Advertisement
ಕಾಂಗ್ರೆಸ್‌ಗೆ 27 ವಾರ್ಡ್‌ಗಳಲ್ಲಿ ಮೂರು ನಾಲ್ಕು ಮಂದಿ ಆಕಾಂಕ್ಷಿಗಳಿರುವುದರಿಂದ ಸ್ಥಳೀಯ ಶಾಸಕರಿಗೆ ಯಾರಿಗೆ ಟಿಕೆಟ್ ನೀಡಬೇಕೆಂಬ ತಲೆ ಬಿಸಿ ಶುರುವಾಗಿದೆ. ಮೀಸಲಾತಿ ಬದಲಾಗಿರುವುದರಿಂದ ಹಾಲಿ ಸದಸ್ಯರು ಹೊಸ ವಾರ್ಡ್‌ಗಳತ್ತ ಮುಖ ಮಾಡಿದ್ದು, ತಮಗೆ ಅನುಕೂಲವಾಗಿರುವ ವಾರ್ಡ್‌ಗೇ ಟಿಕೆಟ್ ನೀಡಬೇಕೆಂದು ಮುಖಂಡರಲ್ಲಿ ಒತ್ತಡ ಹೇರುತ್ತಿದ್ದು, ಟಿಕೆಟ್ ಹಂಚಿಕೆ ಗೊಂದಲವಾಗಿದೆ.
Related Articles
Advertisement
ಪ್ರಚಾರ ಶುರು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡಿದ ಜೆಡಿಎಸ್ ಕಾರ್ಯಕರ್ತರು ಪುರಸಭೆ ಚುನಾವಣೆಯಲ್ಲಿಯೂ ಮೈತ್ರಿ ಮುಂದುವರಿದರೆ ಒಂದಷ್ಟು ಸ್ಥಾನ ಗೆಲ್ಲಬಹುದೆಂಬ ನಿರೀಕ್ಷೆಯಲ್ಲಿದ್ದರು. ಆದರೆ, ಅದು ಫಲ ನೀಡದ ಕಾರಣ ಏಕಾಂಗಿಯಾಗಿ ಸ್ಪರ್ಧಿಸಬೇಕಾಗಿದೆ. ಮೂರು ಪಕ್ಷಗಳಲ್ಲಿ ಅಭ್ಯರ್ಥಿಗಳ ಅಂತಿಮಗೊಳ್ಳದಿದ್ದರೂ ಆಕಾಂಕ್ಷಿಗಳು ಮಾತ್ರ ತಮ್ಮ ವಾರ್ಡ್‌ಗಳಲ್ಲಿ ಪ್ರಚಾರ ಶುರು ಮಾಡಿಬಿಟ್ಟಿದ್ದಾರೆ. ತಮ್ಮ ಪಕ್ಷ ಟಿಕೆಟ್ ನೀಡಿದರೆ ಸರಿ ಇಲ್ಲದಿದ್ದರೆ ಬಂಡಾಯವಾಗಿಯಾದರೂ ಸರಿ ನಿಂತು ತಮ್ಮ ಅಸ್ತಿತ್ವವನ್ನು ತೋರಿಸಲು ಪಣ ತೊಟ್ಟಿದ್ದಾರೆ.
ಪುರಸಭೆ ಅಧಿಕಾರಕ್ಕೆ ಬಂದ ದಿನದಿಂದ ಕಾಂಗ್ರೆಸ್ ಭದ್ರಕೋಟೆಯಾಗಿರುವ ಪುರಸಭೆ ಆಡಳಿತವನ್ನು ಕಾಂಗ್ರೆಸ್ ಇನ್ನು ಭದ್ರಪಡಿಸಿಕೊಳ್ಳಲು ಕಸರತ್ತು ಆರಂಭಿಸಿದೆ. ಈ ಹಿಂದೆ 23 ವಾರ್ಡ್‌ಗಳಿದ್ದ ಪುರಸಭೆ ಈಗ 27ಕ್ಕೆ ಏರಿಕೆಯಾಗಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳ ಆಯ್ಕೆ ಲೆಕ್ಕಾಚಾರ ಪ್ರಾರಂಭವಾಗಿದೆ.
ಪುರಸಭೆ 23 ಸದಸ್ಯರ ಪೈಕಿ ಕಾಂಗ್ರೆಸ್ 15, ಜೆಡಿಎಸ್ 5, ಬಿಜೆಪಿ 2 ಪಕ್ಷೇತರ ಅಭ್ಯರ್ಥಿ 1 ಸ್ಥಾನಗಳಿಸಿದ್ದು, ಕಾಂಗ್ರೆಸ್ ಪಕ್ಷದವರು ಆಡಳಿತ ನಡೆಸಿದ್ದರು. ಪಟ್ಟಣದಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ನೇತೃತ್ವದಲ್ಲಿ ಡಬಲ್ರಸ್ತೆ, ಚರಂಡಿ, ರಸ್ತೆಗಳ ಅಭಿವೃದ್ಧಿ, ನೂತನ ಸಾರ್ವಜನಿಕ ಆಸ್ಪತ್ರೆ ಹೀಗೆ ಹಲವು ಅಭಿವೃದ್ಧಿ ಯೋಜನೆಗಳನ್ನು ಪಟ್ಟಣದಲ್ಲಿ ಮಾಡಲಾಗಿದೆ ಎಂದು, ಕುಡಿಯುವ ನೀರಿನ ಸಮಸ್ಯೆಗೆ ಕೊಳವೆಬಾವಿ ಕೊರೆಯಿಸಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ ರಂಗಮಂದಿರ, ನೂತನ ಪುರಸಭೆ ಕಚೇರಿ ಕಟ್ಟಡ, ಬಸ್‌ನಿಲ್ದಾಣ, ಒಳಾಂಗಣ ಕ್ರೀಡಾಂಗಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಕಾಂಗ್ರೆಸ್ ಹೇಳಿಕೊಳ್ಳುತ್ತಿದ್ದು, ವಾರ್ಡ್‌ಗಳಲ್ಲಿ ಸ್ಪರ್ಧಿಸಲು ಪಕ್ಷದ ಟಿಕೆಟ್ಗಾಗಿ ಕಸರತ್ತು ಆರಂಭಿಸಿದ್ದಾರೆ. ಉಳಿದಂತೆ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಜಿಲ್ಲಾಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ನೇತೃತ್ವದಲ್ಲಿ ಸಜ್ಜಾಗುತ್ತಿದೆ. ಜೆಡಿಎಸ್ ಅಭ್ಯರ್ಥಿಗಳು ಕಡಿಮೆಯಾದರೂ ಕಣಕ್ಕೆ ಇಳಿಸಲು ಮುಖಂಡರಾದ ಎಂ.ಮಲ್ಲೇಶಬಾಬು ನೇತೃತ್ವದಲ್ಲಿ ತಾಲೀಮು ನಡೆಯುತ್ತಿದೆ.