Advertisement

ಶುದ್ಧ ನೀರು ಪೂರೈಸಲು ನಗರಸಭೆ “ಬದ್ಧ ‘

09:48 PM Apr 16, 2021 | Team Udayavani |

ರಾಣಿಬೆನ್ನೂರು : ಬೇಸಿಗೆಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳ ಜನರು ಕುಡಿಯುವ ನೀರಿಗಾಗಿ ತೊಂದರೆ ಅನುಭವಿಸಬಾರದೆಂಬ ಉದ್ದೇಶದಿಂದ ನಗರಸಭೆ ಕೇಂದ್ರ ಪುರಸ್ಕೃತ ಅಮೃತ ಯೋಜನೆಯಡಿ 120 ಕೋಟಿ ರೂ. ಅನುದಾನದಲ್ಲಿ ಶುದ್ಧ ಕುಡಿಯುವ ನೀರನ್ನು ದಿನದ 24 ಗಂಟೆ ಸರಬರಾಜು ಮಾಡಲು ಮುಂದಾಗಿದೆ.

Advertisement

ತಾಲೂಕಿನ ಮುದೇನೂರ ಗ್ರಾಮದ ತುಂಗಭದ್ರಾ ನದಿಗೆ ಜಾಕ್‌ವೆಲ್‌ ಅಳವಡಿಸಿ, ಪೈಪ್‌ಲೈನ್‌ ಮೂಲಕ ನೀರು ಹರಿಸಿ ಶುದ್ಧೀಕರಣಗೊಳಿಸಲು ಕ್ರಮ ಕೈಗೊಂಡಿದ್ದು, ಅದಕ್ಕಾಗಿ ರಾಣಿಬೆನ್ನೂರಿನ ಸಿದ್ದೇಶ್ವರ ನಗರದಲ್ಲಿರುವ ನೀರು ಶುದ್ಧೀಕರಣ ಘಟಕದ ಕಾಮಗಾರಿಯೂ ಪೂರ್ಣಗೊಂಡಿದೆ. ಈ ಶುದ್ಧೀಕರಿಸಿದ ನೀರನ್ನು 23,580 ಮನೆಗಳಿಗೆ ನಳ ಅಳವಡಿಸಿ ದಿನದ 24 ಗಂಟೆಯೂ ಸರಬರಾಜು ಮಾಡುವುದು ಯೋಜನೆಯ ಉದ್ದೇಶವಾಗಿದೆ. ಇದರಲ್ಲಿ ಈಗಾಗಲೇ 22,500 ಮನೆಗಳಿಗೆ ನಳಗಳನ್ನು ಅಳವಡಿಸಲಾಗಿದೆ.

ಬಾಕಿ ಉಳಿದ ಮನೆಗಳಿಗೆ ಎರಡು ತಿಂಗಳೊಳಗೆ ಅಳವಡಿಸುವ ಗುರಿ ಹೊಂದಲಾಗಿದೆ. ಆ ವೇಳೆಗೆ ನಗರದ ಎಲ್ಲ ಮನೆಗಳಿಗೆ ನೀರು ದೊರೆಯಲಿದೆ ಎನ್ನಲಾಗುತ್ತಿದೆ. ಇದಕ್ಕೂ ಮುನ್ನ ತಾಲೂಕಿನ ಮುದೇನೂರ ಗ್ರಾಮದ ತುಂಗಭದ್ರಾ ನದಿಯಿಂದ ಜಾಕ್‌ವೆಲ್‌ನಿಂದ ರಾಣಿಬೆನ್ನೂರ ನಗರಕ್ಕೆ ಪೈಪ್‌ಲೈನ್‌ ಮೂಲಕ ನೀರು ಹರಿಸಿ ಇಲ್ಲಿನ ಸಿದ್ದೇಶ್ವರ ನಗರದಲ್ಲಿ ಶುದ್ಧೀಕರಿಸಿದ ನಂತರವೇ ಪೂರೈಸಲಾಗುತ್ತಿತ್ತು. ಪ್ರಸ್ತುತ ಹಳೇ ಶುದ್ಧೀಕರಣ ಘಟಕ ಸ್ಥಗಿತಗೊಳಿಸಿ ನೂತನ ಶುದ್ಧೀಕರಣ ಘಟಕದಿಂದ ನೀರು ಪೂರೈಸಲಾಗುತ್ತಿದೆ. ನಗರವನ್ನು 9 ವಲಯಗಳಾಗಿ ವಿಂಗಡಿಸಿ ಪ್ರತಿ ವಲಯಕ್ಕೆ ಹಂತ ಹಂತವಾಗಿ ಪ್ರಾಯೋಗಿಕವಾಗಿ ಸರಬರಾಜು ಮಾಡುವ ಮೂಲಕ 9 ವಲಯಗಳು ಪೂರ್ಣಗೊಳಿಸಲಾಗಿದೆ. ಇನ್ನೆರಡು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ಸಮಯದಲ್ಲಿ ನೀರು ಸರಬರಾಜಿನಲ್ಲಿ ಅಡಚಣೆ ಕಂಡು ಬಂದ ಬಡಾವಣೆಗಳಲ್ಲಿ ನಗರಸಭೆ ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತದೆ.

ಈ ಸಂಬಂಧ ಸಾರ್ವಜನಿಕರು-ಅಧಿ ಕಾರಿಗಳ ಮಧ್ಯೆ ಗಲಾಟೆಯಾಗಿರುವುದೂ ಉಂಟು. ಅಲ್ಲದೇ ನಗರಸಭೆ ಮುಂದೆ ಖಾಲಿ ಕೊಡ ಇಟ್ಟು ಮಹಿಳೆಯರು ಪ್ರತಿಭಟನೆ ನಡೆಸಿರುವ ಉದಾಹರಣೆಗಳೂ ಇವೆ. ಬಹುಗ್ರಾಮ ಯೋಜನೆ: ರಾಣಿಬೆನ್ನೂರ ತಾಲೂಕು 108 ಹಳ್ಳಿಗಳನ್ನು ಹೊಂದಿದೆ. ರಾಣಿಬೆನ್ನೂರು ತಾಲೂಕು ಜಿಲ್ಲೆಯಲ್ಲಿಯೇ ಅತೀ ದೊಡ್ಡ ತಾಲೂಕಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next