Advertisement

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿ

11:36 AM Oct 09, 2021 | Team Udayavani |

ದೊಡ್ಡಬಳ್ಳಾಪುರ: ನಗರಸಭೆ ಅಧ್ಯಕ್ಷ ,ಉಪಾಧ್ಯಕ್ಷ ಸ್ಥಾನದ ಮೊದಲ ಅವಧಿಗೆ ಅ.26ರಂದು ಚುನಾವಣೆ ನಿಗದಿಪಡಿಸಲಾಗಿದ್ದು, ನಗರಸಭೆಯ ಚುನಾಯಿತ ಸದಸ್ಯರು, ಕ್ಷೇತ್ರದ ಶಾಸಕರು ಹಾಗೂ ಸಂಸದರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕೆಂದು ಉಪವಿಭಾಗಾಧಿಕಾರಿ ಅರುಳ್‌ ಕುಮಾರ್‌ ಸೂಚನೆ ನೀಡಿದ್ದಾರೆ.

Advertisement

ಅ.26ರಂದು ನಗರಸಭೆ ಕಾರ್ಯಾಲ ಯದಲ್ಲಿ ಮಧ್ಯಾಹ್ನ 1ಗಂಟೆಗೆ ಚುನಾವಣೆ ನಡೆಯಲಿದೆ. ಅಂದು 9ಗಂಟೆಗೆ ನಾಮಪತ್ರ ಸ್ವೀಕರಿಸಲಾಗುವುದು. ನಂತರ ಪ್ರಕ್ರಿಯೆಗಳು ಪೂರ್ಣಗೊಂಡು ಚುನಾವಣೆ ನಡೆಯಲಿದೆ. ಮೊದಲ 24 ತಿಂಗಳ ಅವಧಿಗೆ ನಗರಸಭೆಯ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಮಹಿಳೆಗೆ, ಉಪಾದ್ಯಕ್ಷ ಸ್ಥಾನ ಸಾಮಾನ್ಯ ಮಹಿಳಾ ಅಭ್ಯರ್ಥಿಗೆ ಮೀಸಲಾಗಿದೆ. ಇನ್ನೂ ಆಗದ ಮೈತ್ರಿ: ಚುನಾವಣೆಯಲ್ಲಿ ನಗರಸಭೆಯ ಒಟ್ಟು 31 ಸ್ಥಾನಗಳಲ್ಲಿ ಬಿಜೆಪಿ-12, ಕಾಂಗ್ರೆಸ್‌-9, ಜೆಡಿಎಸ್‌ -7 ಹಾಗೂ ಪಕ್ಷೇತರ -3 ಅಭ್ಯರ್ಥಿಗಳು ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ:-  ಪಂಚಭೂತಗಳ ಆರಾಧನೆಯಿಂದ ಭಗವಂತನ ಸಾನ್ನಿಧ್ಯ

ಯಾವ ಪಕ್ಷಕ್ಕೂ ಸಹ ಸ್ಪಷ್ಟ ಬಹುಮತ ಬಾರದ ಹಿನ್ನೆಲೆಯಲ್ಲಿ ನಗರಸಭೆ ಅಧ್ಯಕ್ಷ ಸ್ಥಾನ ಯಾವ ಪಕ್ಷಕ್ಕೆ ಒಲಿಯಲಿದೆ ಎನ್ನುವ ಕುತೂಹಲ ಎಲ್ಲರಲ್ಲಿ ಕಾಡುತ್ತಿದೆ. ನಗರಸಭೆಯಲ್ಲಿ 12 ಜನ ಬಿಜೆಪಿ ಸದಸ್ಯರು, 3 ಜನ ಪಕ್ಷೇತರ ಸದಸ್ಯರು, ಸಂಸತ್‌ ಸದಸ್ಯರ ಒಂದು ಮತ ಸೇರಿದರೆ 16 ಮತಗಳಾಗಲಿವೆ. ಆದರೆ ಕಾಂಗ್ರೆಸ್‌, ಜೆಡಿಎಸ್‌ ಹೊಂದಾಣಿಕೆ ಮಾಡಿಕೊಂಡರೆ ಶಾಸಕರ ಒಂದು ಮತವು ಸೇರಿದಂತೆ 17 ಆಗಲಿದೆ. ಆದರೆ, ಯಾವ ಪಕ್ಷ ಯಾರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಿದೆ ಎನ್ನುವುದು ಇನ್ನೂ ಅಂತಿಮವಾಗಿಲ್ಲ.  ಈಗ ಚುನಾವಣಾ ದಿನಾಂಕ ಪ್ರಕಟವಾಗಿರುವುದರಿಂದ ಮೈತ್ರಿ ಕುರಿತಾಗಿ ರಾಜಕೀಯ ಚಟುವಟಿಕೆಗಳು ಚುರುಕುಗೊಳ್ಳಲಿವೆ.

Advertisement

Udayavani is now on Telegram. Click here to join our channel and stay updated with the latest news.

Next