ್ ಮರೋಳಿ

12:15 PM May 08, 2023 | Team Udayavani |

ಹೆಬ್ರಿ: ಕಾಕ೯ಳದಲ್ಲಿ ಬಿಜೆಪಿ ಭ್ರಷ್ಟಾಚಾರ ಹಾಗೂ ದಪ೯ರಾಜಕೀಯದಿಂಸ ಬೇಸತ್ತ ಜನ ಬದಲಾವಣೆ ಬಯಸಿದ್ದು ದಕ್ಷ ಹಾಗೂ ಪ್ರಮಾಣಿಕ ಜನ ಸೇವಕ ಮುನಿಯಾಲು ಉದಯ ಶೆಟ್ಟಿ ಅವರನ್ನು ಜನ ಬೆಂಬಲಿಸುತ್ತಿದ್ದು ಪ್ರತಿಯೊಂದು ಕಡೆ ನಡೆಯುವ ಪ್ರಚಾರ ಸಭೆಗಳಲ್ಲಿ ಸೇರುತ್ತಿರುವ ಜನ ಸಾಗರವೇ ಸಾಕ್ಷಿಯಾಗಿದ್ದು ಬಹುಮತದಿಂದ ಉದಯಕುಮಾರ್ ಶೆಟ್ಟಿ ಅವರ ಗೆಲುವ ಖಚಿತವಾಗಿದೆ ಎಂದು ಕಾಂಗ್ರೆಸ್ ರಾಜ್ಯ ವಕ್ತಾರ ಸುಧೀರ್ ಕುಮಾರ್ ಮರೋಳಿ ಹೇಳಿದರು.

Advertisement

ಅವರು ಮೇ 6 ರಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಹೆಬ್ರಿ ಬಸ್ ತಂಗುದಾಣದ ವಠಾರದಲ್ಲಿ ನಡೆದ ಕಾಂಗ್ರೆಸ್ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಕಾಕ೯ಳ ಜನತೆಯ ಗೆಲುವು:
ಸಮಾಜ ಕಟ್ಟ ಕಡೆಯ ವ್ಯಕ್ತಿಯನ್ನು ತಲುಪುವುದು ಮತ್ತು ಅವರ ಸಮಸ್ಯೆಗಳಿಗೆ ಸ್ಪಂದಿಸುವುದು ನಿಜವಾಗ ಅಭಿವೃದ್ಧಿ ಎಂದು ತಿಳಿದ ಉದಯಕುಮಾರ್ ಶೆಟ್ಟಿ ಅವರ ಅಭಿವೃದ್ಧಿ ಪರ ಚಿಂತನೆ ಕಾಕ೯ಳಕ್ಕೆ ವರದಾನವಾಗಲಿದೆ.ಉತ್ಸವ ಅಬ್ಬರದ ಪ್ರಚಾರದಿಂದ ಜನರ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ .ಯಾವುದೇ ಅಹಂ ಇಲ್ಲದೆ ಸಾಮಾನ್ಯ ಕಾಯ೯ಕತ೯ನನ್ನು ತಲುಪಬೇಕು ಆಗ ಮಾತ್ರ ಸಾಮಾಜಿಕ ಪರಿವತ೯ನೆ ಸಾಧ್ಯ .ಈ ನಿಟ್ಟಿನಲ್ಲಿ ಉದಯ ಶೆಟ್ಟಿ ಅವರ ಗೆಲುವು ಕಾಕ೯ಳ ಜನತೆಯ ಗೆಲುವಿನಂತೆ ಎಂದರು.

ಭ್ರಷ್ಟ ರಾಜಕಾರಣಕ್ಕೆ ಕೊನೆ :
ಕಾಕ೯ಳದಲ್ಲಿ ಅಭಿವೃದ್ಧಿ ಎಂದು ಹೇಳಿಕೊಳ್ಳುತ್ತಿರುವ ಸುನೀಲ್ ಕುಮಾರ್ ತನ್ನ ಭ್ರಷ್ಟಾಚಾರವನ್ನು ಅವರ ಗುರುಗಳೆ ಬಯಲು ಮಾಡುತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಜನ ತಕ್ಕ ಉತ್ತರ ನೀಡಲಿದ್ದು ನಿಜವಾದ ಅಭಿವೃದ್ಧಿ ಚಿಂತನೆಯ ಹರಿಕಾರ ಮುನಿಯಾಲು ಉದಯ ಶೆಟ್ಟಿಯವರನ್ನು ಪಕ್ಷ ಬೇದ ಮರೆತು ಜನ ಗೆಲ್ಲಿಸಲಿದ್ದಾರೆ ಎಂದರು.

