Advertisement

Karkala ವಾಹನ ಜಾಥಾದೊಂದಿಗೆ ಪ್ರಚಾರ ಆರಂಭಿಸಿದ ಮುನಿಯಾಲು ಉದಯ್ ಕುಮಾರ್ ಶೆಟ್ಟಿ

04:32 PM Apr 16, 2023 | Team Udayavani |

ಕಾರ್ಕಳ : ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಅವರು ಭಾನುವಾರ ವಾಹನ ಜಾಥಾ ನಡೆಸಿ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.

Advertisement

ಮಾಜಿ ಶಾಸಕ ಗೋಪಾಲ್ ಭಂಡಾರಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕರತರನ್ನುದ್ದೇಶಿಸಿ ಮಾತನಾಡಿದರು.

ಈ ವೇಳೆ ತುಳುವಿನಲ್ಲೇ ಮುಖಂಡರು ಮತ್ತು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಉದಯ್ ಕುಮಾರ್ ಶೆಟ್ಟಿ, ಕಾರ್ಕಳ 1972 ರಿಂದಲೂ ಕಾಂಗ್ರೆಸ್ ಯುಗವಾಗಿತ್ತು. 10 ವರ್ಷಗಳಿಂದ ಬದಲಾವಣೆ ಇದೆ . ಕಾಲ ಚಕ್ರ ತಿರುಗುತ್ತಲೇ ಇರುತ್ತದೆ. ಈಗ ಕಾಂಗ್ರೆಸ್ ಗೆಲ್ಲುವ ಅವಕಾಶ ಬಂದಿದೆ ಎಂದರು.

ಮಾಜಿ ಶಾಸಕ ದಿವಂಗತ ಗೋಪಾಲ ಭಂಡಾರಿ ಅವರ ಹಾದಿಯಲ್ಲೇ ಶುದ್ದ ಹಸ್ತ ನಾಗಿ ಕೆಲಸ ಮಾಡುತ್ತೇನೆ. ವೀರಪ್ಪ ಮೊಯ್ಲಿ ಅವರ ಮರಗದರ್ಶನದಲ್ಲಿ ಕೆಲಸ ಮಾಡುತ್ತೇನೆ. ನಾನು ಯಾವುದೇ ತಪ್ಪು ಮಾಡಿಲ್ಲ, ಆದರೂ ಸಾರ್ವತ್ರಿಕವಾಗಿ ಕ್ಷಮೆ ಕೇಳಲು ಸಿದ್ದನಿದ್ದೇನೆ. ಕೆಲವರು ಮತ್ತೆ ಮತ್ತೆ ಕಿವಿ ಚುಚ್ಚುತ್ತಲೇ ಅವರಿಗೆ ನೋವು ತಂದಿದ್ದಾರೆ. ಎಲ್ಲ ಕಾರ್ಯಕರ್ತರು ಒಂದಾಗಿ ವೀರಪ್ಪ ಮೊಯ್ಲಿ ಅವರನ್ನು ಕ್ಷೇತ್ರದಲ್ಲಿ ಪ್ರಚಾರಕ್ಕೆ ಕರೆಸಬೇಕು. ಕಾರ್ಯಕರ್ತರು ಹೆದರಬೇಕಾಗಿಲ್ಲ ಎಂದರು.

ಯಾವುದೇ ಗೊಂದಲಕ್ಕೆ ಅವಕಾಶ ಮಾಡುವುದು ಬೇಡ. ಕಾರ್ಕಳದ ಜಾತಿ, ಮತ ಧರ್ಮ ಬೇಧ ಉದಯ್ ಶೆಟ್ಟಿಗೆ ಇಲ್ಲ. ನಾನು ಒಂದು ಮತದಲ್ಲಿ ಆದರೂ ಗೆದ್ದರೂ ಸಾಕು. ಇನ್ನು 25 ದಿನ ನನಗಾಗಿ ಕೆಲಸ ಮಾಡಿ ನಾನು ಐದು ವರ್ಷ ನಿಮಗಾಗಿ ಸೇವೆ ಮಾಡುತ್ತೇನೆ. ಈ ಬಾರಿ ಗೆದ್ದರೆ ಮುಂದಿನ ಬಾರಿ ಪ್ರಚಾರಕ್ಕೆ ಹೋಗದೇ ಚುನಾವಣೆ ಎದುರಿಸುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದರು.

Advertisement

ನಾನು ಮಾನಸಿಕವಾಗಿ ಕಾಂಗ್ರೆಸ್ ಪಕ್ಷದಲ್ಲೇ ಇದ್ದೆ, ಆದರೆ ಎರಡು ಮೂರು ವರ್ಷ ದೂರವಿದ್ದೆ. ನನ್ನ ವ್ಯವಹಾರದ ಕಾರಣ ದೂರವಿದ್ದೆ. ಯಾರೂ ತಪ್ಪು ತಿಳಿಯದೆ ನನ್ನ ಪರವಾಗಿ ಕೆಲಸ ಮಾಡಿ ಎಂದರು.

ಕಾಂಗ್ರೆಸ್ ಪ್ರಮುಖ ನಾಯಕರು, ನೂರಾರು ಕಾರ್ಯಕರ್ತರು ಈ ವೇಳೆ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next