Advertisement

ಬೆಳಗಾವಿ ಪಾಲಿಕೆಗೆ ಬಿರುಸಿನಿಂದ ಮತದಾನ ಆರಂಭ

09:58 AM Sep 03, 2021 | Team Udayavani |

ಬೆಳಗಾವಿ: ಇದೇ ಮೊದಲ ಬಾರಿಗೆ ಪಕ್ಷದ ಚಿಹ್ನೆ ಮೇಲೆ ನಡೆದಿರುವ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯ ಮತದಾನ ಶುಕ್ರವಾರ ಬೆಳಗ್ಗೆಯಿಂದ ಆರಂಭಗೊಂಡಿದ್ದು, ನಗರದ ಜನತೆ ಉತ್ಸಾಹದಿಂದ ಮತ ಚಲಾವಣೆಗೆ ಬರುತ್ತಿದ್ದಾರೆ.

Advertisement

ಶುಕ್ರವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಶುರುವಾಗಿದ್ದು, ಮತದಾರರು ತಮ್ಮ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸುತ್ತಿದ್ದಾರೆ. 58 ವಾರ್ಡುಗಳಲ್ಲಿ ಬಿರುಸಿನಿಂದ ಮತದಾನ ನಡೆದಿದೆ.

ಇದನ್ನೂ ಓದಿ:ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ: 533 ಮತಗಟ್ಟೆಗಳಲ್ಲಿ ಮತದಾನ ಶುರು

ಮತಗಟ್ಟೆಗಳ‌ ಎದುರು ಜನರು ಸಾಲಾಗಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.  ಎಲ್ಲ ಕಡೆಗೂ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಹರಸಾಹಸ ಪಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next