Advertisement

ಪುರಸಭೆ ಜಾಗ ಒತ್ತುವರಿ ತೆರವಿಗೆ ಆಗ್ರಹ

12:52 PM Jan 17, 2020 | Suhan S |

ಬೇಲೂರು: ಪಟ್ಟಣದ ಭಿಷ್ಠಮ್ಮನ ಕರೆ ಪಕ್ಕದಲ್ಲಿರುವ ಪುರಸಭೆ ಜಾಗದ ಒತ್ತುವರಿ ತೆರವಿಗೆ ಆಗ್ರಹಿಸಿ ಕೆರೆ ಪಕ್ಕದಲ್ಲಿರುವ ಜಾಗದ ಮುಂದೆ ನಿವಾಸಿಗಳು ಗುರುವಾರ ಪ್ರತಿಭಟನೆ ನಡೆಸಿದರು.

Advertisement

ಪ್ರತಿಭಟನಾಕಾರರನ್ನುದ್ದೇಶಿಸಿ ಎಂ.ಜಿ. ವೆಂಕಟೇಶ್‌ ಮಾತನಾಡಿ, 1983ರಲ್ಲಿ ಪುರಸಭೆಯ ಅಧೀನದಲ್ಲಿದ್ದ 3 ಎಕರೆ 4 ಗುಂಟೆ ಜಾಗವನ್ನು ಸಂತೆ ಮೈದಾನನಿರ್ಮಿಸಲು ಅಂದಿನ ಅಧ್ಯಕ್ಷರಾಗಿದ್ದ ಬಿ.ಪಿ.ನಾಗರಾಜ್‌ ಅವಕಾಶ ಮಾಡಿಕೊಟ್ಟಿದ್ದರು. ನಂತರ ಯಾರಿಗೂ ಗೊತ್ತಾಗದಂತೆ ಖಾಸಗಿ ಸಂಸ್ಥೆಯವರು ಅವಧಿ ಮೀರಿದ ಕರಾರು ಪತ್ರದ ಮೂಲಕ ಜಾಗವನ್ನು ಅತಿಕ್ರಮಣ ಮಾಡಿ ಆಜಾಗದಲ್ಲಿ ಶೆಡ್‌ ನಿರ್ಮಿಸಿ ಒಬ್ಬ ಭದ್ರತಾ ಸಿಬ್ಬಂದಿಯನ್ನು ನೇಮಿಸಿ ಆ ಜಾಗದಲ್ಲಿ ಯಾರೂ ಓಡಾಡದಂತೆ ತಡೆಯುತ್ತಿದ್ದಾರೆ. ಇದರಿಂದ ಒಳ ಚರಂಡಿ ಕಾಮಗಾರಿಗೆ ಪೈಪ್‌ ಅಳವಡಿಸಲು ತೊಂದರೆಯಾಗಿದ್ದು,ಈ ಮಾರ್ಗದಲ್ಲಿ ಸಂಚರಿಸಲು ಜಾಗಲ್ಲದೇ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆಪಾದಿಸಿದರು.

ಸರ್ಕಾರಿ ಜಾಗದ ಅತಿಕ್ರಮಣದ ಕುರಿತು ಸೂಕ್ತ ತನಿಖೆಯಾಗಬೇಕು ಎಂದು ಪುರಸಭೆ ಅಧಿಕಾರಿಗಳನ್ನು ಆಗ್ರಹಿಸಿದರು. ನಿವಾಸಿ ಮಲ್ಲಿಕ್‌ ಮಾತನಾಡಿ, ಕೆರೆಯ ಬಳಿ ಇದ್ದ ಐತಿಹಾಸಿಕ ಕುರುಹುಗಳನ್ನು ನಾಶ ಮಾಡಿ ಖಾಸಗಿ ಸಂಸ್ಥೆಯವರು ಮಾಡಿರುವ ಸರ್ಕಾರಿ ಜಾಗದ ಒತ್ತುವರಿಯನ್ನು ಕೂಡಲೇ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರಾಜು, ರಾಮಣ್ಣ, ಕುಳ್ಳಪ್ಪ, ಗಿರಿಶ್‌, ಭಾಗ್ಯಮ್ಮ, ನೀಲಾವತಿ, ವೀರಭದ್ರೇಗೌಡ,ಭರತ್‌ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next