ಕನಾ೯ಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ :

Advertisement

ಬೆಲೆ ಏರಿಕೆ ಹಾಗೂ ಭ್ರಷ್ಟಾ ಆಡಳಿತದಿಂದ ಜನ ರೋಸಿಹೋಗಿದ್ದು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ನ ಜನಪರ ಪ್ರಣಾಳಿಕೆಯಿಂದ ಜನ ಸಂತುಷ್ಟರಾಗಿದ್ದು ಎಲ್ಲಾ ಸಮಸ್ಯೆಗಳಿಗೆ ಕಾಂಗ್ರೆಸ್ ಪಕ್ಷ ವೊಂದೆ ಪರಿಹಾರ ಎಂದು ತಿಳಿದ ಜನ ಕಾಂಗ್ರೆಸ್ ನತ್ತ ಒಲವುತೋರಿಸುತ್ತಿದ್ದು ರಾಜ್ಯ ದಲ್ಲಿ ಕೂಡ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು ಇದರ ಜತೆಗೆ ಉದಯ ಶೆಟ್ಟಿ ಅವರ ಗೆಲುವಿನಿಂದ ಕಾಕ೯ಳ ಸಮಗ್ರ ಅಭಿವೃದ್ಧಿಗೊಳ್ಳಲಿದೆ ಎಂದು ಕಾಂಗ್ರೆಸ್ ವಕ್ತಾರ ಎಂ.ಜಿ.ಹೆಗ್ಡೆ ಹೇಳಿದರು.

ಗೋಪ‍ಾಲ ಭಂಡಾರಿಯ ಕನಸು ನನಸು :

ಯಾವುದೇ ಭ್ರಷ್ಟಾಚಾರವಿಲ್ಲದೆ ಶುದ್ಧ ಹಸ್ತದ ರಾಜಕಾರಣ ಮಾಡಿ ಬಿಜೆಪಿಗರ ಮನಸ್ಸನ್ನು ಗೆದ್ದ ಅಜಾತಶತ್ರು ಬಡವರ ಬಂಧುವಾದ ಗೋಪಾಲ ಭಂಡಾರಿಯವರು ಕಾಕ೯ಳ ಅಭಿವೃದ್ಧಿಗೆ ವಿಶೇಷ ಶ್ರಮವಹಿಸಿ ಜನ ಸಮಾನ್ಯರಲ್ಲೂ ಪ್ರೀತಿಯಿಂದ ಮಾತನಾಡಿಸುತ್ತಿದ್ದರು.ಇದೀಗ ಅವರ ಶಿಷ್ಯ ಸರಳ ಸಜ್ಜನಿಕೆಯ ಮುನಿಯಾಲು ಉದಯ ಶೆಟ್ಟಿ ಅವರು ಕೂಡ ಕಾಕ೯ಳ ಜನರ ಮನಗೆದ್ದಿದ್ದು ಅವರಂತೆಯೆ ಕಾಕ೯ಳದಲ್ಲಿ ಮತ್ತೆ ಜನಪರ ಆಡಳಿತದ ಕಾಂಗ್ರೆಸ್ ವೈಭವನ್ನು ಕಾಣಲಿದ್ದು ಭಂಡಾರಿಯವರ ಕನಸು ನನಸಾದಂತೆ ಎಂದು ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ ಹೇಳಿದರು.

ಬೃಹತ್‌ ಪಾದಯಾತ್ರೆ ಮೂಲಕ ಮತಯಾಚನೆ :

ಹೆಬ್ರಿ ,ಮುದ್ರಾಡಿ, ಮುನಿಯಾಲಿನ ಪ್ರಮುಖ ಬೀದಿಗಳಲ್ಲಿ ಪದಯಾತ್ರೆ ಮೂಲಕ ಮತಯಾಚನೆ ನಡೆಯಿತು. ಹೆಬ್ರಿ ಹಾಗೂ ಮುನಿಯಾಲಿನಲ್ಲಿ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಬೃಹತ್‌ ಸಂಖ್ಯೆಯಲ್ಲಿ ಜನ ಸೇರಿದ್ದರು.

ಈ ಸಂದರ್ಭದಲ್ಲಿ ಹೆಬ್ರಿ ಬ್ಲಾಕ್ ಅಧ್ಯಕ್ಷ ಚಂದ್ರಶೇಖರ್ ಬಾಯರಿ, ಪ್ರಚಾರ ಸಮಿತಿ ಅಧ್ಯಕ್ಷ ನವೀನ್ ಕೆ. ಅಡ್ಯಂತಾಯ ,ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಂಜಿನಿ ಹೆಬ್ಬಾರ್ ,ಹೆಬ್ರಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಶೆಟ್ಟಿ ಪ್ರಮುಖರಾದ ಗೀರಿಶ್ ಶೆಟ್ಟಿ ಕುಡುಪುಲಾಜೆ, ದೀಪಾ ಭಂಡಾರಿ, ಸುರೇನಾಥ ಶೆಟ್ಟಿ ,ಆನಂದ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.ಜನಾರ್ಧನ್ .ಕಾಯ೯ಕ್ರಮ ನಿರೂಪಿಸಿದರು.

