Advertisement
ರಾಜ್ಯಾದ್ಯಂತ ಸ್ಥಳೀಯ ಆಡಳಿತಗಳು ಈಗಾಗಲೇ ಹೆಚ್ಚಿನ ಸೇವೆಗಳನ್ನು ಆನ್‌ಲೈನ್ ಮೂಲಕ ನೀಡಲು ಮುಂದಡಿ ಇಟ್ಟಿದ್ದು ಅದರ ಭಾಗವಾಗಿ ಪುತ್ತೂರು ನಗರಸಭೆಯು ಹತ್ತಾರು ಸೌಲಭ್ಯಗಳನ್ನು ಆನ್‌ಲೈನ್ ಮೂಲಕ ನೀಡಲು ನಿರ್ಧರಿಸಿದೆ.
ಸಾರ್ವಜನಿಕರಿಗೆ ದೂರುಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ಜನಹಿತ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದೆ. ಇದರೊಂದಿಗೆ ಫೇಸುºಕ್, ಟ್ವಿಟರ್, ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಮ್, ವೆಬ್ ಸೈಟ್, ಸ್ವತ್ಛತಾ ಆ್ಯಪ್, ಜನಹಿತ ಮೊಬೈಲ್ ಆ್ಯಪ್ ಹಾಗೂ ದೂರವಾಣಿ ಮುಖಾಂತರ ದೂರುಗಳನ್ನು ಸಲ್ಲಿಸಿ ದೂರಿನ ಸ್ಥಿತಿಯನ್ನು ಪರಿಶೀಲಿಸಲು ಅವಕಾಶ ನೀಡಲಾಗಿದೆ. ಹೀಗಾಗಿ ಜನರು ಸಮಸ್ಯೆಗಳನ್ನು ಹೊತ್ತು ನಗರಸಭೆಗೆ ಬರುವ ಬದಲು ಕುಳಿತಲ್ಲಿಯೇ ಆಡಳಿತದ ಗಮನ ಸೆಳೆಯಲು ಅವಕಾಶ ನೀಡಲಾಗಿದೆ. ಉದ್ದಿಮೆ ಪರವಾನಿಗೆ ಸ್ವಯಂ ನವೀಕರಣ
ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಉದ್ದಿಮೆಗಳ ಪರವಾನಿಗೆಗಳ ನವೀಕರಣವನ್ನು ಸರಳಗೊಳಿಸಲು ಎಲ್ಲ ಉದ್ದಿಮೆದಾರರಿಗೆ ಪರವಾನಿಗೆಯನ್ನು ಪಡೆಯಲು ಸುಲಭವಾಗುವಂತೆ ವ್ಯಾಪಾರ ತಂತ್ರಾಂಶದಲ್ಲಿ ಪರವಾನಿಗೆಯ ಸ್ವಯಂ ನವೀಕರಣವನ್ನು ಜಾರಿಗೆ ತರಲಾಗಿದೆ. ಇದರ ಅನ್ವಯ ಪರವಾನಿಗೆಗೆ ಆನ್‌ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಿ ಆನ್‌ಲೈನ್ ಮುಖಾಂತರ ಶುಲ್ಕವನ್ನು ಪಾವತಿಸಿ, ಆನ್‌ಲೈನ್‌ನಲ್ಲಿಯೇ ಪರವಾನಿಗೆ ಪ್ರತಿಯನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹೊಸದಾಗಿ ಪರವಾನಿಗೆ ಶುಲ್ಕಕ್ಕೆ ಅರ್ಜಿ ಸಲ್ಲಿಸುವವರು ಮಾತ್ರ ಕಚೇರಿಗೆ ಬಂದು ನೋಂದಣಿ ಮಾಡಿಕೊಂಡರೆ ಸಾಕು. ಒಂದು ವರ್ಷದ ಅನಂತರ ನವೀಕರಣದ ಸಂದರ್ಭದಲ್ಲಿ ಆನ್‌ಲೈನ್ ಮೂಲಕ ಸ್ವಯಂ ನವೀಕರಣ ಮಾಡಿಕೊಳ್ಳಲು ಇಲ್ಲಿ ಅವಕಾಶ ಇದೆ.
