Advertisement

ಮುನಿರತ್ನ ಮಾತು : ಸದಾ ಕ್ಷೇತ್ರದ ಜನರೊಂದಿಗೆ ಇರುವೆ

01:07 PM Nov 12, 2020 | Suhan S |

ಒಮ್ಮೆ ಮತಭಿಕ್ಷೆಕೇಳಿದ ನಂತರ ಮತದಾರರೊಂದಿಗೆ ಇರುವುದು ನನ್ನಕರ್ತವ್ಯ. ಅಧಿಕಾರ ಇರಲಿ, ಇಲ್ಲದಿರಲಿ, ಚುನಾವಣೆ ಬರಲಿ, ಬಾರದಿರಲಿ. ನಾನಂತು ಸದಾಕ್ಷೇತ್ರದ ಜನರೊಂದಿಗೆ ಇರುತ್ತೇನೆ. ಸದಾ ಅವರ ಋಣ ತೀರಿಸುವ ಪ್ರಯತ್ನ ಮಾಡುತ್ತಿರುತ್ತೇನೆ. ಇದು “ಉದಯವಾಣಿ’ ಜತೆ ಮಾತನಾಡಿದ ರಾಜರಾಜೇಶ್ವರಿ ನಗರದ ನೂತನ ಶಾಸಕ ಮುನಿರತ್ನ ಅವರ ಮನದಾಳದ ಮಾತು.

Advertisement

 ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳೇನು? :

ಕ್ಷೇತ್ರ ವ್ಯಾಪ್ತಿಯಲ್ಲಿ ಹಲವುಕಡೆಗಳಲ್ಲಿ ಅಂಡರ್‌ಪಾಸ್‌ ಮತ್ತು ಬ್ರಿಡ್ಜ್ಗಳ ನಿರ್ಮಾಣ ಆಗಬೇಕಿದೆ. ಈ ಸಂಬಂಧ ಅನೇಕ ಯೋಜನೆಗಳನ್ನು ಸಿದ್ಧಪಡಿಸಿದ್ದೇವೆ. ಮೂರ್‍ನಾಲ್ಕು ದಿನದಲ್ಲಿ ಬಗ್ಗೆ ಸುದೀರ್ಘ‌ವಾದ ಚರ್ಚೆ ನಡೆಸಿ,ಕ್ಷೇತ್ರದ ಅಭಿವೃದ್ಧಿಗಾಗಿ ರೂಪಿಸಿಕೊಂಡಿರುವ ಎಲ್ಲ ಯೋಜನೆಗಳನ್ನು ಖಂಡಿತವಾಗಿ ಅನುಷ್ಠಾನಕ್ಕೆತಂದೇ ತರುತ್ತೇನೆ.ಕ್ಷೇತ್ರದ ಅಭಿವೃದ್ಧಿಯೇ ಮೊದಲ ಆದ್ಯತೆಯಾಗಿದೆ.

ಸಚಿವ ಸ್ಥಾನದಬಗ್ಗೆ ಮಾತುಕತೆ ನಡೆದಿದೆಯೇ? :

ಸಚಿವ ಸ್ಥಾನದ ಬಗ್ಗೆ ನಾನು ಮಾತನಾಡುವು ತಪ್ಪಾಗುತ್ತದೆ. ಅದೆಲ್ಲವೂ ಮುಖ್ಯಮಂತ್ರಿಯವರಿಗೆ ಬಿಟ್ಟ ವಿಚಾರವಾಗಿದ್ದು, ಅವರೇ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ಮುಖ್ಯಮಂತ್ರಿಯವ ನಿರ್ಧಾರದಂತೆ ಮುನ್ನೆಡೆಯುತ್ತೇವೆ.

Advertisement

ಸಂಘಟನಾತ್ಮಕವಾಗಿ ನಿಮ್ಮಕಾರ್ಯಹೇಗಿತ್ತು? :

ಕ್ಷೇತ್ರದ ಜನತೆಗೆಕೆಲಸ ಮಾಡುವ ವ್ಯಕ್ತಿ ಬೇಕು ಎಂಬುದನ್ನು ಉಪಚುನಾವಣೆಯಲ್ಲಿ ಮತಗಳಮೂಲಕ ತೋರಿಸಿದ್ದಾರೆ. ಪಕ್ಷದ ಮುಖಂಡರು ಹಾಗೂ ಹಿರಿಯ ಆಶೀರ್ವಾದದಿಂದ ಈ ಗೆಲವು ಸಾಧ್ಯವಾಗಿದೆ.ಕಾರ್ಯಕರ್ತರ ಶ್ರಮವೂ ಅಷ್ಟೇ ಇದೆ. ಸಂಘಟಿತ ಪ್ರಯತ್ನದಿಂದ ಗೆಲವು ಸಿಕ್ಕಿದೆ.

