ಕೊಳ್ಳೇಗಾಲ: ನಗರಸಭೆಯಲ್ಲಿ ಕೋಟ್ಯಂತರ ರೂ. ಅವ್ಯವ ಹಾರ ನಡೆದಿದ್ದು, ಸದಸ್ಯರ ಒತ್ತಾ ಯದ ಮೇರೆಗೆ ಭ್ರಷ್ಟಾ ಚಾರ ನಿಗ್ರಹ ದಳ (ಎಸಿಬಿ) ತನಿಖೆಗೆ ವಹಿಸಲಾಗುವುದು ಎಂದು ನಗರಸಭೆ ಅಧ್ಯಕ್ಷ ಆರ್.ಸುಶೀಲಾ ಪ್ರಕಟಿಸಿದರು.
ನಗರಸಭೆಯಲ್ಲಿ ಅಧ್ಯಕ್ಷೆ ಸುಶೀಲ ನೇತೃತ್ವದಲ್ಲಿ ನಡೆದ ಸಮಾನ್ಯ ಸಭೆಯಲ್ಲಿ ಸದಸ್ಯರ ಒತ್ತಾಯದ ಮೇರೆಗೆ ಈ ಅವ್ಯವಹಾರವನ್ನು ಎಸಿಬಿಗೆ ವಹಿಸುವುದಾಗಿ ಘೋಷಿಸುತ್ತಿದ್ದಂತೆ ಸದಸ್ಯರು ಪಕ್ಷಾತೀತವಾಗಿ ಬೆಂಬಲ ಸೂಚಿಸಿದರು.
ನಗರಸಭಾ ಸದಸ್ಯ ಶಾಂತರಾಜು, ಎ.ಪಿ. ಶಂಕರ್ ಮತ್ತಿತರರು ಮಾತನಾಡಿ, ಶುದ್ಧ ಕುಡಿಯುವ ನೀರಿನಘಟಕ, ಕೊಳವೆ ಬಾವಿ, ಸ್ವತ್ಛತೆ ಇನ್ನಿತರಸೌಲಭ್ಯಗಳ ವಿಷಯದಲ್ಲಿ ಸಾಕಷ್ಟು ವಂಚನೆನಡೆದಿದ್ದು, ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದರು.
ಕುಡಿಯುವ ನೀರು: ಸಹಾಯಕ ಕಾರ್ಯ ಪಾಲಕ ಅಭಿಯಂತರರಾದ ಮಹಮ್ಮದ್‌ಅಲ್ತಾಪ್, ಸಹಾಯಕ ಇಂಜಿನಿಯರ್ ಸಿದ್ದಪ್ಪ ಅವರು ನಗರದಲ್ಲಿ ಕುಡಿಯುವ ನೀರು ಪೂರೈಸುವಲ್ಲಿ ಸಂಪೂರ್ಣ ವಿಫಲರಾಗಿದ್ದು, ಕೂಡಲೇ ಇವರನ್ನು ವರ್ಗಾಯಿಸಬೇಕು.ನೀರು ಸರಬರಾಜಿನಲ್ಲೂ ಅವ್ಯವಹಾರನಡೆದಿದ್ದು, ತನಿಖೆ ಮುಗಿಯುವವರೆಗೆಅಧಿಕಾರಿಗಳಿಗೆ ಸಂಬಳ ನೀಡಬಾರದೆಂದುಸದಸ್ಯರು ಆಗ್ರಹಿಸಿದ ಹಿನ್ನೆಲೆಯಲ್ಲಿಅಧ್ಯಕ್ಷರು, ಈ ಬಗ್ಗೆ ಕ್ರಮವಹಿಸುವುದಾಗಿತಿಳಿಸಿದರು.
ಪೌರಾಯುಕ್ತರಿಗೆ ಸೂಚನೆ: ಪಟ್ಟಣದ 31 ವಾರ್ಡ್‌ಗಳಿಗೆ ಅಭಿವೃದ್ಧಿ ಕೆಲಸಗಳಿಗಾಗಿ ನಿಯೋಜಿಸಿರುವ ಎಲ್ಲಾ ಸಿಬ್ಬಂದಿಯನ್ನು ಪ್ರತಿದಿನ ಅಥವಾವಾರಕ್ಕೆ ಒಂದು ಬಾರಿ ಬದಲಾಯಿಸಿ ನಿಯಂತ್ರಣದಲ್ಲಿ ಇಟ್ಟುಕೊಳ್ಳುವಂತೆ ಅಧ್ಯಕ್ಷರು ಪೌರಾಯುಕ್ತರು ವಿಜಯ್‌ಗೆ ಸೂಚಿಸಿದರು. ಸಭೆಯಲ್ಲಿ ವ್ಯವಸ್ಥಾಪಕನಿಂಗರಾಜು, ನಗರಸಭಾ ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.
300 ರೂ.ಮೌಲ್ಯದ ಪಿಪಿಇ ಕಿಟ್ 2,400 ರೂ.ಗೆ ಖರೀದಿ : ಕೊರೊನಾ ಮೊದಲ ಹಾಗೂ 2ನೇ ಅಲೆ ವೇಳೆ ಪಿಪಿಇ ಕಿಟ್‌ಗಳನ್ನು ಖರೀದಿಸಲಾಗಿದೆ. ಕೇವಲ 300 ರೂ. ಸಿಗುವ ಪಿಪಿಇ ಕಿಟ್‌ಗಳನ್ನು 2,400 ರೂ. ಎಂದು ನಮೂದಿಸಿ ಸುಮಾರು 96,000 ರೂ ಖರ್ಚು ಮಾಡಿರುವ ಬಗ್ಗೆ ಅಧಿಕಾರಿಗಳು ಲೆಕ್ಕಪತ್ರ ತೋರುತ್ತಿದ್ದು, ಖರೀದಿಯಲ್ಲಿ ಸಾಕಷ್ಟು ಅಕ್ರಮ ನಡೆದಿದೆ. ಈ ಬಗ್ಗೆಯೂ ತನಿಖೆ ನಡೆಸಬೇಕು ಎಂದು ನಗರಸಭೆ ಸದಸ್ಯರು ಆಗ್ರಹಿಸಿದರು.