ಮಣಿಪಾಲ: ಚರ್ಮ ರೋಗವು ದೈಹಿಕ ಒತ್ತಡ ನೀಡುವ ಜತೆಗೆ ಭಾವನಾತ್ಮಕ, ಮಾನಸಿಕ ಹಾಗೂ ಸಾಮಾಜಿಕ ಕಿರಿಕಿರಿ ಉಂಟು ಮಾಡುತ್ತದೆ. ಆಧುನಿಕ ವೈದ್ಯ ಪದ್ಧತಿಯಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದ ಚರ್ಮರೋಗಗಳಿಗೆ ಆಯುರ್ವೇದದ ಮೂಲಕ ಪರಿಹಾರ ಸಿಕ್ಕಿದೆ ಎಂದು ಮುನಿಯಾಲು ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ| ಸತ್ಯಾನಾರಾಯಣ ಬಿ. ಹೇಳಿದರು.
ಶಿವಳ್ಳಿ ಕೈಗಾರಿಕೆ ಪ್ರದೇಶದ ಆವರಣದಲ್ಲಿರುವ ಮುನಿಯಾಲು ಆಯುರ್ವೇದ ಕಾಲೇಜಿನಲ್ಲಿ ಶನಿವಾರ ನಡೆದ “ತ್ವಕ್‌ಶುದ್ಧಿ-2023′ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನೆಯಲ್ಲಿ ಅವರು ಮಾತನಾಡಿದರು.
ಮಾನವನ ಶರೀರದ ಚರ್ಮವು ಬಯೊಲಾಜಿಕ್ ಸಹಿತ ಹಲವು ಸಮಸ್ಯೆಯನ್ನು ತಡೆಯುತ್ತವೆ. ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಕ್ರಮ, ಆಹಾರ ಕ್ರಮ, ಪರಿಸರ ಮಾಲಿನ್ಯದಿಂದ ಚರ್ಮರೋಗಗಳು ಹೆಚ್ಚಾಗುತ್ತಿವೆ. ಚರ್ಮ ಸಂಬಂಧಿತ ರೋಗಗಳು ಮನು ಷ್ಯನ ಉದ್ಯೋಗ ಕಳೆಯುವ ಜತೆಗೆ ಹಲವು ಸಮಸ್ಯೆ ಉಂಟುಮಾಡುತ್ತವೆ. ಇದು ದೀರ್ಘಕಾಲದ ಮತ್ತು ಸವಾಲಿನ ರೋಗವಾಗಿ ಪರಿಣಿಸುತ್ತಿದೆ. ಹೀಗಾಗಿ ಚರ್ಮರೋಗಕ್ಕೆ ಆರಂಭದಲ್ಲೆ ಚಿಕಿತ್ಸೆ ಪಡೆಯುವುದು ಅಗತ್ಯ ಎಂದರು.
ಮಣಿಪಾಲ ಕೆಎಂಸಿಯ ಚರ್ಮ ರೋಗ ವಿಭಾಗದ ಮುಖ್ಯಸ್ಥ ಡಾ| ರಾಘವೇಂದ್ರ ರಾವ್, ಕಾಸರಗೋಡಿನ ಇನ್‌ಸ್ಟಿಟ್ಯೂಟ್ ಆಫ್ ಅಪ್ಲೈಡ್ ಡರ್ಮಟಾಲಜಿ ವಿಭಾಗದ ಮುಖ್ಯ ಸಲಹೆಗಾರ ಡಾ| ಗುರುಪ್ರಸಾದ್ ಅಗ್ಗಿತ್ತಾಯ, ಕೊಟ್ಟಕ್ಕಲ್‌ನ ವಿಪಿಎಸ್‌ವಿ ಆಯುರ್ವೇದ ಕಾಲೇಜಿನ ಸಹ ಪ್ರಾಧ್ಯಾ ಪಕ ಡಾ| ಗೋಪಿಕೃಷ್ಣ ಎಸ್. ವೈಜ್ಞಾನಿಕ ಗೋಷ್ಠಿಗಳನ್ನು ನಡೆಸಿಕೊಟ್ಟರು.
ಪ್ರಾತ್ಯಕ್ಷಿಕೆ ಹಾಗೂ ಕಾರ್ಯಾಗಾರದಲ್ಲಿ ಕಿನ್ನಿಗೋಳಿ ಆಯುರ್ ರಶ್ಮಿ ಕ್ಲಿನಿಕ್‌ನ ಮುಖ್ಯ ಸಲಹೆಗಾರ್ತಿ ಡಾ| ರಶ್ಮಿ ಸುವರ್ಣ ಅವರು ಸೋಪ್ ತಯಾ ರಿಕೆ, ಟ್ರೈಕಾಲಜಿ ಉಪಕರಣಗಳ ಬಗ್ಗೆ ಮತ್ತು ಮುನಿಯಾಲು ಆಯು ರ್ವೇದ ಕಾಲೇಜಿನ ರಸಶಾಸ್ತ್ರ ಮತ್ತು ಭೈಷಜ್ಯಕಲ್ಪನಾ ವಿಭಾಗದ ಉಪನ್ಯಾಸಕರು ಜೆಲ್ ಮತ್ತು ಕ್ರೀಮ್ ತಯಾರಿಕೆಯ ಬಗ್ಗೆ ವಿವರಿಸಿದರು.
ಕಾಲೇಜಿನ ನಿರ್ದೇಶಕಿ ಡಾ| ಶ್ರದ್ಧಾ ಶೆಟ್ಟಿ ಉಪಸ್ಥಿತರಿದ್ದರು. ಪ್ರಾಧ್ಯಾಪಿಕೆ ಯರಾದ ಡಾ| ನಿವೇದಿತಾ ಹೆಬ್ಬಾರ್ ಸ್ವಾಗತಿಸಿ, ಡಾ| ಅರ್ಚನಾ ಕಲ್ಲೂರಾಯ ವಂದಿಸಿ, ನಿರೂಪಿಸಿದರು. ವಿಚಾರ ಸಂಕಿರಣದಲ್ಲಿ ದೇಶದ 250ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಿದ್ದು, 132 ಸಂಶೋಧನ ಪ್ರಬಂಧ ಮಂಡಿಸಲಾಗಿದೆ.