ನಿಮ್ಮ ಗೆಲುವಿನ ಗುಟ್ಟೆನು ?  :

ಈ ಹಿಂದೆ ಎರಡು ಬಾರಿ ಶಾಸಕನಾಗಿ ಕಾರ್ಯ ನಿರ್ವಹಿಸಿದ್ದ ಸಂದರ್ಭದಲ್ಲಿಕ್ಷೇತ್ರದ ಜನತೆಗಾಗಿ ಮಾಡಿದ ಅಭಿವೃದ್ಧಿಕಾರ್ಯ, ಸರ್ಕಾರ ವಿವಿಧ ಯೋಜನೆಗಳನ್ನೇ ಮುಂದಿಟ್ಟುಕೊಂಡು ಮತ ಯಾಚಿಸಿದ್ದೇವು. ಸಂಘಟನಾತ್ಮಕವಾಗಿ ಪ್ರತಿ ವಾರ್ಡ್‌ ನಲ್ಲಿ ಕಾರ್ಯ ನಿರಂತವಾಗಿ ನಡೆದಿತ್ತು. ಚುನಾವಣೆ ಘೋಷಣೆಗೂ ಮೊದಲು ತಯಾರಿ ಮಾಡಿದ್ದೇವು. ಹೀಗಾಗಿ ನಮ್ಮ ಗೆಲವು ಸುಲಭವಾಗಿದೆ. ಪ್ರತಿ ಸ್ಪರ್ಧಿಗಳು ಅವರ ಪಕ್ಷದ ಆದೇಶದಂತೆ ಕೆಲಸ ಮಾಡಿದ್ದಾರೆ. ಅದ್ಯಾವುದನ್ನೂ ನಾವು ಗಮನಿಸಿಲ್ಲ, ನಮ್ಮ ಗೆಲುವಿಗೆ ಬೇಕಾದ ಸಂಘಟನಾತ್ಮಕ ಕಾರ್ಯಕ್ರಮವನ್ನು ಮಾಡುತ್ತಾ ಚುನಾವಣೆ ಎದುರಿದ್ದೇವೆ. ಗೆಲವು ಸಿಕ್ಕಿದೆ. ಕ್ಷೇತ್ರದ ಮತದಾರರಿಗೆ, ಪಕ್ಷದ ಕಾರ್ಯಕರ್ತರಿಗೆ ಧನ್ಯವಾದಗಳು

ನಿಮ್ಮ ಗೆಲವು ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷಕ್ಕೆಹೇಗೆ ಶಕ್ತಿ ತುಂಬಲಿದೆ? :

ಆರ್‌ಆರ್‌ ನಗರದ ಬಿಜೆಪಿ ಅಭ್ಯರ್ಥಿಯ ಗೆಲುವು ಖಂಡಿತವಾಗಿಯೂ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಇನ್ನಷ್ಟುಅನುಕೂಲವಾಗಲಿದೆ.ಕ್ಷೇತ್ರದಲ್ಲಿಕೆಲಸ ಮಾಡುವ ಮತ್ತು ಜನ ಸಂಪರ್ಕದಲ್ಲಿರುವ ಶಾಸಕ ಇದ್ದಾಗ ಪಾಲಿಕೆ ಸದಸ್ಯರಿಗೂ ಅದು ಸಹಕಾರಿಯಾಗಲಿ¨

ಕ್ಷೇತ್ರದ ಜತೆಗೆ ಹೇಗೆ ಸ್ಪಂದಿಸುವಿರಿ ? :

ಚುನಾವಣೆ ಸಂದರ್ಭದಲ್ಲಿ ಮಾತ್ರ ಮತದಾರನ್ನು ನೆನಪಿಸಿಕೊಳ್ಳುವುದು ಪಾಪದ ಕಾರ್ಯ.ಈರೀತಿ ಮಾಡುವುದು ಸರಿಯಲ್ಲ. ಚುನಾವಣೆ ಬರಲಿ ಅಥವಾ ಬಾರದಿರಲಿ, ಅಧಿಕಾರ ಇರಲಿ ಅಥವಾ ಇಲ್ಲದಿರಲಿ, ಒಮ್ಮೆ ಕ್ಷೇತ್ರದಲ್ಲಿ ಮತಭಿಕ್ಷೆಕೇಳಿದ ಮೇಲೆ ಅವರೊಂದಿಗೆ ಸದಾ ಇರುವುದ ನಮ್ಮ ಕರ್ತವ್ಯವಾಗಿದೆ. ಅದನ್ನು ಮಾಡುತ್ತಿದ್ದೇನೆ ಮತ್ತು ಮುಂದೆಯೂ ಮಾಡುತ್ತೇನೆ. ಸದಾ ಜನರೊಂದಿಗೆ ಇದ್ದು, ಅವರ ಋಣ ತೀರಿಸುವ ಪ್ರಯತ್ನ ಮಾಡುತ್ತೇನೆ.

 

ರಾಜುಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next