Related Articles
ಸಾರ್ವಜನಿಕರಿಗೆ ತೆರಿಗೆ ಮತ್ತು ಇತರ ಶುಲ್ಕಗಳನ್ನು ಪಾವತಿಸಲು ಅನೂಕೂಲವಾಗುವಂತೆ ಇ-ಸ್ವೀಕೃತಿ ಎಂಬ ಶೀರ್ಷಿಕೆಯಡಿಯಲ್ಲಿ ತಂತ್ರಾಂಶವನ್ನು ಗಣಕೀಕರ ಣಗೊ ಳಿಸಲಾಗಿದೆ. ಸಾರ್ವ ಜನಿಕರು ಆನ್‌ಲೈನ್ ಮುಖಾಂತರ ತೆರಿಗೆಯನ್ನು ಪಾವತಿಸಲು ತಂತ್ರಾಂಶವನ್ನು ಉಪಯೋಗಿಸಬಹುದಾಗಿದೆ. ರಾಜ್ಯ ಸರಕಾರವು ನಿರ್ಮಾಣ್- 2 ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು ಕಟ್ಟಡ ಪರವಾನಗಿಯನ್ನು ಆನ್‌ಲೈನ್ ಮುಖಾಂತರ ಪಡೆಯಬಹುದು.
Advertisement
ಆನ್‌ಲೈನ್‌ನಲ್ಲಿಯೇ ಅನುಮತಿನಗರ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತು, ಬ್ಯಾನರ್ ಹಾಗೂ ಇತರ ಪ್ರಚಾರವನ್ನು ತಡೆಯಲು ಹಾಗೂ ಆನ್‌ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಿ ಆನ್‌ಲೈನಲ್ಲಿಯೇ ಅನುಮತಿಯನ್ನು ಪಡೆಯಲು ಅವಕಾಶ ನೀಡಲಾಗಿದೆ. ಇದರಿಂದ ನಗರದಲ್ಲಿ ಅನುಮತಿ ರಹಿತವಾಗಿ ಪ್ರಚಾರ ಸಾಮಗ್ರಿ ಅಳವಡಿಕೆ ನಿಯಂತ್ರಣ ಸಾಧ್ಯವಾಗಿ ನಗರಸಭೆಗೆ ಆದಾಯ ದೊರೆಯಲಿದೆ. ಶೀಘ್ರ ಕೈಪಿಡಿ ಬಿಡುಗಡೆ
ಎಲ್ಲ ಪರವಾನಿಗೆಗಳನ್ನು ಡಿಜಿಟಲ್ ಸಹಿ ಮೂಲಕ ಸಾರ್ವಜನಿಕರಿಗೆ ನೀಡಲಾಗುತ್ತಿದೆ. ಸಾರ್ವಜನಿಕರಿಗೆ ತಂತ್ರಾಂಶವನ್ನು ಉಪಯೋಗಿಸಿ ವಿವಿಧ ಸೇವೆಗಳ ಮಾಹಿತಿಯನ್ನು ನಗರಸಭೆ ಕಾರ್ಯಾಲಯದ ವೆಬ್‌ಸೈಟ್ ಮುಖಾಂತರ ನೀಡಲಾಗುವುದು ಹಾಗೂ ಸಾರ್ವಜನಿಕರ ಉಪಯೋಗಕ್ಕೆ ಮಾಡಲಾಗಿರುವ ತಂತ್ರಾಂಶಗಳ ಕೈಪಿಡಿಯನ್ನು ಮುಂದಿನ ದಿನಗಳಲ್ಲಿ ಬಿಡುಗಡೆಗೊಳಿಸಲಾಗುವುದು.
– ಜೀವಂಧರ್ ಜೈನ್, ನಗರಸಭೆ ಅಧ್ಯಕ್ಷ.