ಸತ್ಯ ಧಮ೯ದ ಗೆಲುವು

ಕಾಕ೯ಳ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯಕುಮಾರ್ ಶೆಟ್ಟಿ ಮಾತಮಾಡಿ ಜನರ ಪ್ರೀತಿಗೆ ಶರಣಾಗಿದ್ದೇನೆ. ಯಾವುದೇ ಅಮಿಷವೊಡ್ಡಿ ಮತಕೇಳುತ್ತಿಲ್ಲ.ಸತ್ಯ ಧಮ೯ದ ಮತ ನನಗೆ ಬೇಕು.ಜನ ಜಾಗೃತರಾಗಬೇಕು ಇನ್ನು ಹಣದ ಅಮಿಷವೊಡ್ಡಲು ನಿಮ್ಮಲ್ಲಿಗೆ ಬರುತ್ತಾರೆ .ಇದಕ್ಕೆ ಬಲಿಯಾಗೆ ನಿಮ್ಮ ಅಮೂಲ್ಯವಾದ ಮತವನ್ನು ಹಣಕ್ಕೆ ಮಾರದೆ ಮುಂದಿನ 5ವಷ೯ ಸಂತೋಷದಿಂದ ಜೀವನ ಸಾಗಿಸಲು ಕಾಂಗ್ರೆಸ್ ಪಕ್ಷದ ಚಿಹ್ನೆಗೆ ಮತ ನೀಡಿ.ರಸ್ತೆ ಮೊದಲಾದ ಅಭಿವೃದ್ಧಿಗಳು ನಿಮ್ಮ ತೆರೆಗೆ ಹಣದಿಂದ ಆಗಿರುವುದು.ಯಾವುದೇ ಶಾಸಕ ಅವರ ಸ್ವಂತ ಮಾಡಿರುವುದಲ್ಲ.ನಾಳೆ ನಾನು ಆದರೂ ಅಷ್ಟೇ .ಅಭಿವೃದ್ಧಿಯ ಜತೆ ಜನರ ಪ್ರೀತಿ ಹಾಗೂ ಅವರ ಭಾವನೆಗಳಿಗೆ ಸ್ಪಂದಿಸಬೇಕು.ಆಗಮಾತ್ರ ಕಾಕ೯ಳದ ಜನತೆ ಸುಖ ಸಂತೋಷದಿಂದ ಇರಲು ಸಾಧ್ಯ ಕೇವಲ ಪ್ಲೇಕ್ಷ ಬ್ಯಾನರ್ ನಲ್ಲಿ ತಮ್ಮ ಪೋಟೋ ಹಾಕಿಕೊಂಡರೆ ಅಭಿವೃದ್ಧಿ ಅಲ್ಲ. ಜನರ ಮೂಲಭೂತ ಸೌಲಭ್ಯಗೆ ಒತ್ತು ನೀಡಬೇಕು.ಹೆಬ್ರಿ ಹಾಗೂ ಕಾಕ೯ಳ ಸರಕಾರಿ ಆಸ್ಪತ್ರೆಯಲ್ಲಿ ಸರಿಯಾದ ವೈಧ್ಯರು ಹಾಗೂ ಚಿಕಿತ್ಸೆ ಇಲ್ಲದೆ ಜನ ಹಿಡಿ ಶಾಪಹಾಕುತ್ತಿದ್ದಾರೆ.ನನಗೆ ಒಮ್ಮೆ ಅವಕಾಶ ಕೊಡಿ ಮೊದಲು ಈ ಸಮಸ್ಯೆಗೆ ಸರಕಾರದಿಂದ ಅಥವಾ ವ್ಯಯಕ್ತಿಕವಾಗಿ ಸ್ಪಂದಿಸಿ ಸಮಸ್ಯೆ ಬಗೆಹರಿಸುತ್ತೇನೆ.ನಿಮ್ಮಲ್ಲರ ಸತ್ಯ ಧಮ೯ದ ಮತ ಕಾಕ೯ಳ ಜನ ಸಂತೋಷದಿಂದ ಜೀವನ ಸಾಗಿಸಲು ಸಹಕಾರಿಯಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next