Advertisement

ಪುರಸಭೆ ಆಸ್ತಿ ಒತ್ತುವರಿ ತೆರವಿಗೆ ಕ್ರಮ

05:35 AM Jul 04, 2020 | Lakshmi GovindaRaj |

ಕೆ.ಆರ್‌.ನಗರ: ವಿನಾಯಕ ಬಡಾವಣೆಯಲ್ಲಿ ಪುರಸಭೆ ಆಸ್ತಿ ಒತ್ತುವರಿಯನ್ನು ಪುರಸಭೆ ಅಧಿಕಾರಿಗಳು ತೆರವುಗೊಳಿಸಿದರು. ಬಡಾವಣೆಯಲ್ಲಿ ಉದ್ಯಾನವನಕ್ಕೆ ಮೀಸಲಿಟ್ಟ ಸ್ಥಳದಲ್ಲಿ ಪುರಸಭೆ ನಾಮಫ‌ಲಕ ಅಳವಡಿಸಿತ್ತು. ಆದರೆ, ಬಡಾವಣೆಯ ಮುದ್ದುಕುಮಾರ್‌ ಈ ಸ್ಥಳ ತನಗೆ  ಸೇರಿದ್ದು ಹಾಗೂ ನನ್ನ ಪರ ನ್ಯಾಯಾಲಯದಿಂದ ತೀರ್ಪು ಬಂದಿದೆ ಎಂದು ನಾಮಫ‌ಲಕ ತೆರವುಗೊಳಿಸಿ ಜಾಗ ಸಮತಟ್ಟು ಮಾಡಿಸಿದ್ದರು.

Advertisement

ಇದನ್ನು ಗಮನಿಸಿದ ವಾರ್ಡಿನ ಪುರಸಭೆ  ಸದಸ್ಯ ಪ್ರಕಾಶ್‌ ಸೇರಿದಂತೆ ಬಡಾವಣೆಯ ನಿವಾಸಿಗಳು ಪುರಸಭೆ ಅಧಿಕಾರಿಗಳಿಗೆ ದೂರು ನೀಡಿ ಅಕ್ರಮ ಒತ್ತುವರಿ ತೆರವುಗೊಳಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಸ್ಥಳಕ್ಕೆ ಆಗಮಿಸಿದ ಪುರಸಭೆ ಎಂಜಿನಿಯರ್‌ ಪುಟ್ಟಸ್ವಾಮಿ,  ಪರಿಸರಎಂಜಿನಿಯರ್‌ ರವಿಕುಮಾರ್‌ ಮತ್ತು ಸಿಬ್ಬಂದಿ ಪುರಸಭೆ ಹಾಕಿರುವ ನಾಮಫ‌ಲಕ ತೆಗೆದು ಅಕ್ರಮ ಪ್ರವೇಶ ಮಾಡಿರುವುದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡು ಜಾಗವನ್ನು ಅಳತೆ ಮಾಡಿ ಸುತ್ತಲೂ ಚರಂಡಿ ನಿರ್ಮಾಣ  ಮಾಡಿ ಕಲ್ಲುಕಂಬ ನೆಡಲು ಮುಂದಾದರು.

ಈ ಸಂದರ್ಭದಲ್ಲಿ ಅಧಿಕಾರಿಗಳ ವಿರುದ ತಿರುಗಿಬಿದ್ದ ಮುದ್ದುಕುಮಾರ್‌ ಕೋರ್ಟ್‌ನಲ್ಲಿ ಜಾಗ ನಮ್ಮದೆಂದು ತೀರ್ಪು ಬಂದಿದೆ ಎಂದು ಕಾಮಗಾರಿಗೆ ತಡೆಯೊಡ್ಡಿದರು. ಈ ವೇಳೆ ಪುರಸಭೆ  ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿ, ಸದರಿ ಸ್ಥಳದಲ್ಲಿ ಚರಂಡಿ ನೀರು ಹರಿಯುವ ರಾಜ ಕಾಲುವೆ ಇದೆ. ಜತೆಗೆ ಪಾರ್ಕ್‌ ನಿರ್ಮಾಣ, ಅಂಗನವಾಡಿ, ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಸ್ಥಳ ಮೀಸಲಿರಿಸಲಾಗಿದೆ ಎಂದು  ತಿಳಿಸಿದರು. ಈ ವೇಳೆ ಪುರಸಭಾ ಸದಸ್ಯರಾದ ಪ್ರಕಾಶ್‌, ಕೆ.ಎಲ್‌. ಜಗದೀಶ್‌ ಬಡಾವಣೆ ಮುಖಂಡರಾದ ಮಲ್ಲಪ್ಪ, ಚಂದ್ರಕಾಂತ್‌, ಸ್ವಾಮಿ, ಮಂಜುನಾಥ್‌, ಜಿಪಂ ಮಾಜಿ ಸದಸ್ಯ ಜಯರಾಮ್‌, ತಿಮ್ಮಶೆಟ್ಟಿ, ಕುಮಾರ್‌, ಕೆ.ಎಲ್‌. ಕೃಷ್ಣಯ್ಯ  ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next