ಮುಂಬಯಿ, ಅ. 29: ಅಖೀಲ ಭಾರತ ಜೈನ ಸಂಘ ಮುಂಬಯಿ ಇದರ 2019-2021ನೇ ಸಾಲಿನ ನೂತನ ಅಧ್ಯಕ್ಷರಾಗಿ ಮುನಿರಾಜ್ ಅಜಿಲ ಅವರು ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.
ಅ. 23ರಂದು ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ನಡೆದ ಅಖೀಲ ಭಾರತ ಜೈನ ಸಂಘ ಮುಂಬಯಿ ಇದರ 22ನೇ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರನ್ನು ನೇಮಿಸಲಾಯಿತು. ಉಪಾಧ್ಯಕ್ಷರಾಗಿ ಉದಯ ಅತಿಕಾರಿ ಮತ್ತು ಪದ್ಮರಾಜ್ ಹೆಗ್ಡೆ, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಪವನಂಜಯ ಬಲ್ಲಾಳ್, ಕೋಶಾಧಿಕಾರಿಯಾಗಿ ಅನಂತರಾಜ್ ಜೈನ್, ಜತೆ ಕಾರ್ಯದರ್ಶಿಯಾಗಿ ರಘುವೀರ್ ಹೆಗ್ಡೆ, ಜತೆ ಕಾರ್ಯದರ್ಶಿಯಾಗಿ ಮಹಾವೀನ್ ಜೈನ್, ಜೊತೆ ಕೋಶಾಧಿಕಾರಿಗಳಾಗಿ ಸಂಪತ್ ಕುಮಾರ್ ಜೈನ್ ಅವರು ಆಯ್ಕೆಯಾದರು.
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಮನೀಷ್ ಹೆಗ್ಡೆ, ಯುವರಾಜ್ ಜೈನ್, ಮಹಾವೀರ ಜೈನ್, ರಾಜೇಂದ್ರ ಹೆಗ್ಡೆ, ರಾಜೇಂದ್ರ ಬಲ್ಲಾಳ್, ಚೈತನ್ಯ ಜೈನ್, ರಾಜವರ್ಮ ಜೈನ್, ಪ್ರತಿಭಾ ವೈದ್ಯ, ವಾರಿಸೇನ ಜೈನ್ ಅವರು ನೇಮಕಗೊಂಡರು. ವಾರ್ಷಿಕ ಮಹಾಸಭೆಯನ್ನು ದೇವತಾ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ಜತೆ ಕಾರ್ಯದರ್ಶಿ ರಘುವೀರ್ ಹೆಗ್ಡೆ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಪವನಂಜಯ ಬಲ್ಲಾಳ್ ಅವರು ವಾರ್ಷಿಕ ವರದಿಯನ್ನು ಮಂಡಿಸಿದರು. ಕೋಶಾಧಿಕಾರಿ ಅನಂತರಾಜ್ ಜೈನ್ ಅವರು ವಾರ್ಷಿಕ ಲೆಕ್ಕಪತ್ರವನ್ನು ಸಭೆಯ ಮುಂದಿಟ್ಟರು.
ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು. 2018-2019 ನೇ ಸಾಲಿಗೆ ಆಂತರಿಕ ಲೆಕ್ಕಪರಿಶೋಧಕರನ್ನಾಗಿ ಜಿನೇಶ್ ಜಿ. ಜೈನ್ ಅವರನ್ನು ಪುನರಾಯ್ಕೆಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಸಂಘದ ಸದಸ್ಯರಿಗಾಗಿ ಭಾವಗೀತೆ, ಜಿನಭಕ್ತಿಗೀತೆ, ಶಾಂತಿಮಂತ್ರ ಪಠಣ, ಮಂಗಳಾರಚರಣ ಪಠಣ, ರಂಗೋಲಿಮೊದಲಾದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸುಪ್ರಿಯಾ ರಘುವೀರ್ ಹೆಗ್ಡೆ ಸ್ಪರ್ಧಾ ಕಾರ್ಯಕ್ರಮ ನಿರ್ವಹಿಸಿದರು. ಪ್ರತಿಭಾ ವೈದ್ಯ, ಡಾ| ತೃಪ್ತಿ ಜೈನ್, ರಾಜೇಶ್ ಶೆಟ್ಟಿ ಅವರು ಸ್ಪರ್ಧೆಗಳ ನಿರ್ಣಾಯಕರಾಗಿ ಸಹಕರಿಸಿದರು.
ಅಧ್ಯಕ್ಷ ಮುನಿರಾಜ್ ಅಜಿಲ ಅವರು ಮಾತನಾಡಿ, ಸಾಮಾಜಿಕ ಸುಧಾರಣೆಯಲ್ಲಿ ಸಂಘ-ಸಂಸ್ಥೆಗಳ ಪಾತ್ರ ಅಪಾರವಾಗಿದೆ. ಅಖೀಲ ಕರ್ನಾಟಕ ಜೈನ ಸಂಘವೂ ಕೂಡಾ ಸಾಮಾಜಿಕ ಐಕ್ಯತೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ ಎಂದು ನುಡಿದು, ನೂತನ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯನ್ನು ಅಭಿನಂದಿಸಿ ಶುಭ ಹಾರೈಸಿದರು. ಗೌರವ ಕಾರ್ಯದರ್ಶಿ ಪವನಂಜಯ ಬಲ್ಲಾಳ್ ವಂದಿಸಿದರು.