ಬೀದರ್: ಬೀದರ್ ನಗರಸಭೆಯ 32 ವಾರ್ಡ ಗಳಿಗೆ ಚುನಾವಣೆ ಹಿನ್ನೆಲೆ ಮಂಗಳವಾರ ಮತದಾನ ನಡೆಯುತ್ತಿದ್ದು, ಬೆಳಿಗ್ಗೆ 7 ರಿಂದ ಮಧ್ಯಾಹ್ನ 1ರವರೆಗೆ ಶೇ. 30.02 ರಷ್ಟು ಮತದಾನವಾಗಿದೆ. ಒಟ್ಟು 1,53,325 ಮತದಾರರಲ್ಲಿ 46,269 ಜನ ಮತದಾನ ಮಾಡಿದ್ದಾರೆ.
ಬೀದರ್ ನಗರಸಭೆಯ 26, 28 ಮತ್ತು 32 ವಾರ್ಡಗಳನ್ನು ಹೊರತುಪಡಿಸಿ ಇನ್ನುಳಿದ 32 ವಾರ್ಡ್ ಗಳಿಗೆ ಮತದಾನ ನಡೆಯುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ಕೋವಿಡ್ ಕಿಟ್ ನೀಡಲಾಗಿದೆ ಮತ್ತು ಎಲ್ಲಾ ಮತಗಟ್ಟೆಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಮಾಡಲಾಗಿದೆ. ಮತದಾರರು ಮಾಸ್ಕ್ ಧರಿಸಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
ಇದನ್ನೂ ಓದಿ:ಮರೆಯಾದ ‘ಕೋಟಿ’ : ನಿರ್ಮಾಪಕ ರಾಮು ಹುಟ್ಟೂರಲ್ಲೇ ಅಂತ್ಯ ಸಂಸ್ಕಾರ
ಚುನಾವಣೆಯಲ್ಲಿ ಒಟ್ಟು 176 ನಾಮಪತ್ರಗಳು ಸಲ್ಲಿಕೆಯಾಗಿ ಈ ಪೈಕಿ 7 ನಾಮಪತ್ರಗಳು ತಿರಸ್ಕೃತವಾಗಿದ್ದವು. ಬಳಿಕ 12 ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆದು ಕೊಂಡಿದ್ದರಿಂದ ಅಂತಿಮವಾಗಿ ಒಟ್ಟು 157 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಚುನಾವಣೆಯ ಬಂದೋಬಸ್ತ್ ಕರ್ತವ್ಯಕ್ಕೆ ಅಗತ್ಯ ಪ್ರಮಾಣದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.