Advertisement
ಮಾಜಿ ಸಿಎಂ ಯಡಿಯೂರಪ್ಪ ಅವರ ಬಜೆಟ್‌ನಲ್ಲಿ 5,000 ಕೋ.ರೂ. ನಗರದ ಯುಜಿಡಿ ವ್ಯವಸ್ಥೆಗೆ ಮೀಸಲಿಟ್ಟಿದ್ದರು. ಇದರಲ್ಲಿ ಯುಜಿಡಿಯನ್ನು ಹೊಸದಾಗಿ ನಿರ್ಮಿಸುವ ಹಾಗೂ ಮೇಲ್ದರ್ಜೆಗೇರಿಸಲು ಮೊದಲ ಆದ್ಯತೆ ನೀಡ ಲಾ ಗಿದೆ. ಪ್ರಸ್ತುತ ಸಿಎಂ ಸ್ಥಾನದಲ್ಲಿರುವ ಬಸವರಾಜ್ ಬೊಮ್ಮಾಯಿ ಅವರಿಗೆ ಜಿಲ್ಲೆಯ ಸಮಸ್ಯೆ ಹಾಗೂ ಬೇಡಿಕೆಗಳ ಬಗ್ಗೆ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಒತ್ತಡ ಹಾಕಿದರೆ ಯುಜಿಡಿಗೆ ಅಗತ್ಯವಿರುವ ಅನುದಾನ ಮಂಜೂರಾಗುವ ಸಾಧ್ಯತೆಗಳಿವೆ.
Related Articles
Advertisement
ಶೇ. 17ರಷ್ಟು ಯುಜಿಡಿ :
ನಗರಸಭೆ ವ್ಯಾಪ್ತಿಯಲ್ಲಿ ಕೇವಲ ಶೇ. 17ರಷ್ಟು ಯುಜಿಡಿ (ಒಳಚರಂಡಿ) ವ್ಯವಸ್ಥೆ ಇದೆ. ಅದೂ ಉಡುಪಿ ಮುಖ್ಯ ರಸ್ತೆಯಲ್ಲಿ ಮಾತ್ರ. ನಗರ ಬೆಳೆಯುತ್ತಿದ್ದಂತೆ ಕೊಳಚೆ ನೀರು ನಿರ್ವಹಣೆ ಅತೀ ದೊಡ್ಡ ಸಮಸ್ಯೆಯಾಗುತ್ತಿದೆ. ಸೆಪ್ಟಿಕ್ ಟ್ಯಾಂಕ್ ಮಾಡಲಾಗಿದ್ದರೂ ಮಣ್ಣಿನ ಗುಣಕ್ಕನುಗುಣವಾಗಿ ಪೂರ್ಣವಾಗಿ ನೀರು ಇಂಗುತ್ತಿಲ್ಲ. ಪ್ರಸ್ತುತ ಹೆಚ್ಚುವರಿ ಕೊಳಚೆ ನೀರನ್ನು ಜನರು ಮಳೆ ನೀರಿನ ಚರಂಡಿಗೆ ಬಿಡುತ್ತಿದ್ದು, ಇದರಿಂದ ಕೊಳಚೆ ನೀರು ಮೇಲ್ಮೆ„ಯಲ್ಲಿ ಇಂಗಿ ಸಮೀಪದ ಜಲ ಮೂಲಗಳು ಕಲುಷಿತವಾಗಿದೆ.
ಸ್ವಾತಂತ್ರ್ಯ ಪೂರ್ವದ ಇತಿಹಾಸ :
ಉಡುಪಿ ನಗರಸಭೆಗೆ ಸ್ವಾತಂತ್ರ್ಯ ಪೂರ್ವದ ಇತಿಹಾಸ ವಿದೆ. 1935ರ ಎ.1ರಂದು ಅಂದಿನ ಮದ್ರಾಸ್ ಸರಕಾರವು ಪುರಸಭೆಯಾಗಿ ಘೋಷಣೆ ಮಾಡಿತ್ತು. ಆ ಸಂದರ್ಭದಲ್ಲಿ 7 ಹಳ್ಳಿಗಳು ಸೇರಿದ್ದವು. 1969ರಲ್ಲಿ ಪುರಸಭೆಯಾಗಿ ಘೋಷಣೆಯಾಗಿತ್ತು. 1995ರಲ್ಲಿ ಮತ್ತೆ ನಗರಸಭೆಯನ್ನಾಗಿ ಘೋಷಣೆ ಮಾಡಿದ್ದು, ಈ ಸಂದರ್ಭದಲ್ಲಿ 35 ವಾರ್ಡ್‌ಗಳನ್ನು ಒಳಗೊಂಡಿದ್ದು, 17,251 ಜನಸಂಖ್ಯೆ ಇತ್ತು. 1997ರಲ್ಲಿ ನಗರಸಭೆಯು ಜಿಲ್ಲೆಯ ಕೇಂದ್ರ ನಗರವಾಗಿ ಗುರುತಿಸಿಕೊಂಡಿತ್ತು.
2 ಹಂತದಲ್ಲಿ ಅಭಿವೃದ್ಧಿ : 1988 ಹಾಗೂ 2010ರಲ್ಲಿ ಎರಡು ಹಂತದಲ್ಲಿ ಯುಜಿಡಿ ಅಭಿವೃದ್ಧಿಪಡಿಸಲಾಗಿತ್ತು. ಪ್ರಸ್ತುತ ನಗರದಲ್ಲಿ 93 ಕಿ.ಮೀ. ವ್ಯಾಪ್ತಿಯಲ್ಲಿ ಯುಜಿಡಿ ವ್ಯವಸ್ಥೆ ಹರಡಿಕೊಂಡಿದೆ. ಪೂರ್ಣ ಪ್ರಮಾಣದಲ್ಲಿ 8 ವಾರ್ಡ್‌ಗಳು ಹಾಗೂ 7 ವಾರ್ಡ್‌ಗಳಿಗೆ ಭಾಗಶಃ ಯುಜಿಡಿ ವ್ಯವಸ್ಥೆ ಕಲ್ಪಿಸಲಾಗಿದೆ. 2,800 ಮ್ಯಾನ್‌ಹೋಲ್,
4 ವೆಟ್‌ವೆಲ್ ಹಾಗೂ ಒಂದು 12ಎಂಎಲ್‌ಡಿ ಎಸ್‌ಟಿಪಿ ಘಟಕವನ್ನು ಹೊಂದಿದೆ ಎಂದು ಮಾಹಿತಿ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಇತ್ತೀಚೆಗೆ ಸರ್ವೇ ವರದಿಯಲ್ಲಿ ಉಲ್ಲೇಖೀಸಿದೆ.
ನಗರದೊಳಗಿನ ಯುಜಿಡಿ ವ್ಯವಸ್ಥೆಯನ್ನು ಉನ್ನತೀಕರಣಗೊಳಿಸಲು ಈಗಾಗಲೇ 240 ಕೋ.ರೂ. ವೆಚ್ಚದ ಡಿಪಿಆರ್ ಸಿದ್ಧಗೊಂಡಿದೆ. ಮಂಡಳಿಯಲ್ಲಿ ಅನುಮೋದನೆಗಾಗಿ ಕಾಯುತ್ತಿದ್ದೇವೆ. – ಕೆ.ರಘುಪತಿ ಭಟ್ ಶಾಸಕರು
-ತೃಪ್ತಿ ಕುಮ್ರಗೋಡು