Advertisement

ಪಕ್ಷಾಂತರ ನಿಯಮದಂತೆ ಬಿಜೆಪಿ ನಗರಸಭಾ ಸದಸ್ಯೆ ಸುಧಾ ಸೋಮನಾಥ್ ಸದಸ್ಯತ್ವ ರದ್ದು

07:20 PM May 11, 2022 | Team Udayavani |

ಗಂಗಾವತಿ: ನಗರಸಭೆಯ 26 ನೇ ವಾರ್ಡಿನ ಸದಸ್ಯೆ ಸುಧಾ ಸೋಮನಾಥ್ ಸದಸ್ಯತ್ವವನ್ನು ರದ್ದುಗೊಳಿಸಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳಕರ್ ಆದೇಶ ಮಾಡಿದ್ದಾರೆ.

Advertisement

ಭಾರತೀಯ ಜನತಾ ಪಾರ್ಟಿಯಿಂದ ಗೆದ್ದು ನಗರಸಭೆ ಸದಸ್ಯೆಯಾಗಿದ್ದ  ಸುಧಾ ಸೋಮನಾಥ್ ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಗೈರಾಗಿದ್ದರು. ಇದರ ವಿರುದ್ಧ ಭಾರತೀಯ ಜನತಾ ಪಾರ್ಟಿಯವರು ಜಿಲ್ಲಾಧಿಕಾರಿಗಳಿಗೆ ಸುಧಾ ಸೋಮನಾಥ್ ಇವರ ಸದಸ್ಯತ್ವ ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿಗಳು ಸುಧೀರ್ಘ ವಿಚಾರಣೆ ನಡೆಸಿ ಎರಡೂ ಕಡೆಯವರ ವಾದವನ್ನು ಆಲಿಸಿ ಸಾಕ್ಷ್ಯಗಳನ್ನು ಪರಿಶೀಲಿಸಿ ಮೇ 10 ರಂದು ತೀರ್ಪು ನೀಡಿ ಸುಧಾ ಅವರ ನಗರ ಸಭೆಯ ಸದಸ್ಯತ್ವವನ್ನು ಅನೂರ್ಜಿತಗೊಳಿಸಿ ಆದೇಶ ಮಾಡಿದ್ದಾರೆ .

ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಭಾರತೀಯ ಜನತಾ ಪಾರ್ಟಿಯಿಂದ  ಜಯಶ್ರೀ ಸಿದ್ದಪುರ್ ಹಾಗೂ ಕಾಂಗ್ರೆಸ್ ಪಕ್ಷದಿಂದ ಮಾಲಾಶ್ರೀ ಸ್ಪರ್ಧೆ ಮಾಡಿದ್ದರು. ಚುನಾವಣೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಭಾರತೀಯ ಜನತಾ ಪಾರ್ಟಿಯಿಂದ ಸುಧಾ ಅವರಿಗೆ ವಿಪ್ ಜಾರಿ ಮಾಡಲಾಗಿತ್ತು. ವಿಪ್ ನ್ನು  ಸ್ವೀಕರಿಸದೆ ಚುನಾವಣೆಯಲ್ಲಿ ಗೈರಾಗುವ ಮೂಲಕ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಸುಧಾ ಅವರನ್ನು ಸದಸ್ಯತ್ವ ರದ್ದು ಮಾಡುವಂತೆ ಭಾರತೀಯ ಜನತಾ ಪಾರ್ಟಿ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿತ್ತು.

ಇದೀಗ ವಿಚಾರಣೆ ನಡೆದು ಜಿಲ್ಲಾಧಿಕಾರಿಗಳು ಸುಧಾ ಅವರ ಸದಸ್ಯತ್ವವನ್ನು ರದ್ದು ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next